ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು 'ಅಂತರರಾಷ್ಟ್ರೀಯ ತಾಯಂದಿರ ದಿನ' ಎಂದು ಆಚರಿಸುವುದು ಹಲವು ದೇಶಗಳಲ್ಲಿ ಸಾಂಪ್ರದಾಯವಾಗಿದೆ. ನಮ್ಮ ದೇಶದಲ್ಲಿಯೂ ಈ ದಿನವನ್ನು ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಭೂಮಿಯ ಮೇಲೆ ತಾಯಿಗಿಂತ ದೊಡ್ಡ ದೇವರು ಮತ್ತೊಬ್ಬರು ಇಲ್ಲ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ಸತ್ಯ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

ಈ ಮಾತಿಗೆ ತಕ್ಕಂತೆ ಭಾರತದಲ್ಲಿ ಹಲವರು ತಾಯಂದಿರ ದಿನದಂದು ತಮ್ಮ ತಾಯಂದಿರಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಸಂತೋಷಪಡುತ್ತಾರೆ. ಇದರ ಭಾಗವಾಗಿ ತೆಲುಗಿನ ಜನಪ್ರಿಯ ನಟಿ 'ರಾಶಿ ಖನ್ನಾ' ತನ್ನ ತಾಯಿಗೆ ಅತ್ಯಂತ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಇದರ ಬಗ್ಗೆ ಇಲ್ಲಿ ಇನ್ನಷ್ಟು ತಿಳಿದುಕೊಳ್ಳೋಣ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿ, ಅಂತರಾಷ್ಟ್ರೀಯ ತಾಯಂದಿರ ದಿನದಂದು ತನ್ನ ತಾಯಿಗೆ ಅದ್ಭುತವಾದ ಉಡುಗೊರೆ ನೀಡಲು ಶೂಟಿಂಗ್ ಬಿಡುವು ಮಾಡಿಕೊಂಡು ಮನೆಗೆ ತೆರಳಿ ಐಷಾರಾಮಿ ಉಡುಗೊರೆಯನ್ನು ನೀಡಿದ್ದಾರೆ. ರಾಶಿ ಖನ್ನಾ ಜರ್ಮನ್ ಬ್ರಾಂಡ್ 'BMW 740li' ಕಾರನ್ನು ಖರೀದಿಸಿ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಶಿ ಖನ್ನಾ ಖರೀದಿಸಿರುವ ಈ ಕಾರಿನ ಬೆಲೆ ಅಕ್ಷರಶಃ 1.40 ಕೋಟಿ ರೂ. ಇದೆ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

ಅವರು ಬಿಎಂಡಬ್ಲ್ಯು ಕಾರನ್ನು ಖರೀದಿಸಿ ತಾಯಿಗೆ ನೀಡಿದ ಫೋಟೋಗಳನ್ನು ಸಹ ನೀವು ಇಲ್ಲಿ ಕಾಣಬಹುದು. ರಾಶಿ ಖನ್ನಾ ಕೂಡ ತನ್ನ ತಾಯಿಗೆ ಇಷ್ಟು ದೊಡ್ಡ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 'BMW 740LI' BMW 7 ಸರಣಿಯ ಅತ್ಯಂತ ಐಷಾರಾಮಿ ಪ್ರೀಮಿಯಂ ಸೆಡಾನ್‌ಗಳಲ್ಲಿ ಒಂದಾಗಿದೆ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

'BMW 740LI' ಸುಧಾರಿತ ವೈಶಿಷ್ಟ್ಯಗಳು ಮತ್ತು ಪರಿಕರಗಳೊಂದಿಗೆ ಒಂದು ಐಷಾರಾಮಿ ಸೆಡಾನ್ ಆಗಿದೆ. ಇದು ತುಂಬಾ ಆಕರ್ಷಕವಾಗಿ ಕಾಣಲು ಬೆರಗುಗೊಳಿಸುವ ಒಳಾಂಗಣವನ್ನು ಹೊಂದಿದೆ. ರಾಶಿ ಖನ್ನಾ ಖರೀದಿಸಿರುವ ಬಿಎಂಡಬ್ಲ್ಯು ಕಾರು ಕ್ಲಾಸಿಕ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿದ್ದು, ಒಳಭಾಗವು ಗಾಢ ಕಂದು ಬಣ್ಣದಲ್ಲಿ ನೋಡಲು ಆಕರ್ಷಕವಾಗಿದೆ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

'BMW 740LI' 2998cc 6 ಸಿಲಿಂಡರ್ ಇನ್‌ಲೈನ್ ಸಿಲಿಂಡರ್ ಅನ್ನು ಹೊಂದಿದೆ. ಇದು 5,500rpm ನಲ್ಲಿ 335bhp ಪವರ್ ಮತ್ತು 1,500rpm ನಲ್ಲಿ 450Nm ಟಾರ್ಕ್ ಅನ್ನು ನೀಡುತ್ತದೆ. ಆದ್ದರಿಂದ ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

BMW 740LI ಸೆಡಾನ್ 6 ಏರ್‌ಬ್ಯಾಗ್‌ಗಳು, ಟೈರ್ ಮಾನಿಟರಿಂಗ್ ಸಿಸ್ಟಮ್, ಚೈಲ್ಡ್ ಸೀಟ್ ಆಂಕರ್ ಪಾಯಿಂಟ್‌ಗಳು ಮತ್ತು ಸೀಟ್ ಬೆಲ್ಟ್ ಎಚ್ಚರಿಕೆಯಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹಾಗಾಗಿ ಇವೆಲ್ಲವೂ ವಾಹನ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

ಇನ್ನು ರಾಶಿ ಖನ್ನಾ ಸಿನಿಮಾ ಪಯಣದ ವಿಚಾರಕ್ಕೆ ಬಂದರೆ, ಊಹಲು ಗುಸಗುಸಲಾಡೆ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಮಿಲ್ಕ್ ಬ್ಯೂಟಿ ಈಗ ಟಾಪ್ ಹೀರೋಯಿನ್‌ಗಳ ಪಟ್ಟಿಗೆ ಸೇರಿ ಸಖತ್ ಬ್ಯುಸಿಯಾಗಿದ್ದಾರೆ. ಇಲ್ಲಿಯವರೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುರುವ ರಾಶಿ ಖನ್ನಾ, ಧರ್ಮ ಪ್ರೊಡಕ್ಷನ್ಸ್ 'ಯೋಧ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

 ಮದರ್ಸ್ ಡೇ ಅಂಗವಾಗಿ ತಾಯಿಗೆ ದುಬಾರಿ ಉಡುಗೊರೆ ನೀಡಿದ ನಟಿ 'ರಾಶಿ ಖನ್ನಾ'

ರಾಶಿ ಖನ್ನಾ ಅಭಿನಯದ 'ಯೋಧ' ಈ ವರ್ಷ ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಜೊತೆಗ ತೆಲುಗಿನಲ್ಲಿ ನಟ ಗೋಪಿಚಂದ್ ಅವರೊಂದಿಗೆ ನಟಿಸಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಮೂಲಕ ತೆರೆಗೆ ಬರುತ್ತಿದ್ದಾರೆ. ಇದೇ ವೇಳೆ ನಟ ನಾಗಚೈತನ್ಯ ಅವರೊಂದಿಗೆ 'ಥ್ಯಾಂಕ್ಯೂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಫರ್ಜಿ ಎಂಬ ಪ್ರಾಜೆಕ್ಟ್‌ನೊಂದಿಗೆ ರಾಶಿ ಖನ್ನಾ ಕೂಡ ಒಟಿಟಿಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

Most Read Articles

Kannada
English summary
Raashi khanna gifts a luxury sedan for her mother
Story first published: Monday, May 9, 2022, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X