Ranbir Kapoor: ಭಾರೀ ಬೆಲೆಯ 'ರೇಂಜ್ ರೋವರ್' ಖರೀದಿಸಿದ ನಟ ರಣಬೀರ್.. ಹೇಗಿದೆ ಗೊತ್ತಾ ಆಲಿಯಾ ಗಂಡನ ಕಾರು!
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತ್ನಿ ಆಲಿಯಾ ಭಟ್ (Alia Bhatt) ಲಿಪ್ಸ್ಟಿಕ್ ಹಚ್ಚುವ ವಿಚಾರವಾಗಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಇದೀಗ, ದುಬಾರಿ ಬೆಲೆಯ ಹೊಚ್ಚ ಹೊಸ ರೇಂಜ್ ರೋವರ್ (Range Rover) ಕಾರು ಖರೀದಿಸಿ, ಮತ್ತೆ ಸುದ್ದಿಯಾಗಿದ್ದಾರೆ.
ನಟ ರಣಬೀರ್ ಕಪೂರ್ ಅವರಿಗೆ ಕಾರುಗಳೆಂದರೆ ತುಂಬಾ ಇಷ್ಟವೆಂದು ಎಲ್ಲರಿಗೂ ತಿಳಿದಿರುವ ವಿಷಯ. ಬುಧವಾರ (ಆಗಸ್ಟ್ 16) ರಣಬೀರ್ ಕಪ್ಪು ಬಣ್ಣದಲ್ಲಿ ಹೊಚ್ಚ ಹೊಸ ರೇಂಜ್ ರೋವರ್ ಕಾರನ್ನು ಕೊಂಡುಕೊಂಡಿದ್ದಾರೆ. ಪೂಜೆ ಮಾಡಿಸಿ ಮನೆಗೆ ತೆಗೆದುಕೊಂಡು ಬಂದಿದ್ದು, ಪಾಪರಾಜಿಗಳು ಈ ದೃಶ್ಯಗಳನ್ನು ಸೆರೆಹಿಡಿದ್ದಾರೆ. ಅವರನ್ನು ಕಂಡು ರಣಬೀರ್ ಕಪೂರ್, ಥಂಬ್ಸ್‌ಅಪ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ರಣಬೀರ್ ಕಪೂರ್ ರೇಂಜ್ ರೋವರ್ ಕಾರಿನ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸದ್ಯ, ಭಾರತ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿ, 5 ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ, ಎಸ್ಇ, ಹೆಚ್ಎಸ್ಇ, ಆಟೋಬಯಾಗ್ರಫಿ, ಫಸ್ಟ್ ಎಡಿಷನ್ ಹಾಗೂ ಎಸ್‌ವಿ. ರೂ.2.39 - 4.17 ಕೋಟಿ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ.
ಲ್ಯಾಂಡ್ ರೋವರ್ ರೇಂಜ್ ರೋವರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಮೂರು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 3 - ಲೀಟರ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್, 400 PS ಗರಿಷ್ಠ ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 3 - ಲೀಟರ್ ಡೀಸೆಲ್ ಎಂಜಿನ್, 351 PS ಪವರ್, 700 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

4.4 - ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್, 530 PS ಗರಿಷ್ಠ ಪವರ್ ಮತ್ತು 750 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 8 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಸರಿ ಸುಮಾರು 14.01 kmpl ಮೈಲೇಜ್ ನೀಡುತ್ತದೆ.
ಈ ಕಾರು, 4, 5 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯಲಿದ್ದು, 3.7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 13.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 1600 W ಮೆರಿಡಿಯನ್ ಸೌಂಡ್ ಸಿಸ್ಟಮ್, ಅಮೆಜಾನ್ - ಅಲೆಕ್ಸಾ ಕನೆಕ್ಟಿವಿಟಿ, ಮಲ್ಟಿ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಫೋರ್ ಸ್ಪೋಕ್ ಸ್ಟೀರಿಂಗ್ ವೀಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ನಟ ರಣಬೀರ್ ಕಪೂರ್ ಅವರಂತೆ ನಮ್ರತ್ ಕೌರ್, ಆದಿತ್ಯ ರಾಯ್ ಕಪೂರ್, ಸೋನಮ್ ಕಪೂರ್, ತೆಲುಗು ನಟ ಮಹೇಶ್ ಬಾಬು, ಮಲಯಾಳಂ ನಟ ಮೋಹನ್ ಲಾಲ್, ಮಲೈಕಾ ಅರೋರಾ ಕೂಡ ರೇಂಜ್ ರೋವರ್ ಕಾರಿನ ಮಾಲೀಕರಾಗಿದ್ದಾರೆ. ರಣಬೀರ್, ಈ ಕಾರಿನೊಂದಿಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ಸ್, ಆಡಿ ಎ8ಎಲ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ಮರ್ಸಿಡಿಸ್ ಬೆಂಜ್ ಕಾರುಗಳ ಒಡೆಯರು ಆಗಿದ್ದಾರೆ.
ನಟ ರಣಬೀರ್ ಕಪೂರ್ ಅವರ ಸಿನಿಮಾ ವಿಚಾರವಾಗಿ ಮಾತನಾಡುವುದಾದರೆ, ಕಡೆಯಾಗಿ ಅವರ ನಟನೆಯ 'ತು ಜೂಥಿ ಮೈನ್ ಮಕ್ಕರ್' ತೆರೆಕಂಡಿತ್ತು. ಸದ್ಯ, ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ 'ಅನಿಮಲ್' ಸಿನಿಮಾದಲ್ಲಿ ರಣಬೀರ್ ನಟಿಸುತ್ತಿದ್ದು, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅವರ ಇತರೆ ಸಿನಿಮಾಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications