ಮಿಸ್ ಆಗಿ ಬೇರೆಯವರ ಕಾರು ಏರಲು ಹೋದ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ: ಮುಂದೇನಾಯ್ತು?
ನ್ಯಾಷನಲ್ ಕ್ರಶ್, ಕನ್ನಡತಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಮ್ಮಿಂಚುತ್ತಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಬಾಲಿವುಡ್, ಟಾಲಿವುಡ್, ಕಾಲಿವುಡ್ ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಎಲ್ಲೇ ಹೋದರು ಪಾಪರಾಜಿಗಳು ಹಿಂದೆ ಬಿದ್ದಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಎಡುವಟ್ಟು ಮಾಡಿದ ವೀಡಿಯೋ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ವೀಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಮುಂಬೈ ವಿಮಾನ ನಿಲ್ದಾಣದಿಂದ ತರಾತುರಿಯಲ್ಲಿ ಹೊರಗೆ ಬರುತ್ತಾರೆ. ಅವರು ಎದುರು ನಿಂತಿದ್ದ ಕಾರನ್ನು ಏರಲು ಹೋದರು.

ಆಗ ರಶ್ಮಿಕಾ ಮಂದಣ್ಣ ಜೊತೆ ಇದ್ದವರು ಆ ಕಾರು ಅಲ್ಲ ಎಂದು ಕೂಗಿದರು, ಆಗ ರಶ್ಮಿಕಾ ನಗುತ್ತಲೇ ತಮ್ಮ ಕಾರಿನ ಬಳಿ ಹೋಗಿದ್ದಾರೆ.ಮುಂಬೈನಲ್ಲಿ 'ಅನಿಮಲ್' ಸಿನಿಮಾದ ಸಕ್ಸಸ್ ಮೀಟ್ಗೆ ತಡವಾಗಿ ಬಂದ ಕಾರಣಕ್ಕೆ ತರಾತುರಿಯಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ. ರಶ್ಮಿಕಾ ಮಂದಣ್ಣ 2016ರಲ್ಲಿ ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ, ಟಾಲಿವುಡ್ ಪ್ರವೇಶಿಸಿದ ಅವರು ಕಡಿಮೆ ಅವಧಿಯಲ್ಲೇ ಟಾಪ್ ನಾಯಕಿ ಪಟ್ಟ ಗಿಟ್ಟಿಸಿಕೊಂಡರು.
ಗೀತಾ ಗೋವಿಂದಂ, ಸರಿಲೇರು ನೀಕೆವ್ವರು ಸಿನಿಮಾಗಳ ನಂತರ ಅಲ್ಲುಅರ್ಜುನ್ ನಟನೆಯ 'ಪುಷ್ಪ'ದಲ್ಲಿ ಕಾಣಿಸಿಕೊಂಡು ಪ್ಯಾನ್ ಇಂಡಿಯಾ ನಟಿಯಾಗಿಯು ಗುರುತಿಸಿಕೊಂಡಿದ್ದಾರೆ. ಅನಿಮಲ್' ಸಿನಿಮಾ ಡಿಸೆಂಬರ್ 1ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ರಶ್ಮಿಕಾ ಮಂದಣ್ಣ ಅವರು ಈ ಸಿನಿಮಾದಿಂದ ದೊಡ್ಡ ಗೆಲುವು ಪಡೆದಿದ್ದಾರೆ. ಬಾಲಿವುಡ್ನಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಐಷಾರಾಮಿ ಕಾರುಗಳ ಬಗ್ಗೆ ಹೇಳುವುದಾದರೆ, ನಟಿ ರಶ್ಮಿಕಾ ಮಂದಣ್ಣ ಸಹ ಕಳೆದ ವರ್ಷದ ಆರಂಭದಲ್ಲಿ ಹೊಸ ರೇಂಜ್ ರೋವರ್ ಎಸ್‌ಯುವಿ ಖರೀದಿಸಿದ್ದಾರೆ. ರಶ್ಮಿಕಾ ಅವರು ಖರೀದಿ ಮಾಡಿದ್ದ ಈ ಎಸ್‌ಯುವಿ, ಪೆಟ್ರೋಲ್ ಚಾಲಿತ ರೇಂಜ್ ರೋವರ್ ಸ್ಪೋರ್ಟ್‌ನ ಟಾಪ್-ಸ್ಪೆಕ್ HSE ರೂಪಾಂತರವಾಗಿದೆ.
ಇದು 2.0-ಲೀಟರ್ ನಾಲ್ಕು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದ್ದು, ಇದನ್ನು 8-ಸ್ಪೀಡ್ ಅಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಎಸ್‌ಯುವಿ 4-ವೀಲ್-ಡ್ರೈವ್ ಸಿಸ್ಟಮ್ ಅನ್ನು ಹೊಂದಿದ್ದು, ಇದರ ಎಂಜಿನ್ ಗರಿಷ್ಠ 300 Ps ಪವರ್ ಹಾಗೂ 400 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.

ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಖರೀದಿಸಿದ ಮೊದಲ ಕಾರು ಆಡಿ ಕ್ಯೂ3. 2018ರಲ್ಲಿ ಕೆಂಪು ಬಣ್ಣದ ಆಡಿ ಕ್ಯೂ3 ಅನ್ನು ಅವರು ಖರೀದಿಸಿದ್ದರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಡಿ ಕ್ಯೂ 3 ಕಾರನ್ನು ಶೋರೊಂನಿಂದ ಡೆಲಿವರಿ ಪಡೆಯುತ್ತಿದ್ದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅಲ್ಲದೆ, ಇದು ನಟಿ ರಶ್ಮಿಕಾ ಖರೀದಿಸಿದ ಮೊದಲ ಐಷಾರಾಮಿ ಕಾರು ಆಗಿತ್ತು. ಆಡಿ ಕ್ಯೂ3 ಆವೃತ್ತಿಯು 35 ಟಿಡಿಐ ಕ್ವಾಟ್ರೋ ತಂತ್ರಜ್ಞಾನವನ್ನು ಹೊಂದಿದೆ.
ನಟಿ ರಶ್ಮಿಕಾ ಮಂದಣ್ಣ ಮೂಲತಃ ಕೊಡಗು ಜಿಲ್ಲೆಯವರು. ಅಲ್ಲಿ ಅವರ ಮನೆ ಇದ್ದು, ಕಪ್ಪು ಬಣ್ಣದ ಹುಂಡೈ ಸಾಂಟಾ Fe ಕಾರನ್ನು ಹೊಂದಿದ್ದಾರೆ. ಇದನ್ನು ಅವರ ಕುಟುಂಬ ಸದಸ್ಯರು ತಮ್ಮ ಸಂಚಾರಕ್ಕೆ ಬಳಸುತ್ತಾರೆ. ಒಂದು ಕಾಲದಲ್ಲಿ ಹುಂಡೈ ಸಾಂಟಾ ಫೆ ಭಾರತದಲ್ಲಿ ಹ್ಯುಂಡೈನ ಪ್ರಮುಖ ಉತ್ಪನ್ನವಾಗಿತ್ತು ಇದು ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿತ್ತು. 2017ರಲ್ಲಿ ಮಾರುಕಟ್ಟೆಯಿಂದ ಸ್ಥಗಿತಗೊಂಡಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.


Click it and Unblock the Notifications








