ಶೋರೂಂಗೆ ಬಂದು ನ್ಯಾನೋ ಕಾರು ವಿತರಿಸಿದ ರತನ್ ಟಾಟಾ: ಇವರೇ ಮೊದಲ ಗ್ರಾಹಕ.. ಹಳೆಯ ವಿಡಿಯೋ ವೈರಲ್!

ಭಾರತದ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಟಾಟಾ ಸಮೂಹದ ಗೌರವ ಅಧ್ಯಕ್ಷ ರತನ್ ಟಾಟಾ (Ratan Tata), ಅಕ್ಟೋಬರ್ 9 ರಂದು ಮುಂಬೈನಲ್ಲಿ ವಿಧಿವಶರಾಗಿದ್ದರು. ಅವರ ಮಾಲೀಕತ್ವದ ಟಾಟಾ ಮೋಟಾರ್ಸ್, ಆಕರ್ಷಕ ವೈಶಿಷ್ಟ್ಯಗಳು ಹಾಗೂ ಕೈಗೆಟುಕುವ ಬೆಲೆಯ ಕಾರುಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಮಧ್ಯಮ ವರ್ಗದ ಜನರ ಕಷ್ಟವನ್ನು ಕಣ್ಣಾರೆ ಕಂಡಿದ್ದ ರತನ್ ಟಾಟಾ, ರೂ.1 ಲಕ್ಷ ಆಸುಪಾಸಿನ ಬೆಲೆ ಹೊಂದಿರುವ ಹೊಸದೊಂದು ಕಾರನ್ನು ಬಿಡುಗಡೆಗೊಳಿಸಲು ಆಲೋಚಿಸಿದ್ದರು. ಅದರ ಪ್ರತಿಫಲವೇ 2009 ರಲ್ಲಿ ಪುಟ್ಟದಾದ ನ್ಯಾನೋ ಕಾರನ್ನು ಮಾರಾಟಕ್ಕೆ ತಂದಿದ್ದರು.

ಸದ್ಯ, ರತನ್ ಟಾಟಾ ಅವರಿಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಯೂಟ್ಯೂಬ್‌ ವಾಹಿನಿಯೊಂದು ಹಂಚಿಕೊಂಡಿರುವ 15 ವರ್ಷಗಳ ಹಳೆಯ ವಿಡಿಯೋದಲ್ಲಿ ರತನ್ ಟಾಟಾ ಅವರು, ಹೊಚ್ಚ ಹೊಸ ನ್ಯಾನೋ ಕಾರುಗಳನ್ನು ಶೋರೂಂಗೆ ಬಂದು ಗ್ರಾಹಕರಿಗೆ ವಿತರಿಸುತ್ತಿರುವುದನ್ನು ಕಾಣಬಹುದು.

Ratan Tata Delivering First 3 New Nano Cars Old Video Full Viral

ಮೊದಲ ಟಾಟಾ ನ್ಯಾನೋ ಕಾರಿನ ಕೀಯನ್ನು ರತನ್ ಟಾಟಾ, ತಮ್ಮ ಕೈಯಾರೆ ಅಶೋಕ್ ವಿಚಾರೆ ಎಂಬ ಗ್ರಾಹಕರಿಗೆ ಹಸ್ತಾಂತರಿಸಿದ್ದರು. ಈ ಮೂಲಕ ಅಶೋಕ್ ವಿಚಾರೆ ಟಾಟಾ ನ್ಯಾನೋದ ಪ್ರಪ್ರಥಮ ಮಾಲೀಕರಾಗಿ ಹೊರಹೊಮ್ಮಿದ್ದರು. ಅದೇ ಕಾರ್ಯಕ್ರಮದಲ್ಲಿ ಮತ್ತಿಬ್ಬರು ಗ್ರಾಹಕರಿಗೂ ನ್ಯಾನೋ ಕಾರುಗಳನ್ನು ವಿತರಣೆ ಮಾಡಲಾಗಿತ್ತು.

ಟಾಟಾ ನ್ಯಾನೋ ಸಣ್ಣ ಕಾರಾಗಿದ್ದರೂ ಹತ್ತಾರು ವಿಶೇಷತೆಗಳನ್ನು ಪಡೆದಿತ್ತು. ಈ ಕಾರು 624 ಸಿಸಿ ಸಾಮರ್ಥ್ಯದ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿತ್ತು. ಜೊತೆಗೆ ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ 21.9 ರಿಂದ 36 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು. ಇದರಲ್ಲಿ 4 ಜನರು ಸುಲಭವಾಗಿ ಓಡಾಟ ನಡೆಸಬಹುದಾಗಿತ್ತು.

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ನ್ಯಾನೋ ಅಗ್ಗದ ದರದ ಕಾರಾಗಿದ್ದರೂ ಕಂಪನಿ ನಿರೀಕ್ಷಿಸಿದ ಮಟ್ಟದಲ್ಲಿ ಮಾರಾಟವಾಗಲಿಲ್ಲ. ಹಲವು ಕಾರಣಗಳಿಂದ ಮಾರಾಟ ಪ್ರಮಾಣ ದಿನದಿಂದ ದಿನಕ್ಕೆ ಕುಸಿತವಾಗುತ್ತಲೇ ಹೋಯಿತು. ಅದರ ಪರಿಣಾಮ 2018ರಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಕಡೆಯದಾಗಿ ರೂ.2.47 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿತ್ತು.

ಪ್ರಸ್ತುತ ಟಾಟಾ ಮೋಟಾರ್ಸ್ ಮಾರಾಟ ಮಾಡುತ್ತಿರುವ ಟಿಯಾಗೊ ಹ್ಯಾಚ್‌ಬ್ಯಾಕ್ ಅತಿಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ. ಈ ಕಾರು, ರೂ.4,99 ಲಕ್ಷದಿಂದ ರೂ.8.75 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಈ ಟಾಟಾ ಟಿಯಾಗೊ (Tata Tiago) ಕಾರಿನಲ್ಲಿ 5 ಮಂದಿ ಪ್ರಯಾಣಿಸಬಹುದು. ಆಕರ್ಷಕ ವಿನ್ಯಾಸ (ಡಿಸೈನ್) ಪಡೆದುಕೊಂಡಿದೆ. ಡೇಟೋನಾ ಗ್ರೇ, ಓಪಲ್ ವೈಟ್ ಹಾಗೂ ಅರಿಜೋನಾ ಬ್ಲೂ ಎಂಬ ಆಕರ್ಷಕ ಬಣ್ಣಗಳನ್ನು ಹೊಂದಿದ್ದು, ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 19.43 ರಿಂದ 28.06 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ಟಿಯಾಗೊ ಹ್ಯಾಚ್‌ಬ್ಯಾಕ್ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ 8-ಸ್ಪೀಕರ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು ಪ್ರಯಾಣಿಕರಿಗೂ ಗರಿಷ್ಠ ರಕ್ಷಣೆ ಒದಗಿಸಲಿದ್ದು, ಸುರಕ್ಷತೆಯ ದೃಷ್ಟಿಯಿಂದ 2 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 23, 2024, 10:24 [IST]
English summary
Ratan tata delivering first 3 new nano cars old video full viral
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+