ಮರದಿಂದ ಮಾಡಿದ ಕಾರಿಗೆ ಚಿನ್ನದ ಬೆಲೆ: ಈ ಕಾರು ಹರಾಜಾದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ!
ಸಾಮಾನ್ಯವಾಗಿ ಸೆಲಬ್ರಿಟಿಗಳು ಉಪಯೋಗಿಸಿದ ಕಾರುಗಳು ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲದೇ ಐಕಾನಿಕ್ ಕಾರುಗಳು ಕೂಡ ಉತ್ತಮ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಮರದ ಸಿಟ್ರನ್ 2ಸಿವಿ ಕಾರು ದಾಖಲೆಯ ಮೊತ್ತಕ್ಕೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ದಾಖಲೆ ಮೊತ್ತಕ್ಕೆ ಮಾರಾಟವಾದ ಈ ಅಪರೂಪದ ಕಾರಿನ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಈ ಅಪರೂಪದ ಮರದಿಂದ ಮಾಡಿದ ಸಿಟ್ರನ್ 2ಸಿವಿ ಕಾರು 2.10 ಲಕ್ಷ ಪೌಂಡ್ (ಸುಮಾರು 1.86 ಕೋಟಿ ರೂ.)ಗೆ ಹಾರಾಜಿಗನಲ್ಲಿ ಮಾರಾಟವಾಗಿದೆ. ಈ ಕಾರಿನ ಬಾಡಿಯು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಫ್ರಾನ್ಸ್ ನಲ್ಲಿ ನೋಂದಣಿಯಾಗಿರುವ ಈ ವಾಹನವು ಮರದಿಂದ ಮಾಡಲ್ಪಟ್ಟಿದೆ. ಇದನ್ನು ಸಾಮಾನ್ಯ ಕಾರಿನಂತೆ ಬಳಸಬಹುದಾಗಿದೆ. ಇದರ ವಿಶಿಷ್ಟ ವೈಶಿಷ್ಟ್ಯವೆಂದರೆ ಬಾಡಿಯ ಪ್ಯಾನೆಲ್ ಗಳು ಮತ್ತು ಚಾಸಿಸ್ ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ.

1948 ರಲ್ಲಿ ಫ್ರೆಂಚ್ ವಾಹನ ತಯಾರಕ ಕಂಪನಿಯಾದ ಸಿಟ್ರನ್ ಬಿಡುಗಡೆಮಾಡಿದ 2CV ಮಾದರಿಯ ಮರದ ಕೆತ್ತನೆಯ ಮಾದರಿಯಾಗಿದೆ. ಮರದ ಸಿಟ್ರನ್ 2CV ಮಾಡೆಲ್ ಫ್ರಾನ್ಸ್ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಅಪರೂಪದ ಕಾರು 2.10 ಲಕ್ಷ ಪೌಂಡ್‌ಗಳನ್ನು ಪಡೆದುಕೊಂಡಿದೆ, ಅಂದರೆ ಸುಮಾರು 1.86 ಕೋಟಿ ರೂ. ಆಗಿದೆ. ಇದು ಸಿಟ್ರನ್ 2CV ಮಾದರಿಯಾಗಿದೆ.
ಸಿಟ್ರನ್ 2CV ಮಾದರಿಯ ಬಾಡಿಯು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಕುತೂಹಲಕಾರಿಯಾಗಿ, ಈ ಕಾರು ಮರದಿಂದ ಮಾಡಲ್ಪಟ್ಟಿದೆ ಆದರೆ ಸಾಮಾನ್ಯ ಕಾರಿನಂತೆ ಬಳಸಬಹುದು ಮತ್ತು ಇದನ್ನು ಫ್ರಾನ್ಸ್ನಲ್ಲಿ ನೋಂದಾಯಿಸಲಾಗಿದೆ. ಪ್ಯಾರಿಸ್ ಮೂಲದ ವಿಂಟೇಜ್ ಕಾರು ಉತ್ಸಾಹಿ ಮತ್ತು ಮ್ಯೂಸಿಯಂ ಮಾಲೀಕ ಸೀನ್ ಪಾಲ್ ಫಾವಂಡ್ ಬ್ಲಾಕ್-ಫಿನಿಶ್ಡ್ ಕಾರನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.

ಹಿಂದಿನ 2016 ರಲ್ಲಿ, ಸಿಟ್ರನ್ 2CV ಮಾಡೆಲ್ ಅನ್ನು ಹರಾಜಿನಲ್ಲಿ € 1,72,800 ಗೆ ಮಾರಾಟ ಮಾಡಲಾಗಿತ್ತು. ಬಹಳ ಅಪರೂಪದ 1961 ರ ಮಾದರಿ 2CV ಸಹಾರಾ ಇಷ್ಟು ಹಣವನ್ನು ಪಡೆದುಕೊಂಡಿತು. ಹೊಸ ಹರಾಜಿನಲ್ಲಿ ಮಾರಾಟವು ಈ ದಾಖಲೆಯನ್ನೂ ಮೀರಿಸಿದೆ. ಮೈಕೆಲ್ ರೊಬಿಲಾರ್ಡ್ ಎಂಬ ವ್ಯಕ್ತಿಯಿಂದ 2CV ಮಾದರಿಯ ಬಾಡಿ ಮತ್ತು ಇತರ ಭಾಗಗಳನ್ನು ಮರದಲ್ಲಿ ಕೆತ್ತಲಾಗಿದೆ. ಕಾರಿನ ಬದಿಗಳಿಗೆ ವಾಲ್‌ನಟ್ ಮತ್ತು ಚಾಸಿಸ್‌ಗೆ ಪೇರಳೆ ಮತ್ತು ಸೇವಿನ ಮರಗಳನ್ನು ಬಳಸಲಾಗಿದೆ ಎಂದು ರಾಬಿಲಾರ್ಡ್ ಹೇಳಿದ್ದಾರೆ.
ಬಾನೆಟ್ ಮಾಡಲು ಚೆರ್ರಿ ಮರದ ಒಂದೇ ಲಾಗ್ ಅನ್ನು ಆಯ್ಕೆ ಮಾಡಲಾಗಿದೆ. ಮೈಕೆಲ್ ರೊಬಿಲಾರ್ಡ್ ಎಂಬ ವ್ಯಕ್ತಿಯಿಂದ 2CV ಬಾಡಿ ಮತ್ತು ಇತರ ಭಾಗಗಳನ್ನು ಮರದಲ್ಲಿ ಕೆತ್ತಲಾಗಿದೆ. ಕಾರಿನ ಬದಿಗಳಿಗೆ ವಾಲ್‌ನಟ್ ಮತ್ತು ಚಾಸಿಸ್‌ಗೆ ಪೇರಳೆ ಮತ್ತು ಸೇಬನ್ನು ಬಳಸಲಾಗಿದೆ ಎಂದು ರಾಬಿಲಾರ್ಡ್ ಹೇಳಿದ್ದಾರೆ. ಬಾನೆಟ್ ಮಾಡಲು ಚೆರ್ರಿ ಮರದ ಒಂದೇ ಲಾಗ್ ಅನ್ನು ಆಯ್ಕೆ ಮಾಡಲಾಗಿದೆ.

ಸಿಟ್ರನ್ 2CV ಮಾದರಿಯು ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರಿಗೆ ಪೈಪೋಟಿಯನ್ನು ನೀಡುತ್ತಿತ್ತು. ಇನ್ನು ಮರದಿಂದ ಮಾಡಲ್ಪಟ್ಟಿ ಕಾರು ಮಾದರಿಯು ಸಿಟ್ರನ್ 2CV ನಂತರ ಬಿಡುಗಡೆಗೊಳಿಸಿದ 3CV ಮಾದರಿಯಂತೆಯೇ ಕಾಣುತ್ತದೆ. ರಾಬಿಲಾರ್ಡ್ ಅವರು ಇದೇ ರೀತಿಯ ಮತ್ತೊಂದು ಯೋಜನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಗಳಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications