ಗ್ಯಾರೇಜ್‌ಗೆ ತೆರಳಿ ಬೈಕ್ ರಿಪೇರಿಗೆ ಮುಂದಾದ ಜನಪ್ರಿಯ ನಾಯಕ: ರಾಹುಲ್ ಗಾಂಧಿಯ ಈ ನಡೆಗೆ ನಿಮ್ಮ ಅನಿಸಿಕೆ?
ಭಾರತದ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಅವರ ಪ್ರತೀ ಚಟುವಟಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸದ್ದು ಉಂಟು ಮಾಡುತ್ತಾ ಇರುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಅವರು ಬೈಕ್ ಗ್ಯಾರೇಜ್ ಒಂದಕ್ಕೆ ಭೆಟಿ ನೀಡಿದ್ದರು.
ದೆಹಲಿಯ ಬೈಕ್ ಗ್ಯಾರೇಜ್‌ಗೆ ಭೇಟಿ ನೀಡಿ ಅಲ್ಲಿ ಕುಳಿತು, ಬೈಕ್ ಮೆಕ್ಯಾನಿಕ್‌ಗಳ ಜೊತೆ ಸಂವಾದವನ್ನು ನಡೆಸಿದ್ದಾರೆ. ಅಷ್ಟು ಮಾತ್ರವಲ್ಲದೇ ಹಾಳಾದ ಬೈಕ್ ಅನ್ನು ಸರಿ ಮಾಡಲು ಸಹ ಪ್ರಯತ್ನಿಸಿದ್ದಾರೆ. ಇದಕ್ಕೆ ಸಂಭಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವುಗಳಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆಯನ್ನು ಮುಂದುವರೆಸುತ್ತಿದ್ದು ಅದರ ಒಂದು ಭಾಗವಾಗಿ ಒಂದು ದಿನ ಬೈಕ್ ಮೆಕ್ಯಾನಿಕ್‌ಗಳ ಜೊತೆ ಎಂಬ ಕಾನ್ಸೆಪ್ಟ್‌ನಲ್ಲಿ ಈ ಕೆಲಸವನ್ನು ಮಾಡಿದ್ದಾರೆ. ತಾವೇ ಖುದ್ದಾಗಿ ಬೈಕ್ ಮೆಕ್ಯಾನಿಕ್ ಶಾಪ್ ಗೆ ಭೇಟಿ ನೀಡಿ ಅವರ ಜೊತೆ ಸಮಯ ನೀಡಿ, ಅವರ ಸಮಸ್ಯೆಗಳನ್ನು ರಾಹುಲ್ ಗಾಂಧಿ ಆಲಿಸಿದ್ದಾರೆ.
ಇನ್ನು ಈ ಫೋಟೋಗಳನ್ನು ಭಾರತೀಯ ಕಾಂಗ್ರೇಸ್ ಪಾರ್ಟಿಯು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು ಅದರ ಕೆಳಗೆ ಆಕರ್ಷಕ ತಲೆಬರಹವನ್ನು ಕೊಟ್ಟಿದ್ದಾರೆ. "ಈ ಕೈಗಳು ಭಾರತವನ್ನು ನಿರ್ಮಿಸುತ್ತಿದೆ. ಇವರ ಬಟ್ಟೆಯಲ್ಲಿರುವ ಗ್ರೀಸ್ ನಮ್ಮ ಹಿರಿಮೆಯ ಸಂಕೇತ. ಕೇವಲ ಒಬ್ಬ ಜನನಾಯಕ ಮಾತ್ರ ಇದೆಲ್ಲವನ್ನು ಪ್ರೋತ್ಸಾಹಿಸಲು ಸಾಧ್ಯ ಎಂದು ಬರೆದು ಆ ಟ್ವೀಟ್‌ನಲ್ಲಿ ರಾಹುಲ್ ಗಾಂಧಿಯನ್ನು ಟ್ಯಾಗ್ ಮಾಡಿದ್ದಾರೆ.
ಇನ್ನು ಭಾರತ್ ಜೋಡೋ ಯಾತ್ರೆಯ ಮೊದಲ ಅಧ್ಯಾಯ ಮುಗಿದ ನಂತರ ರಾಹುಲ್ ಗಾಂಧಿ ಈ ರೀತಿ ಸಾಮಾನ್ಯ ಜನರೊಂದಿಗೆ ತಮ್ಮ ಕಾಲವನ್ನು ಕಳೆದು ಅವರ ಅಹವಾಲುಗಳನ್ನು ಆಲಿಸಿ ಅದನ್ನು ಪರಿಹರಿಸಲು ತಕ್ಕ ಕ್ರಮಗಳನ್ನು ಕೈಗೊಳ್ಳುವಂತೆ ಬಿಜೆಪಿ ಸರ್ಕಾರವನ್ನು ಎಚ್ಚರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಕೆಲ ಸಮಯಗಳ ಹಿಂದಷ್ಟೇ ರಾಹುಲ್ ಗಾಂಧಿ ಚಂಢೀಘಡದಲ್ಲಿ ಇದೇ ರೀತಿ ಸಂವಾದವೊಂದನ್ನು ನಡೆಸಿದ್ದರು. ಅದರಲ್ಲಿ ಲಾರೀ ಡ್ರೈವರ್‌ಗಳ ಜೊತೆ ತಮ್ಮ ಸಮಯವನ್ನು ವ್ಯಯಿಸಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಅವರೊಂದಿಗೆ ಕೊಂಚ ದೂರ ಪ್ರಯಾಣವನ್ನು ಸಹ ಮಾಡಿದ್ದರು. ಇದೂ ಸಹ ಭಾರೀ ಸುದ್ದಿಯಾಗಿತ್ತು.
ಇನ್ನು ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಲ್ಲಿ ಹಲವರು ರಾಹುಲ್ ಗಾಂಧಿಯ ಈ ಕಾರ್ಯಕ್ಕರ ಉತ್ತಮ ಶ್ಲಾಘನೆ ವ್ಯಕ್ತಪಡಿಸಿದರೆ ಇನ್ನು ಹಲವರು ಇದು ರಾಹುಲ್ ಗಾಂಧಿಯವರ ಉಪಾಯ. ಮುಂದಿನ ಚುನಾವಣೆಯಲ್ಲಿ ಓಟ್ ಗಳಿಸಲು ಈ ನಾಟಕಗಳನ್ನು ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications