ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

By Nagaraja

ಐಸಿಸ್ ಉಗ್ರರನ್ನು ನಾಮಾವಶೇಷ ಮಾಡಲು ಪಣ ತೊಟ್ಟಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತನ್ನ ಸೈನ್ಯ ಬಲವನ್ನು ಮತ್ತಷ್ಟು ಬಲಿಷ್ಠವಾಗಿಸುವಲ್ಲಿ ಕಾರ್ಯ ಮಗ್ನವಾಗಿದ್ದಾರೆ. ಇದರಂಗವಾಗಿ ಬಲಿಷ್ಠ ಯುದ್ಧ ಗಾಡಿಗಳು ರಷ್ಯಾ ಬಂದು ಸೇರಿವೆ.

Also Read: ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಈ ಸಂಬಂಧ ಮಿಲಿಟರಿ ನೆಲೆಯತ್ತ ಸ್ವತ: ತಾವೇ ಹೆಜ್ಜೆ ಇಟ್ಟಿರುವ ಪುತಿನ್ ನೂತನ ಬ್ಯಾಟ್ ಮನ್ ಮಾದರಿಯ ಯುದ್ಧ ಗಾಡಿಗಳನ್ನು ಪರಿಶೋಧನೆ ನಡೆಸಿದರು. ಇದು ಕೆಲವೇ ತಾಸಿನಲ್ಲಿ ಜಾಗತಿಕ ಮಟ್ಟದ ಗಮನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ರಷ್ಯಾ ರಕ್ಷಣಾ ವಿಭಾಗಕ್ಕೆ ಹೊಸ ಸೇರ್ಪಡೆಯಾಗಿರುವ ಝಿಲ್ ಕರಟೆಲ್ (ZiL Karatel) ಯುದ್ಧ ಗಾಡಿಗಳು 'ದಿ ಪನಿಷರ್' ಎಂದು ಹೆಸರಿಸಲ್ಪಟ್ಟಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ಬ್ಯಾಟ್ ಮನ್ ಯುದ್ಧ ಗಾಡಿಗಳಿಗೆ ಹೋಲುವ ದಿ ಪನಿಷರ್ ಅಮೆರಿಕದ ಬಲಿಷ್ಠ ವಾಹನಗಳಿಗೆ ಸವಾಲಾಗಿ ನಿಂತಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ಮೊಸ್ಕೋದಲ್ಲಿ ನಡೆದ ರಹಸ್ಯ ಕಾರ್ಯಕ್ರಮದಲ್ಲಿ ರಷ್ಯಾ ಫೆಡರಲ್ ಸೆಕ್ಯೂರಿಟಿ ಸರ್ವಿಸ್‌ಗೆ (ಎಫ್‌ಎಸ್‌ಬಿ) ಬಂದು ಸೇರಿದ ಬಲಿಷ್ಠ ಆತಿಥಿಯನ್ನು ಪುತಿನ್ ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡರು.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ಉನ್ನತ ತಂತ್ರಜ್ಞಾನವನ್ನು ಒಳಗೊಂಡಿರುವ ಶಸ್ತ್ರ ಸಜ್ಜಿತ ( cutting-edge ZiL Karatel armored car) ಯುದ್ಧ ವಾಹನ ಇದಾಗಿದ್ದು, ಬ್ಯಾಟ್ ಮನ್ ಸಿನೆಮಾ ಕಥಾ ಸರಣಿಯಲ್ಲಿ ಕಂಡುಬಂದಿರುವ ಗಾಡಿಗೆ ಹೋಲುತ್ತಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

'ವಿ' ಆಕಾರದ ಗರಿಷ್ಠ ಭದ್ರತೆಯ ದೇಹ ಶೈಲಿಯನ್ನು ಮೈಗೂಡಿಸಿ ಬಂದಿರುವ ಈ ಯುದ್ಧ ವಾಹನದಲ್ಲಿ 10 ಮಂದಿ ಸೈನಿಕರಿಗೆ ಪ್ರಯಾಣಿಸಬಹುದಾಗಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ವಿಶೇಷ ಕಾರ್ಯಾಚರಣೆಗಳಿಗಾಗಿ ಮಾತ್ರ ಇದನ್ನು ನಿಯೋಜಿಸಲಾಗುವುದು ಎಂಬ ಮಾಹಿತಿಯು ರಷ್ಯಾ ಉನ್ನತ ವಲಯಗಳಿಂದ ಮಾಹಿತಿಗಳು ಬಂದಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ಕ್ಲಾಸ್ 6ಎ ರಕ್ಷಣಾ ಕವಚ, ಶಸ್ತ್ರಾಸ್ತ್ರ ರಕ್ಷಣೆ, ಬದಿ ಹಾಗೂ ಹಿಂದಿನ ಡೋರ್ ಗಳಲ್ಲಿ ಗುಂಡಿನ ದಾಳಿಯಿಡಲು ಹಾದಿ, ರೂಫ್ ಟಾಪ್ ಗನ್ ಪಾಯಿಂಟ್, ಪ್ಯಾರಾ ಟ್ರೂಪರ್ಸ್ ಸೀಟು ಮತ್ತು ಪ್ಯಾನರಾಮಿಕ್ ವೀಕ್ಷಣೆಗಾಗಿ ಬ್ಯಾಕ್ ಟು ಬ್ಯಾಕ್ ಆಸನಗಳನ್ನು ಆಳವಡಿಸಲಾಗಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷರು, ಕಮಾಝ್ 4911 ಎಕ್ಸ್ ಟ್ರೀಮ್ ನಿಂದ ನಿರ್ಮಿತ ವೈಕಿಂಗ್ ಯುದ್ಧ ಗಾಡಿಯನ್ನು ಪರಿಶೋಧಿಸಿದರು. ಈ ವೇಳೆಯಲ್ಲಿ ರಷ್ಯಾ ರಕ್ಷಣಾ ಸಚಿವರು ಜೊತೆಗಿದ್ದರು.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ಒಟ್ಟಿನಲ್ಲಿ ಗ್ರೇನೆಡ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿರುವ ರಷ್ಯಾ ಶಕ್ತಿಶಾಲಿ ವಾಹನ ಎಲ್ಲರ ಗಮನಕ್ಕೆ ಪಾತ್ರವಾಗುತ್ತಿದೆ.

ಬಲಿಷ್ಠ ರಷ್ಯಾ ಬಲ ವೃದ್ಧಿಸಿದ ದೈತ್ಯ ಯುದ್ಧ ಗಾಡಿಗಳು

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

More from DriveSpark

Article Published On: Wednesday, March 2, 2016, 12:45 [IST]
English summary
Russia’s Batmobile: Putin inspects latest in cutting-edge combat vehicle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+