ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

By Nagaraja

ಇತ್ತೀಚೆಗಷ್ಟೇ ಬ್ರೆಜಿಲ್ ನಲ್ಲಿ ಸಾಗಿದ 2016 ರಿಯೊ ಒಲಿಂಪಿಕ್ಸ್ ಜಾಗತಿಕ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಹೆಮ್ಮೆಗೆ ಪಾತ್ರವಾಗಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ದೇಶದ ಮುಂಚೂಣಿಯ ವಾಹನ ತಯಾರಿಕ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ವಿಶಿಷ್ಟವಾಗಿ ವಿನ್ಯಾಸಗೊಳಿಸಿರುವ ಮಹೀಂದ್ರ ಥಾರ್ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಉಡುಗೊರೆಯಾಗಿ ನೀಡುವ ಮೂಲಕ ಸನ್ಮಾನಿಸಿದೆ.

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರೆ ಕುಸ್ತಿ 58 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಕಂಚಿನ ಪದಕಕ್ಕೆ ಅರ್ಹವಾಗಿದ್ದರು. ಇದರೊಂದಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಎರಡಕ್ಕೆ ಏರಿಕೆಯಾಗಿತ್ತು.

ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

ಒಲಿಂಪಿಕ್ ನಲ್ಲಿ ಸಿಂಧು ಹಾಗೂ ಮಲಿಕ್ ಪದಕ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಥಾರ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು. ಈಗ ತಾವು ಕೊಟ್ಟಿರುವ ಮಾತನ್ನು ಪಾಲಿಸಿದ್ದಾರೆ.

ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

ಇದಕ್ಕೂ ಮೊದಲು ಮಾಜಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಕಾರುಗಳನ್ನು ನೀಡಿರುವುದನ್ನು ನೀವಿಲ್ಲಿ ನೆನೆಪಿಸಿಕೊಳ್ಳಬಹುದು.

ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪವನ್ ಗೋನ್ಖಾ ಅರು ಪಿವಿ ಸಿಂಧು ಅವರಿಗೆ ಬೆಳ್ಳಿ ವರ್ಣದ ಮಹೀಂದ್ರ ಥಾರ್ ಕಾರನ್ನು ಹಸ್ತಾಂತರಿಸಿದ್ದಾರೆ.

ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

ಇನ್ನೊಂದೆಡೆ ಸಾಕ್ಷಿ ಅವರಿಗೆ ಕೆಂಪು ವರ್ಣದ ಥಾರ್ ಕಾರನ್ನು ಹಸ್ತಾಂತರಿಸಲಾಗಿದೆ. ಇದರ ಮುಂದುಗಡೆ ಕಂಚಿನ ಬಣ್ಣದ ಫ್ರಂಟ್ ಗ್ರಿಲ್ ಲೇಪನ ಮಾಡಲಾಗಿದೆ.

ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

ಮಹೀಂದ್ರ ಥಾರ್ ಕಾರಿನಡಿಯಲ್ಲಿರುವ 2.5 ಲೀಟರ್ ಎಂಜಿನ್ 247 ಎನ್ ಎಂ ತಿರುಗುಬಲದಲ್ಲಿ 105 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಮರ್ಥವಾಗಿದೆ. ಇದು ದೇಶದ ಯಶಸ್ವಿ ಎಸ್ ಯುವಿಗಳಲ್ಲಿ ಒಂದಾಗಿದೆ.

ದೇಶದ ಹೆಮ್ಮೆಯ ಪುತ್ರಿಯರಿಗೆ ಮಹೀಂದ್ರ ಥಾರ್ ಕೊಡುಗೆ

ಸಾಕ್ಷಿ ಮಲಿಕ್

More from DriveSpark

Article Published On: Thursday, September 8, 2016, 11:24 [IST]
English summary
Mahindra Gifts Toughest SUV To Olympic Heroes — A Promise Fulfilled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+