Just In
Don't Miss!
- News
ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯೂಟ್ಯೂಬ್ ಲೈಕ್ ಗಿಟ್ಟಿಸಲು ಹುಚ್ಚು ಸಾಹಸಕ್ಕೆ ಕೈ ಹಾಕಿದ ಯುವಕರು
ನಿಕೋಲಸ್ ಕೇಜ್ ಅಭಿನಯದ ಜನಪ್ರಿಯ ಚಿತ್ರ ಘೋಸ್ಟ್ ರೈಡರ್. 2007ರಲ್ಲಿ ಬಿಡುಗಡೆಯಾದ ಫ್ಯಾಂಟಸಿ ಕಥಾವಸ್ತುವನ್ನು ಹೊಂದಿರುವ ಈ ಥ್ರಿಲ್ಲರ್ ಚಿತ್ರದಲ್ಲಿ ನಿಕೋಲಸ್ ಕೇಜ್ ಬೆಂಕಿಯುಗುಳುವ ಬೈಕ್, ಬೆಂಕಿಯುಗುಳುವ ಕುದುರೆ ಹಾಗೂ ಬೆಂಕಿಯುಗುಳುವ ಮನುಷ್ಯನ ಪಾತ್ರವನ್ನು ನಿರ್ವಹಿಸಿದ್ದರು.

ಈಗ ಉತ್ತರ ಭಾರತದ ರಾಜ್ಯವೊಂದರ ಕೆಲ ಯುವಕರು ತಮ್ಮ ದುಬಾರಿ ಬೆಲೆಯ ಬೈಕುಗಳಲ್ಲೂ ಇದೇ ರೀತಿ ಮಾಡಿದ್ದಾರೆ. ಇದಕ್ಕಾಗಿ ಅವರು ಬಜಾಜ್ ಪಲ್ಸರ್ 220 ಬೈಕ್ ಅನ್ನು ಬಳಸಿದ್ದಾರೆ. ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಕರನ್ನು ಸೆಳೆಯಲು ಹಾಗೂ ಚಂದಾದಾರರನ್ನು ಆಕರ್ಷಿಸಲು ಅವರು ಈ ಅತಿರೇಕದ ಕೆಲಸವನ್ನು ಮಾಡಿದ್ದಾರೆ. ಭಾರತೀಯ ಯುವಕರಲ್ಲಿ ದಿನೇ ದಿನೇ ಇಂಟರ್ ನೆಟ್ ವ್ಯಾಮೋಹ ಹೆಚ್ಚುತ್ತಿದೆ.

ರಾತ್ರೋ ರಾತ್ರಿ ಜನಪ್ರಿಯರಾಗಲು ಹಾಗೂ ಇಂಟರ್ ನೆಟ್ ನಲ್ಲಿ ಲೈಕ್ ಗಳನ್ನು ಗಿಟ್ಟಿಸಲು ಯುವಕರು ಮಾಡುತ್ತಿರುವ ಕಾರ್ಯಗಳು ಕೋಲಾಹಲವನ್ನುಂಟು ಮಾಡುತ್ತಿವೆ. ಯುವಕರು ಮಾತ್ರವಲ್ಲದೆ ವಯಸ್ಸಾದವರು ಸಹ ಈ ರೀತಿಯ ಕಾರ್ಯಗಳಿಗೆ ಮುಂದಾಗುತ್ತಿರುವುದು ನೋವಿನ ಸಂಗತಿ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಜನಪ್ರಿಯರಾಗಿ ಲೈಕ್ ಗಿಟ್ಟಿಸುವುದರ ಜೊತೆಗೆ ಹಣ ಸಂಪಾದಿಸಲು ಸಹ ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಜಸ್ಥಾನದ ಕೆಲವು ಯುವಕರು ಬೈಕ್‌ಗೆ ಬೆಂಕಿ ಇಟ್ಟು ಬೈಕ್ ಚಾಲನೆ ಮಾಡಿದ್ದಾರೆ. ಮಿಸ್ಟರ್ ಇಂಡಿಯನ್ ಹ್ಯಾಕರ್ ಎಂಬ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು ಅಪ್ ಲೋಡ್ ಮಾಡಿದೆ.

ಈ ರೀತಿಯ ಅಸುರಕ್ಷಿತ ಕಾರ್ಯಗಳಲ್ಲಿ ಭಾಗಿಯಾಗುವುದು ಕಾನೂನಿನಡಿಯಲ್ಲಿ ಅಪರಾಧ. ಬೆಂಕಿ ಹಚ್ಚಿದ ಬೈಕ್‌ಗೆ ಯುವಕರು ನೀರು ಹಾಕುವುದನ್ನು ವೀಡಿಯೊದಲ್ಲಿ ಕಾಣಬಹುದು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಈ ಕೃತ್ಯವು ಅವರಿಗೆ ಮಾತ್ರವಲ್ಲದೆ ಆ ಪ್ರದೇಶದಲ್ಲಿ ನೆಲೆಸಿರುವವರಿಗೂ ಸಹ ಅಪಾಯವನ್ನುಂಟು ಮಾಡಬಲ್ಲದು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಈ ರೀತಿಯ ಘಟನೆಗಳಲ್ಲಿ ವಾಹನಗಳು ಹೊತ್ತಿಕೊಂಡು ಉರಿಯುತ್ತವೆ.

ಯುವಕರು ಬೈಕ್‌ಗೆ ಬೆಂಕಿ ಹಚ್ಚಿ ಚಾಲನೆ ಮಾಡಿರುವ ಈ ವಿಲಕ್ಷಣ ಘಟನೆಯು ಆ ಪ್ರದೇಶದ ನಿವಾಸಿಗಳಲ್ಲಿ ಭೀತಿಯನ್ನುಂಟು ಮಾಡಿತ್ತು. ಇತ್ತೀಚಿಗೆ ಕರೋನಾ ವೈರಸ್ ಹರಡದಂತೆ ತಡೆಯಲು ಬೈಕಿಗೆ ಸೋಂಕು ನಿವಾರಕ ಸಿಂಪಡಿಸಿದಾಗ ಆ ಬೈಕಿಗೆ ಬೆಂಕಿ ತಗುಲಿತ್ತು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೈಕಿಗೆ ಬೆಂಕಿ ಹಚ್ಚುವ ಮುನ್ನ ಯುವಕರು ಬೈಕ್‌ನ ಎರಡೂ ವ್ಹೀಲ್ ಗಳ ಸುತ್ತಲೂ ಬಟ್ಟೆ ಸುತ್ತಿ, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪೆಟ್ರೋಲ್ ಬೆಂಕಿಗೆ ಬೇಗ ಆಹುತಿಯಾಗುವ ಕಾರಣಕ್ಕೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.

ಅದೃಷ್ಟವಶಾತ್ ಬೈಕಿನಲ್ಲಿ ಕುಳಿತಿದ್ದ ಯುವಕರಿಗೆ ಯಾವುದೇ ಗಾಯಗಳಾಗಿಲ್ಲ. ಬೆಂಕಿ ಉರಿಯುತ್ತಿದ್ದಂತೆ ಅವರು 10 ರಿಂದ 20 ಮೀಟರ್ ದೂರ ಬೈಕು ಸವಾರಿ ಮಾಡಿದ್ದಾರೆ. ಇದೊಂದು ಮೂರ್ಖ ಸಾಧನೆ ಎಂದು ವೀಡಿಯೊ ನೋಡಿದವರು ಕಾಮೆಂಟ್ ಮಾಡಿದ್ದಾರೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳಲ್ಲಿ ನಟಿಸುವವರು ಅಗ್ನಿ ನಿರೋಧಕ ಉಡುಪು ಹಾಗೂ ಉಪಕರಣಗಳನ್ನು ಧರಿಸಿರುತ್ತಾರೆ. ಇವುಗಳು ಅವರಿಗೆ ಸಾಕಷ್ಟು ರಕ್ಷಣೆ ನೀಡುತ್ತವೆ. ಆದರೆ ಈ ವೀಡಿಯೊದಲ್ಲಿರುವ ಯುವಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ.

ಅವರು ಸಾಮಾನ್ಯ ಜೀನ್ಸ್ ಹಾಗೂ ಟೀ ಶರ್ಟ್‌ಗಳನ್ನು ಮಾತ್ರ ಧರಿಸಿದ್ದಾರೆ. ಒಬ್ಬ ಸಾಮಾನ್ಯ ಶೂ ಧರಿಸಿದ್ದರೆ, ಮತ್ತೊಬ್ಬ ಕ್ಯಾಶುಯಲ್ ಶೂ ಧರಿಸಿದ್ದಾನೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಜನಪ್ರಿಯತೆಗಾಗಿ ಸ್ಟಂಟ್ ಮಾಡಿದ ಯುವಕರನ್ನು ಬಂಧಿಸಿದ್ದಾರೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು
ಈ ಘಟನೆಗೆ ಮುಖ್ಯ ಕಾರಣ ಯೂಟ್ಯೂಬ್‌ನಲ್ಲಿ ಜನಪ್ರಿಯತೆ ಪಡೆಯಬೇಕೆಂಬ ಹುಚ್ಚು. ಯೂಟ್ಯೂಬ್ ಮೂಲಕ ಬರುವ ಆದಾಯವನ್ನು ಪರಿಗಣಿಸಿ ಅನೇಕ ಜನರು ಇಂತಹ ವಿಲಕ್ಷಣ, ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಈ ರೀತಿಯ ಅಪಾಯಕಾರಿ ಸಾಹಸಗಳು ಕ್ಷಣ ಮಾತ್ರದಲ್ಲಿ ವ್ಯಕ್ತಿಯ ಪ್ರಾಣವನ್ನು ತೆಗೆಯಬಲ್ಲವು. ಆದರೆ ಕೆಲವರು ಪ್ರಾಣಾಪಾಯವನ್ನು ಲೆಕ್ಕಿಸದೇ ಹಣ ಹಾಗೂ ಜನಪ್ರಿಯತೆಗಾಗಿ ಈ ರೀತಿಯ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾರೆ.