ಭಾರತ್ ಜೋಡೋ ಯಾತ್ರೆ ಬಳಿಕ ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಮೋಜಿನಾಟ
ಭಾರತ್ ಜೋಡೋ ಯಾತ್ರೆಯು ಇತ್ತೀಚೆಗೆ ಭಾರತದಲ್ಲಿ ನಡೆದಂತಹ ಒಂದು ದೊಡ್ಡ ರಾಜಕೀಯ ಬೆಳವಣಿಗೆಯಾಗಿತ್ತು. ಭಾರತೀಯ ನ್ಯಾಷನಲ್ ಕಾಂಗ್ರೇಸ್ ಪಕ್ಷದ ವತಿಯಿಂದ ಆರಂಭವಾದ ಈ ಯಾತ್ರೆಯನ್ನು ಭಾರತದಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಭಾರತ್ ಜೋಡೋ ಯಾತ್ರೆಯು ಸೆಪ್ಟಂಬರ್ 7, 2022 ರಲ್ಲಿ ಕನ್ಯಾಕುಮಾರಿಯಿಂದ ಆರಂಭವಾಗಿ ಜನವರಿ 30, 2023 ರಂದು ಶ್ರೀನಗರದಲ್ಲಿ ಮುಕ್ತಾಯಗೊಂಡಿತು
ಕಾಂಗ್ರೇಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಾಳತ್ವದಲ್ಲಿ ಭಾರತ್ ಜೋಡೋ ಯಾತ್ರೆಯು ಭಾರೀ ಯಶಸ್ಸನ್ನು ಗಳಿಸಿತ್ತು. ಇದೀಗ ರಾಹುಲ್ ಗಾಂಧಿ ಜಮ್ಮು ಕಾಶ್ಮೀರದ ಗುಲ್‌ಮೋಹರ್‌ನಲ್ಲಿ ಸ್ನೋಮೊಬೈಲ್ ಓಡಿಸುತ್ತಾ ರಿಲ್ಯಾಕ್ಸ್ ಮೂಡ್‌ನಲ್ಲಿರುವ ವಿಡಿಯೋವೊಂದು ಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಸ್ನೋಮೊಬೈಲ್‌ನಲ್ಲಿ ರೈಡ್ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ವಾಹನವನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಜೊತೆಯಾಗಿ ಓಡಿಸುತ್ತಿದ್ದಾರೆ.
RaGa 💓🔥 pic.twitter.com/WUfzeK9o52
— Srinivas BV (@srinivasiyc) February 19, 2023
ನ್ಯಾಷನಲ್ ಯೂತ್ ಕಾಂಗ್ರೇಸ್‌ನ ಅಧ್ಯಕ್ಷರಾಗಿರುವ ಶ್ರೀನಿವಾಸ್ ಬಿವಿ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ವಿಡಿಯೋಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ದೊರಕುತ್ತಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ರೈಡ್ ಮಾಡುತ್ತಿದ್ದು ಮಂಜಿನ ಮೇಲೆ ಮೋಜು ರಿಲ್ಯಾಕ್ಸ್ ಮೂಡ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ನಮಗೆಲ್ಲಾ ತಿಳಿದಿರುವಂತೆ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶಗಳಂತಹ ರಾಜ್ಯದಲ್ಲಿ ಈ ಸಮಯದಲ್ಲಿ ಅತೀ ಹೆಚ್ಚು ಸ್ನೋ ಫಾಲ್ ಆಗುತ್ತಿರುತ್ತವೆ.
ಇದನ್ನು ನೋಡಲೆಂದೇ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವಾಗ ಹಿಮದ ಮೆಲೆ ಮೋಜು ಮಸ್ತಿ ಮಾಡಲು ಸ್ನೋ ಮೊಬೈಲ್‌ಗಳನ್ನು ಬಳಸುತ್ತಾರೆ. ಈ ಸಮಯದಲ್ಲೇ ಹಿಮ ಬೀಳುವ ಪ್ರದೇಶಗಳಲ್ಲಿ ಹಿಮದ ಮೇಲಿನ ಕ್ರೀಡೆಗಳಾದ ಸ್ನೋ ಸ್ಕೈಯಿಂಗ್ ಮತ್ತು ಇತರ ಚಟುವಟಿಕೆಗಳು ನಡೆಯುತ್ತವೆ. ಈ ರೀತಿಯ ಕ್ರಿಡಾ ಚಟುವಟಿಕೆಗಳನ್ನು ನಾವು ವಿವಿಧ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಮತ್ತು ಇನ್ನು ಕೆಲವರು ಖುದ್ದಾಗಿ ಅಲ್ಲಿಗೆ ಹೋಗಿ ಅದರ ಮಜವನ್ನು ಅನುಭವಿಸಿ ಬಂದಿರುತ್ತಾರೆ.

ವಿಡಿಯೋದಲ್ಲಿ ರಾಹುಲ್ ಗಾಂಧಿ ಸ್ನೋ ಮೊಬೈಲ್‌ನಲ್ಲಿ ಕುಳಿತುದ್ದಾರೆ, ನಂತರದಲ್ಲಿ ಫೋಟೋಗಳಿಗೆ ಪೋಸ್ ನೀಡಿ ಸ್ನೋ ಮೊಬೈಲನ್ನು ಚಲಾಯಿಸಲು ಆರಂಭಿಸುತ್ತಾರೆ. ವಿಡಿಯೋವನ್ನು ಗಮನಿಸಿದರೆ ರಾಹುಲ್ ಗಾಂಧಿ ಚಲಾಯಿಸುತ್ತಿರುವುದು ಪೊಲಾರಿಸ್ ವೋಯೇಜರ್ ಸರಣಿಯಲ್ಲಿ ಬರುವಂತಹ ಸ್ನೋ ಮೊಬೈಲ್. ಪೊಲಾರಿಸ್ ಕಂಪನಿಯು ಈ ರೀತಿಯ ಹಲವಾರು ವಾಹನಗಳನ್ನು ತಯಾರಿಸುವಲ್ಲಿ ಹೆಸರು ಮಾಡಿರುವಂತಹ ಕಂಪನಿ. ಹಿಮದಲ್ಲಿ ಚಲಿಸಲೆಂದೇ ATVS Quad Bike ನಂತಹ ಕೆಲವು ಜನಪ್ರಿಯ ವಾಹನಗಳನ್ನು ತಯಾರಿಸಿದ್ದಾರೆ.
ಈ ಪೊಲಾರಿಸ್ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದೆ ಇತ್ತು. ಆದರೆ ನಮ್ಮಲ್ಲಿ ಇಂತಹ ವಾಹನಗಳಿಗೆ ಅಷ್ಟೊಂದು ಬೇಡಿಕೆ ಇಲ್ಲದೇ ಇರುವ ಕಾರಣ ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿಯಬೇಕಾಯಿತು. ಇನ್ನು ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಹೇಳುವ ಪ್ರಕಾರ ರಾಹುಲ್ ಗಾಂಧಿ ಸ್ನೋ ಮೊಬೈಲನ್ನು ಸುಮಾರು 11600 ಫೀಟ್ ವರೆಗೆ ಚಲಾಯಿಸುತ್ತಿದ್ದು, ಹಿಂಬದಿ ಕೂತಿದ್ದ ಪ್ರಿಯಾಂಕ ಗಾಂಧಿ ರೈಡನ್ನು ತುಂಬಾ ಎಂಜಾಯ್ ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ ವಿಡಿಯೋದಲ್ಲಿ ಪ್ರಿಯಾಂಕ ಗಾಂಧಿ ಸ್ನೋ ಮೊಬೈಲ್ ಓಡಿಸುತ್ತಿರುವಾಗ ರಾಹುಲ್ ಗಾಂಧಿ ಹಿಂಬದಿ ಸವಾರನಾಗಿರುವುದು ಕಾಣಬಹುದು. ಇಬ್ಬರೂ ಸಹ ಅನಾಯಾಸವಾಗಿ ಸ್ನೋ ಮೊಬೈಲ್ ಓಡಿಸುತ್ತಿದ್ದು, ಇದಕ್ಕೂ ಹಿಂದೆ ಈ ರೀತಿಯ ವಾಹನಗಳನ್ನು ಓಡಿಸಿ ಅನುಭವವಿರಬಹುದೇನೋ ಎಂಬ ಭಾವನೆ ನಮ್ಮಲ್ಲಿ ಬರುತ್ತದೆ. ಇನ್ನು ಸ್ನೋ ಮೊಬೈಲ್‌ಗಳನ್ನು ಹಿಮದಲ್ಲಿ ನಿರಾಯಾಸವಾಗಿ ಚಲಿಸುವ ರೀತಿಯಲ್ಲಿ ಡಿಸೈನ್ ಮಾಡಿರುತ್ತಾರೆ. ಹಿಮದಲ್ಲಿ ವಾಹನ ಜಾರಲು ಸಹಾಯವಾಗುವ ರೀತಿಯಲ್ಲಿ ಅದರ ಕೆಳಭಾಗದ ರಚನೆಯನ್ನು ತಯಾರಿಸಿರುತ್ತಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಭಾರತದಂತಹ ದೇಶದಲ್ಲಿ ಹಿಮ ಕ್ರೀಡೆಗಳು ಅಷ್ಟೊಂದು ಪ್ರಸಿದ್ದವಾಗಿಲ್ಲ. ಅದಕ್ಕಿರುವ ಪ್ರಮುಖ ಕಾರಣವೆಂದರೆ ಇಲ್ಲಿನ ಭೌಗೋಳಿಕ ವಿನ್ಯಾಸ. ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಚಳಿಗಾಲದಲ್ಲಿ ಸ್ನೋ ಫಾಲ್ ಆಗುತ್ತವೆ. ಉಳಿದ ರಾಜ್ಯಗಳು ಸಮಶೀತೋಷ್ಣ ವಲಯದಲ್ಲಿರುವುದರಿಂದ ಆ ರಾಜ್ಯಗಳಲ್ಲಿ ಸ್ನೋ ಫಾಲ್ ಆಗಲಾರದು. ಇದೇ ಕಾರಣದಿಂದಾಗಿ ನಮ್ಮಲ್ಲಿ ಇಂತಹ ಕ್ರೀಡೆಗಳು ಪ್ರಸಿದ್ದವಾಗಿಲ್ಲ. ವಿದೇಶಗಳಲ್ಲಿ ನಾವು ಹಿಮಕ್ರೀಡೆಗಳು ಹೆಚ್ಚು ಹೆಚ್ಚು ಪ್ರಸಿದ್ದವಾಗಿದ್ದು ಅಂತಹ ದೇಶದಲ್ಲಿ ಕ್ರೀಡೆಯ ಜೊತೆಗೆ ಅದಕ್ಕೆ ಸಂಭಂಧಿಸಿದ ವಾಹನಗಳ ಮಾರುಕಟ್ಟೆಗಳು ಸಹ ಹೆಚ್ಚು ಪ್ರಸಿದ್ದವಾಗಿದೆ.


Click it and Unblock the Notifications