ರೈನ್‌ಫಾರೆಸ್ಟ್ ಸವಾಲು ಸ್ವೀಕರಿಸಲು ನೀವು ರೆಡಿನಾ?

By Nagaraja

ಎಲ್ಲ ಫೋರ್ ವೀಲ್ ಡ್ರೈವ್ ವಾಹನ ಪ್ರೇಮಿಗಳಿಗೆ ಸುವರ್ಣಾವಕಾಶವೊದಗಿ ಬಂದಿದ್ದು, ಈ ಮುಂಗಾರು ಮಳೆ ಅವಧಿಯಲ್ಲಿ 2014 ವರ್ಷಾರಣ್ಯ ಸವಾಲು (Rainforest Challenge) ಸ್ವೀಕರಿಸಲು ಸಿದ್ಧರಾಗಿರಿ. ಇದೇ ಮೊದಲ ಬಾರಿಗೆ ರೈನ್ ಫಾರೆಸ್ಟ್ ಚಾಲೆಂಜ್ ಭಾರತದಲ್ಲಿ ಆಯೋಜನೆಯಾಗುತ್ತಿರುವುದು ವಾಹನ ಪ್ರೇಮಿಗಳಲ್ಲಿ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.

ಜಗತ್ತಿನಲ್ಲೇ ಅತ್ಯಂತ ಕಠಿಣ ಹಾಗೂ ಅತ್ಯಂತ ಸಾಹಸ ಭರಿತ 4x4 ಚಾಲೆಂಜ್‌ನಲ್ಲಿ ವರ್ಷಾರಣ್ಯ ಚಾಲೆಂಜ್ ಪರಿಗಣಿಸಲಾಗಿದ್ದು, ನಮ್ಮ ದೇಶಕ್ಕೆ ಇದೇ ಮೊದಲ ಬಾರಿಗೆ ಪ್ರವೇಶ ಪಡೆದಿದೆ.

ರೈನ್‌ಫಾರೆಸ್ಟ್ ಚಾಲೆಂಜ್ ಇಂಡಿಯಾ 2014

ಆಗಸ್ಟ್ 8ರಿಂದ ಆಗಸ್ಟ್ 14ರ ವರೆಗೆ ಗೋವಾದಲ್ಲಿ ರೈನ್ ಫಾರೆಸ್ಟ್ ಚಾಲೆಂಜ್ ಆಯೋಜನೆಯಾಗಲಿದೆ. ರೈನ್‌ಫಾರೆಸ್ಟ್ ಚಾಲೆಂಜ್ (ಆರ್‌ಎಫ್‌ಸಿ) ಅಂತರಾಷ್ಟ್ರೀಯ ಪ್ರತಿನಿಧಿಗಳಾಗಿರುವ ಕೌಗಾರ್ ಮೋಟಾರುಸ್ಪೋರ್ಟ್ ಇದನ್ನು ಆಯೋಜಿಸುತ್ತಿದ್ದು, ಈ ಸಂಬಂಧ ಫೆಡರೇಷನ್ ಆಫ್ ಮೋಟಾರು ಸ್ಪೋರ್ಟ್ಸ್ ಆಫ್ ಇಂಡಿಯಾದಲ್ಲಿ (ಎಫ್‌ಎಂಎಸ್‌ಸಿಐ) ದಾಖಲಿಸಿಕೊಂಡಿದೆ.

ರೈನ್‌ಫಾರೆಸ್ಟ್ ಚಾಲೆಂಜ್ ಇಂಡಿಯಾ 2014

ಈ ಬಾರಿ ಒಟ್ಟು ಆರು ದಿನಗಳಲ್ಲಾಗಿ ನಡೆಯಲಿರುವ ಈ ಆಫ್ ರೋಡ್ ಈವೆಂಟ್ 4 ಸ್ಟೇಜ್‌ಗಳಾಗಿ ವಿಂಗಡಿಸಲಾಗಿದೆ. ಸ್ಪರ್ಧಾಳುಗಳು ದಕ್ಷಿಣ ಗೋವಾದಿಂದ ಉತ್ತರದ ವರೆಗೆ ಒಟ್ಟು 250 ಕೀ.ಮೀ. ದೂರವನ್ನು ಕ್ರಮಿಸಲಿದ್ದಾರೆ. ಈ ವೇಳೆ ಸಾಹಸ ಭರಿತ ಆಫ್ ರೋಡ್ ರಸ್ತೆಯನ್ನು ಎದುರಿಸಬೇಕಾಗುತ್ತದೆ.

ರೈನ್‌ಫಾರೆಸ್ಟ್ ಚಾಲೆಂಜ್ ಇಂಡಿಯಾ 2014

ಮೊದಲೆರಡು ದಿನ ಸಾರ್ವಜನಿಕ ಈವೆಂಟ್ ನಡೆಯಲಿದೆ. ಎಲ್ಲ 4x4 ಹಾಗೂ ಆಲ್ ಟರೈನ್ ವಾಹನಗಳಿಗೆ ಸ್ಪರ್ಧೆ ಮುಕ್ತವಾಗಿರಲಿದೆ.

ರೈನ್‌ಫಾರೆಸ್ಟ್ ಚಾಲೆಂಜ್ ಇಂಡಿಯಾ 2014

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಪ್ರವೇಶ ದರ ರು. 75,000 ಹಾಗೂ ಟೂರಿಂಗ್ ವಾಹನಗಳಿಗೆ ರು. 10,000 ಆಗಿರಲಿದೆ. ಹಾಗೆಯೇ ವಿದೇಶ ನೊಂದಾವಣಿಗಳಿಗೆ ಅನುಕ್ರಮವಾಗಿ 2,500 ಹಾಗೂ 333 ಅಮೆರಿಕನ್ ಡಾಲರ್ ಪ್ರವೇಶ ದರ ಅನ್ವಯವಾಗಲಿದೆ.

ರೈನ್‌ಫಾರೆಸ್ಟ್ ಚಾಲೆಂಜ್ ಇಂಡಿಯಾ 2014

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈನ್ ಫಾರೆಸ್ಟ್ ಇಂಡಿಯಾ ಅಧಿಕೃತ ವೆಬ್‌ಸೈಟ್ ಭೇಟಿ ಕೊಡಿರಿ.

More from DriveSpark

Article Published On: Tuesday, July 1, 2014, 8:01 [IST]
English summary
To all the 4x4 enthusiasts out there - the monsoon is here and with it comes the first edition Rain Forest Challenge India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+