ದುಬಾರಿ ಬೆಲೆಯ KTM 390 ಬೈಕ್ ಮಾಲೀಕ ರಾಹುಲ್ ಗಾಂಧಿ: ಆದರೆ..

ಸಿನಿಮಾ ನಟ, ನಟಿಯರು, ರಾಜಕಾರಣಿಗಳು ಹಾಗೂ ಕ್ರೀಡಾ ತಾರೆಯರು ತಮ್ಮ ಗ್ಯಾರೇಜ್‍ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿರುತ್ತಾರೆ. ಅದರಲ್ಲೂ ರಾಜಕಾರಣಿಗಳು ದ್ವಿಚಕ್ರ ವಾಹನ ಇಟ್ಟುಕೊಳ್ಳುವುದು ತೀರಾ ಅಪರೂಪ. ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಟಿಎಂ (KTM) 390 ಬೈಕ್ ಮಾಲೀಕರಾಗಿದ್ದಾರೆ.

ಇತ್ತೀಚೆಗೆ, ರಾಹುಲ್ ಗಾಂಧಿ ಅವರು ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ಮೆಕ್ಯಾನಿಕ್ ಗಳನ್ನು ಭೇಟಿ ಮಾಡಿದ್ದರು. ಆ ವಿಡಿಯೋವನ್ನು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. 12 ನಿಮಿಷಗಳ ಅವಧಿಯ ಈ ವಿಡಿಯೋದಲ್ಲಿ ಅವರು, ಅಲ್ಲಿನ ಶ್ರಮಿಕರ ಕಷ್ಟ ಸುಖಗಳನ್ನು ಕೇಳುವ ಜೊತೆಗೆ, ಬೈಕ್ ರಿಪೇರಿ ಮಾಡಲು ಪ್ರಯತ್ನಿಸುವುದನ್ನು ದೃಶ್ಯಗಳಲ್ಲಿ ಕಾಣಬಹುದು.

ದುಬಾರಿ ಬೆಲೆಯ KTM 390 ಬೈಕ್ ಮಾಲೀಕ ರಾಹುಲ್ ಗಾಂಧಿ: ಆದರೆ..

ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು, ಪ್ರಮುಖವಾದ ವಿಷಯವೊಂದನ್ನು ಶೇರ್ ಮಾಡಿದ್ದಾರೆ. ನನ್ನ ಬಳಿಯು 'ಕೆಟಿಎಂ 390' ಬೈಕ್ ಇದೆ. ಆದರೆ, ಭದ್ರತಾ ಕಾರಣಗಳಿಂದ ಅದನ್ನು ಚಲಾಯಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಮದುವೆ ಬಗ್ಗೆಯು ರಾಹುಲ್ ಗಾಂಧಿ ಅವರಿಗೆ ಮೆಕ್ಯಾನಿಕ್ ಯೊಬ್ಬರು ಪ್ರಶ್ನೆ ಮಾಡಿದ್ದು, ಅದಕ್ಕೆ 'ಒಂದು ದಿನ' ಎಂದು ಉತ್ತರಿಸಿದ್ದಾರೆ.

ಮೆಕ್ಯಾನಿಕ್ ಗಳನ್ನು ಭೇಟಿ ಮಾಡಿದ್ದ ವಿಡಿಯೋ ಕುರಿತು ಸ್ವತಃ ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ ಅವರು, 'ಸೂಪರ್ ಮೆಕ್ಯಾನಿಕ್ ಗಳ ಸಾಧನೆ ದೇಶದ ಪ್ರಗತಿಗೆ ಕಾರಣವಾಗಿದೆ. ಭಾರತದ ಆಟೋಮೊಬೈಲ್ ಉದ್ಯಮವನ್ನು ಬಲಪಡಿಸಲು, ಈ ಕ್ಷೇತ್ರವನ್ನು ಸಶಕ್ತಗೊಳಿಸುವ ಅವಶ್ಯಕತೆಯಿದೆ' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ, ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತ್ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ, ಜನ ಸಾಮಾನ್ಯರೊಂದಿಗೆ ಬೆರೆತು ಸಂವಾದ ನಡೆಸುವುದು ಹೆಚ್ಚಾಗಿದೆ. ಶನಿವಾರವು ಅವರು, ಹರಿಯಾಣದ ಸೋನಿಪತ್ ಜಿಲ್ಲೆಯ ಹಳ್ಳಿಯೊಂದರ ಮಾರ್ಗವಾಗಿ ಹೋಗುತ್ತಿದ್ದಾಗ ಅಲ್ಲಿ ಗದ್ದೆಯಲ್ಲಿ ರೈತರನ್ನು ಕಂಡು ಮಾತುಕತೆ ನಡೆಸಿ, ಭತ್ತ ನಾಟಿ ಮಾಡಿ, ಟ್ರಾಕ್ಟರ್ ಓಡಿಸಿ, ಕೆಲ ಗಂಟೆ ಸಮಯ ಕಳೆದಿದ್ದರು.

ಇನ್ನು, ವಿಡಿಯೋದಲ್ಲಿ ಯಾವ ಕೆಟಿಎಂ 390 ಬೈಕ್ ಇದೆ ಎಂಬ ಮಾಹಿತಿಯನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿಲ್ಲ. ಕೆಟಿಎಂ 390 ಅಡ್ವೆಂಚರ್ ಮೋಟಾರ್ ಸೈಕಲ್ ಆಗಿದ್ದು, ಭಾರತದಲ್ಲಿ ಮಾರುಕಟ್ಟೆಯಲ್ಲಿ 390 ಸರಣಿಯಲ್ಲಿ ಅಡ್ವೆಂಚರ್ ಎಕ್ಸ್, 390 ಡ್ಯೂಕ್ ಹಾಗೂ RC 390 ಬೈಕ್ ಗಳು ಖರೀದಿಗೆ ಲಭ್ಯವಿವೆ. ಅದರಲ್ಲಿ 390 ಡ್ಯೂಕ್ ಕೈಗೆಟುಕುವ ಬೆಲೆಯನ್ನು ಹೊಂದಿದ್ದು, ರೂ. 2.97 ಲಕ್ಷ ದರಕ್ಕೆ ಸಿಗುತ್ತದೆ.

ಕೆಟಿಎಂ 390 ಡ್ಯೂಕ್ ಬೈಕ್, 373.27 ಸಿಸಿ ಫ್ಯುಯೆಲ್ ಇಂಜೆಕ್ಟೆಡ್, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, 43.5 PS ಗರಿಷ್ಠ ಪವರ್ ಹಾಗೂ 37 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಹತ್ತು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, 29 kmpl ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 10, 2023, 21:24 [IST]
English summary
Rahul gandhi ktm 390 bike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+