ಮಗನ ಬಳಿಕ ಬಹುಕೋಟಿ ಬೆಲೆಯ ಮರ್ಸಿಡಿಸ್ ಕಾರು ಖರೀದಿಸಿದ ಜನಪ್ರಿಯ ಬಾಲಿವುಡ್ ನಟನ ಅಮ್ಮ
ಬಾಲಿವುಡ್ ಎಂಬ ಕಲರ್‍ಫುಲ್ ದುನಿಯಾದಲ್ಲಿರುವ ನಟ, ನಟಿಯರಿಗೆ ವಿಭಿನ್ನ ಕ್ರೇಜ್‍ಗಳಿರುತ್ತದೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಂಡು ಅದರಲ್ಲಿ ಒಡಾಡುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚಿರುತ್ತದೆ.
ಸಧ್ಯ ಐಷಾರಾಮಿ Mercedes Maybach GLS600 ಕಾರು ಬಾಲಿವುಡ್ ಚಿತ್ರ ರಂಗದಲ್ಲಿ ಇತ್ತೀಚಿನ ಟ್ರೆಂಡ್ ಆಗಿದೆ. ಬಾಲಿವುಡ್ ಸಿನಿ ರಂಗದ ಹಲವಾರು ಸೆಲೆಬ್ರಿಟಿಗಳು ಈ ಕಾರನ್ನು ಖರೀದಿಸಿದ್ದಾರೆ. ಮರ್ಸಿಡಿಸ್ ಬೆಂಝ್ ಕಂಪನಿಯು Mercedes Maybach GLS600 ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ 2021 ರಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಮರ್ಸಿಡಿಸ್-ಮೇಬ್ಯಾಕ್ ಕಾರಿಗೆ ಬುಕಿಂಗ್ ಅನ್ನು ತೆರೆದ ತಕ್ಷಣ, ಅದು ಸಂಪೂರ್ಣವಾಗಿ ಬುಕ್ ಆಗುತ್ತದೆ. Mercedes-Maybach ಕಾರುಗಳ CBU ಮಾದರಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರಿಂದ, ಭಾರತದ ಮಾರುಕಟ್ಟೆಗೆ ಬರುವ ವಾಹನದ ಕೆಲವೇ ಸೀಮಿತ ಯುನಿಟ್ ಗಳಾಗಿವೆ. ಈ ಕಾರನ್ನು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಖರೀದಿಸಿದ್ದಾರೆ. ಇದೀಗ ಹಿರಿಯ ನಟಿ ನೀತು ಸಿಂಗ್ ಅವರು ಕೂಡ ಅತ್ಯಂತ ಜನಪ್ರಿಯವಾದ Mercedes-Maybach GLS600 ಕಾರನ್ನು ಖರೀದಿಸಿದ್ದಾರೆ.
ಅವರು ತಮ್ಮ ಈ ಹೊಸ ಐಷಾರಾಮಿ ಕಾರನ್ನು ವಿತರಣೆ ಪಡೆಯುವ ಚಿತ್ರಗಳು ವೈರಲ್ ಆಗಿವೆ. ಇದು ಕಪೂರ್ ಫ್ಯಾಮಿಲಿಯ ಒಡೆತನದ ಮೊದಲ ಮೇಬ್ಯಾಕ್ ಮಾಡೆಲ್ ಅಲ್ಲ. ಅವರ ಮಗ ರಣಬೀರ್ ಕಪೂರ್ ಕೂಡ Mercedes-AMG G63 SUV ಅನ್ನು ಹೊಂದಿದ್ದಾರೆ. ಇನ್ನು ಬಾಲಿವುಡ್ ಚಿತ್ರರಂಗದಲ್ಲಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ದಂಪತಿಗಳು ಒಂದೇ ಕ್ಯಾವನ್‌ಸೈಟ್ ಬ್ಲೂ ಶೇಡ್‌ನಲ್ಲಿ ಅಲ್ಟ್ರಾ ಬಣ್ಣದ Mercedes Maybach GLS600 ಕಾರನ್ನು ಹೊಂದಿದ್ದಾರೆ.
ಮರ್ಸಿಡಿಸ್-ಮೇಬ್ಯಾಕ್ 2021ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತು. ದೇಶಕ್ಕೆ ಆರಂಭದಲ್ಲಿ ನಿಗದಿಪಡಿಸಿದ ಎಲ್ಲಾ 50 ಯುನಿಟ್ ಗಳು ಮಾರಾಟವಾಗಿತ್ತು. ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ Mercedes Maybach GLS600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇದು ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.
ಈ Mercedes Maybach GLS600 ಕಾರಿನ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ. ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ.
ಈ Mercedes Maybach GLS600 ಕಾರಿ ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ. ಇನ್ನು ದೊಡ್ಡದಾದ ಪನೋರಮಿಕ್ ಮೂನ್‌ರೂಫ್, 12.3-ಇಂಚಿನ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, 64 ಬಣ್ಣ ಮತ್ತು ಹೆಚ್ಚಿನ ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.
ಈ ಐಷಾರಾಮಿ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ. ಈ ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.


Click it and Unblock the Notifications








