ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ದೆಹಲಿಯ ನಂತರ ಈಗ ರಾಜಸ್ಥಾನ ಸರ್ಕಾರವು ವಾಹನ ಮಾಲಿನ್ಯವನ್ನು ತಡೆಗಟ್ಟಲು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ರಾಜಸ್ಥಾನದಲ್ಲಿ 15 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳನ್ನು ನಿಷೇಧಿಸಿ ಅಲ್ಲಿನ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದ ಅಡಿಯಲ್ಲಿ ರಾಜ್ಯ ರಾಜಧಾನಿ ಜೈಪುರ ಸೇರಿದಂತೆ ಐದು ಜಿಲ್ಲೆಗಳಲ್ಲಿ 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ಡೀಸೆಲ್ ವಾಹನಗಳನ್ನು ನಿಷೇಧಿಸಿದೆ.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ರಾಜಸ್ಥಾನ ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಾರ್ಚ್ 31, 2022 ರಿಂದ, ಜೈಪುರ, ಉದಯಪುರ, ಕೋಟಾ, ಅಲ್ವಾರ್ ಮತ್ತು ಜೋಧ್‌ಪುರದಲ್ಲಿ 15 ವರ್ಷಕ್ಕಿಂತ ಹಳೆಯ ವಾಣಿಜ್ಯ ಡೀಸೆಲ್ ವಾಹನಗಳನ್ನು ಅನುಮತಿಸುವುದಿಲ್ಲ. ಡೀಸೆಲ್‌ನಲ್ಲಿ ಚಲಿಸುವ 15 ವರ್ಷಗಳ ಹಳೆಯ ವಾಣಿಜ್ಯ ವಾಹನಗಳ ಕಾರ್ಯಾಚರಣೆಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ಉದಯಪುರ ಮತ್ತು ಜೋಧ್‌ಪುರದಲ್ಲಿ ನೋಂದಾಯಿಸಲಾದ 15 ವರ್ಷ ಹಳೆಯ ವಾಣಿಜ್ಯ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡುವುದಿಲ್ಲ. ಅಂತಹ ವಾಹನ ಹೊಂದಿರುವವರು ವಾಹನ ಚಲಾಯಿಸಲು ಜಿಲ್ಲಾ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಇದಾದ ಬಳಿಕವಷ್ಟೇ ಹಳೆಯ ವಾಣಿಜ್ಯ ವಾಹನಗಳನ್ನು ಆಯಾ ಜಿಲ್ಲೆಗಳಲ್ಲಿ ಓಡಿಸಬಹುದು.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ಈ ಹಿಂದೆ ದೆಹಲಿ ಸರ್ಕಾರವು ವಾಹನ ಮಾಲಿನ್ಯವನ್ನು ತಡೆಯಲು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿತ್ತು. ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳನ್ನು ಓಡಿಸುವುದನ್ನು ಈಗಾಗಲೇ ನಿಷೇಧಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಸೂಚನೆ ಮೇರೆಗೆ ದೆಹಲಿ ಸಾರಿಗೆ ಇಲಾಖೆ ಈ ನಿಯಮವನ್ನು ಜಾರಿಗೆ ತಂದಿದೆ.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ದೆಹಲಿ ಸಾರಿಗೆ ಇಲಾಖೆಯು ಅಂತಹ ವಾಹನಗಳನ್ನು ದೆಹಲಿಯ ಹೊರಗೆ ಓಡಿಸಲು NOC ಅನುಮತಿ ನೀಡುತ್ತಿದೆ, ಅಲ್ಲಿ ಇಂತಹ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ. ಕೇಂದ್ರ ಸರ್ಕಾರದ ವಾಹನ ಜಂಕ್ ನೀತಿಯಡಿ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಜಂಕ್‌ನಲ್ಲಿ ನೀಡಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದೆ.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ಮರು-ನೋಂದಣಿ ಶುಲ್ಕ ಏಪ್ರಿಲ್‌ನಿಂದ ಹೆಚ್ಚಳ

ಏಪ್ರಿಲ್ 1, 2022 ರಿಂದ, ಕೇಂದ್ರ ಸರ್ಕಾರವು 15 ವರ್ಷಕ್ಕಿಂತ ಹಳೆಯದಾದ ಖಾಸಗಿ ಮತ್ತು ವಾಣಿಜ್ಯ ವಾಹನಗಳ ಮರುನೋಂದಣಿ ಶುಲ್ಕವನ್ನು ಹೆಚ್ಚಿಸಲಿದೆ. ಈಗ 15 ವರ್ಷಕ್ಕಿಂತ ಹಳೆಯ ವಾಹನಗಳ ಮರು ನೋಂದಣಿಗೆ ಎಂಟು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಈ ನೀತಿಯು ದೆಹಲಿಯ ವಾಹನ ಮಾಲೀಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೆಹಲಿ NCR ನಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳನ್ನು ಓಡಿಸುವುದನ್ನು ಈಗಾಗಲೇ ನಿಷೇಧಿಸಲಾಗಿದೆ.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ಹೊಸ ನಿಯಮಗಳ ಪ್ರಕಾರ 15 ವರ್ಷ ಮೇಲ್ಪಟ್ಟ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕವನ್ನು 300 ರೂ.ನಿಂದ 1000 ರೂ.ಗೆ ಹೆಚ್ಚಿಸಲಾಗಿದೆ. ಆದರೆ, 15 ವರ್ಷಕ್ಕಿಂತ ಹಳೆಯದಾದ ಕಾರುಗಳಿಗೆ ಈಗ 5,000 ರೂಪಾಯಿಗಳ ನೋಂದಣಿ ನವೀಕರಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದೇ ರೀತಿ, 15 ವರ್ಷಕ್ಕಿಂತ ಹಳೆಯದಾದ ಬಸ್ ಅಥವಾ ಟ್ರಕ್‌ಗಳಂತಹ ಸಾರ್ವಜನಿಕ ಮತ್ತು ವಾಣಿಜ್ಯ ವಾಹನಗಳಿಗೆ ನೋಂದಣಿ ನವೀಕರಣ ಶುಲ್ಕವನ್ನು 10,000 ರಿಂದ 12,500 ರೂ.ವರೆಗೆ ನಿಗದಿಪಡಿಸಲಾಗಿದೆ.

ರಾಜಸ್ಥಾನದಲ್ಲಿ ಮಾರ್ಚ್ 31ರ ನಂತರ ಈ ವಾಹನಗಳನ್ನು ಬಳಸಂದತೆ ಸರ್ಕಾರ ಆದೇಶ

ವಾಣಿಜ್ಯ ವಾಹನಗಳಿಗೆ 8 ವರ್ಷಗಳಿಗೆ ಒಮ್ಮೆ ಫಿಟ್‌ನೆಸ್ ಪ್ರಮಾಣ ನವೀಕರಸಬೇಕು ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ತಿಳಿಸಿದೆ. ಇನ್ನು ಖಾಸಗಿ ವಾಹನಗಳ ನೋಂದಣಿ ನವೀಕರಣದಲ್ಲಿ ವಿಳಂಬವಾದರೆ ಪ್ರತಿ ತಿಂಗಳೂ 300ರೂ. ಮತ್ತು ವಾಣಿಜ್ಯ ವಾಹನಗಳಿಗೆ 500 ರೂಪಾಯಿ ದಂಡಕ್ಕೆ ಆಹ್ವಾನ ನೀಡಲಿದೆ. ಹಾಗೆಯೇ ವಾಣಿಜ್ಯ ವಾಹನಗಳ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಣ ವಿಳಂಬವಾದರೆ ಪ್ರತಿ ದಿನ 50ರೂ. ದಂಡ ಬೀಳಲಿದೆ. ಮತ್ತೊಂದೆಡೆ ಆಮದು ಮಾಡಿದ ಬೈಕ್‌ಗಳು ಮತ್ತು ಕಾರುಗಳ ಮರು-ನೋಂದಣಿ ಶುಲ್ಕವು ಈಗ ದುಬಾರಿಯಾಗಲಿದೆ. ಇಂತಹ ದ್ವಿಚಕ್ರ ವಾಹನಗಳಿಗೆ 10 ಸಾವಿರ ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 40 ಸಾವಿರ ರೂ. ನವೀಕರಣ ಶುಲ್ಕ ನಿಗದಿಪಡಿಸಲಾಗಿದೆ.

More from DriveSpark

Article Published On: Thursday, March 17, 2022, 17:00 [IST]
English summary
Rajasthan bans 15 years old commercial diesel vehicles in five districts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+