ರೆಸ್ಟೋರೆಂಟ್‌ನಂತೆ ಮಾಡಿಫೈಗೊಂಡ ರೈಲು ಬೋಗಿ
ಹಳೆಯ ರೈಲು ಬೋಗಿಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೆಲವು ದಿನಗಳ ಹಿಂದೆ ರೈಲು ಬೋಗಿಗಳನ್ನು ಕರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕ್ವಾರಂಟೈನ್ ಕೇಂದ್ರಗಳಂತೆ ಸಿದ್ಧಪಡಿಸಲಾಗಿತ್ತು.

ಇದು ಹೊರ ರಾಜ್ಯದ ಕಥೆಯಾದರೆ ಈಗ ಮೈಸೂರಿನ ರೈಲು ಮ್ಯೂಸಿಯಂನಲ್ಲಿರುವ ರೈಲು ಬೋಗಿಯನ್ನು ಸಣ್ಣ ರೆಸ್ಟೋರೆಂಟ್‌ನ ರೀತಿಯಲ್ಲಿ ಸಿದ್ದಪಡಿಸಲಾಗಿದೆ. ಕಸ್ಟಮೈಸ್ ಮಾಡಲಾದ ಈ ಬೋಗಿಯನ್ನು ಸಾರ್ವಜನಿಕರಿಗಾಗಿ ತೆರೆಯಲಾಗಿದೆ. ಈ ರೈಲು ಬೋಗಿಗೆ ಒಳಗಿನಿಂದ ಹಾಗೂ ಹೊರಗಿನಿಂದ ಹೊಸ ಲುಕ್ ನೀಡಲಾಗಿದೆ.

ಈ ಸಣ್ಣ ರೆಸ್ಟೋರೆಂಟ್‌ನಲ್ಲಿ 20 ಜನರು ಕೂರಬಹುದು. ಗಮನಿಸಬೇಕಾದ ಸಂಗತಿಯೆಂದರೆ ಈ ರೆಸ್ಟೋರೆಂಟ್ ಅನ್ನು ನೋ ಪ್ರಾಫಿಟ್, ನೋ ಗೇನ್ ಮಾದರಿಯಲ್ಲಿ ನಡೆಸಲಾಗುವುದು. ಅಂದರೆ ಈ ರೆಸ್ಟೋರೆಂಟ್‌ನಿಂದ ಯಾವುದೇ ಲಾಭವಾಗಲಿ ನಷ್ಟವಾಗಲಿ ಉಂಟಾಗುವುದಿಲ್ಲ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ರೈಲು ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಹೊಸ ಅನುಭವವನ್ನು ನೀಡಲು ಈ ರೆಸ್ಟೋರೆಂಟ್ ಅನ್ನು ಸಿದ್ಧಪಡಿಸಲಾಗಿದೆ. ಹೊರಗಿನಿಂದ ಸಾಮಾನ್ಯ ಬೋಗಿಯಂತೆ ಕಂಡು ಬರುವ ಈ ಬೋಗಿಗೆ ರೈಲ್ ಕೋಚ್ ಕೆಫೆ ಎಂಬ ಹೆಸರನ್ನಿಡಲಾಗಿದೆ.

ಕನಿಷ್ಟ ವಿನ್ಯಾಸವನ್ನು ಹೊಂದಿರುವ ಈ ಬೋಗಿಯಲ್ಲಿ ಆಕರ್ಷಕವಾದ ದೀಪ, ಫ್ಯಾನ್ ಹಾಗೂ ಎಸಿಗಳನ್ನು ಅಳವಡಿಸಲಾಗಿದೆ. ಒಂದು ಬದಿಯಲ್ಲಿ ಡೆಸ್ಕ್‌ಗಳನ್ನಿಡಲಾಗಿದ್ದು, ಟೇಬಲ್‌ಗಳನ್ನು ಕೊನೆಯವರೆಗೆ ಜೋಡಿಸಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರೈಲು ಬೋಗಿಯಲ್ಲಿರುವ ಮೆಟ್ಟಿಲುಗಳಿಂದ ಹೊರ ಭಾಗವನ್ನು ಪ್ರವೇಶಿಸಬಹುದು. ಈ ಮೆಟ್ಟಿಲುಗಳು ತುಸು ಜಾಸ್ತಿ ಎನಿಸುವಷ್ಟು ಉದ್ದವಾಗಿವೆ. ಇವುಗಳಿಂದಾಗಿ ಈ ಬೋಗಿ ರೈಲು ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಆಕರ್ಷನೀಯ ಕೇಂದ್ರವಾಗಿ ಮಾರ್ಪಟ್ಟಿದೆ.

ಮೊದಲೇ ಹೇಳಿದ ಹಾಗೆ ಕರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಿಗೆ ಕೊರತೆ ಉಂಟಾಗಿರುವ ಕಾರಣ ದೇಶಾದ್ಯಂತ ಸುಮಾರು 20,000 ರೈಲು ಬೋಗಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲು ಸರ್ಕಾರ ನಿರ್ಧರಿಸಿದೆ. ಕರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಅವುಗಳನ್ನು ಬಳಸಲಾಗುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ರೈಲು ಬೋಗಿಗಳನ್ನು ದೇಶದ ಅನೇಕ ನಗರಗಳಲ್ಲಿ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲಾಗುತ್ತಿದೆ. ಈ ಕಾರಣಕ್ಕೆ ಬೋಗಿಗಳನ್ನು ಸೋಂಕಿತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

ಒಂದು ಬದಿಯಲ್ಲಿರುವ ಹಾಸಿಗೆಗಳನ್ನು ತೆಗೆದು ಹಾಕಿ ವಾಶ್‌ರೂಮ್‌ಗಳನ್ನು ನಿರ್ಮಿಸಲಾಗಿದೆ. ಇದೇ ರೀತಿಯಲ್ಲಿ ರೈಲು ಬೋಗಿಗಳನ್ನು ಭಾರತ ಹಾಗೂ ಪ್ರಪಂಚದ ವಿವಿಧ ದೇಶಗಳಲ್ಲಿ ಹಲವುರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.


Click it and Unblock the Notifications