3 ಕೋಟಿ ರೂ. ಮರ್ಸಿಡಿಸ್ ಕಾರಿನಲ್ಲಿ ಬಂದಿಳಿದ ಕೆಜಿಎಫ್ ನಟಿ

ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಬಹಳ ಜನಪ್ರಿಯರು. ಹಿಂದಿ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಈ ನಟಿ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗಿನ ಬ್ಲಾಕ್​ ಬಸ್ಟರ್ ಸಿನಿಮಾ 'ಕೆಜಿಎಫ್ 2' ನಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಅವರು ಮಿಂಚಿದರು.

ಇತ್ತೀಚೆಗೆ ಜನಪ್ರಿಯ ಬಾಲಿವುಡ್ ನಟಿ ರವೀನಾ ಟಂಡನ್ ಅವರು ತಮ್ಮ ಐಷಾರಮಿ ಕಾರಿನಲ್ಲಿ ಕಾಣಿಸಿಕೊಂಡಿರುವ ವೀಡಿಯೊ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ, ರವೀನಾ ಟಂಡನ್ ಕಾರಿನಿಂದ ಇಳಿದು ಕಟ್ಟಡವನ್ನು ಪ್ರವೇಶಿಸುವುದನ್ನು ನಾವು ನೋಡಬಹುದು. ನಟಿ ರವೀನಾ ಟಂಡನ್ ಅವರು Mercedes-Benz GLS ಕಾರಿನಲ್ಲಿ ಬಂದು ಇಳಿದರು. ವರದಿಗಳ ಪ್ರಕಾರ, ಈ ವಿಡಿಯೋವನ್ನು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.

Raveena Tandon

ಬಾಲಿವುಡ್ ನಟಿ ರವೀನಾ ಟಂಡನ್ ಅವರು ಕಾರಿನಿಂದ ಇಳಿದು ಅವರು ಮಿಜು ರೆಸ್ಟೋರೆಂಟ್ ಪ್ರವೇಶಿಸಿದರು. ಇದು ಮುಂಬೈ ನಗರದ ಅತ್ಯಂತ ಜನಪ್ರಿಯ ಹೋಟೆಲ್‌ಗಳಲ್ಲಿ ಒಂದಾಗಿದೆ. ಇಲ್ಲಿ ಸಿನಿಮಾ ನಟಿಯರನ್ನು ಹೆಚ್ಚಾಗಿ ಕಾಣಬಹುದು. ದೀಪಿಕಾ ಪಡುಕೋಣೆಯಂತಹ ಜನಪ್ರಿಯ ನಟಿಯರು ಕೂಡ ಈ ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ರವೀನಾ ಟಂಡನ್ ಅವರ ಈ ಹೋಟೆಲ್ ತಲುಪಲು ಬಳಸಲಾದ ಕಾರು Mercedes-Benz GLS. ಇದು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ನಟಿ ರವೀನಾ ಟಂಡನ್ ಅವರು 'ಕೆಜಿಎಫ್ 2' ಚಿತ್ರದಲ್ಲಿ ರಮಿಕಾ ಸೇನ್ ಹೆಸರಿನ ಪ್ರಧಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು. 2005ರಿಂದ ಈಚೆ ರವೀನಾ ಟಂಡನ್ ಸಿನಿಮಾ ಆಯ್ಕೆಯಲ್ಲಿ ಸಖತ್ ಯೋಚನೆ ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು 2006 ಬಳಿಕ ಅವರು ದೊಡ್ಡ ಬ್ರೇಕ್ ಕೂಡ ಪಡೆದರು. ಅವರಿಗೆ ತಮ್ಮ ಮೊದಲ ಆಯ್ಕೆ ಕುಟುಂಬ ಎಂದು ಹೇಳಿಕೊಂಡಿದ್ದಾರೆ.

Raveena Tandon

2006 ಬಳಿಕ ಅವರು ದೊಡ್ಡ ಬ್ರೇಕ್ ಕೂಡ ಪಡೆದರು. ಸದ್ಯ ಅವರ ಮೊದಲ ಆಯ್ಕೆ ಕುಟುಂಬ ಎಂದು ಹೇಳಿಕೊಂಡಿದ್ದಾರೆ. ರವೀನಾ ಅವರು ಇತ್ತೀಚೆಗೆ ವರ್ಷಕ್ಕೆ ಸರಾಸರಿ ಒಂದು ಚಿತ್ರದಲ್ಲಿ ಮಾತ್ರ ನಟಿಸುತ್ತಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್​ಗೆ ಈಗ 50 ವರ್ಷ ವಯಸ್ಸು. ಆದರೂ ಅವರ ಗ್ಲಾಮರ್ ಕಡಿಮೆ ಆಗಿಲ್ಲ.

ಬಾಲಿವುಡ್ ನಟಿ ರವೀನಾ ಟಂಡನ್ ಕಾಣಿಸಿಕೊಂಡ Mercedes-Benz GLS ಎಸ್‍ಯುವಿ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ Mercedes-Benz GLS ಎಸ್‍ಯುವಿಯ ಎಂಟ್ರ ಲೆವೆಲ್ ರೂಪಾಂತರವು ಪ್ರಸ್ತುತ 1.31 ಕೋಟಿ ರೂ. ಈ ಕಾರಿನ ಟಾಪ್ ರೂಪಾಂತರದ ಬೆಲೆಯು 2.96 ಕೋಟಿ ರೂ. ಆಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಆನ್ ರೋಡ್ ಬೆಲೆ ಹೆಚ್ಚು ಇರುತ್ತದೆ.

ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಹೊಂದಿಕೆಯಾಗುತ್ತದೆ.

ಈ ಎಂಜಿನ್ 362 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 2.9-ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 362 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನುಉ ಉತ್ಪಾದಿಸುತ್ತದೆ.

ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯುಯಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್ ಲೈಟ್, ಕ್ರೋಮ್ ಅಡ್ಡಲಾಗಿರುವ ಸ್ಲ್ಯಾಟ್‌ಗಳೊಂದಿಗೆ ಫ್ರಂಟ್ ಗ್ರಿಲ್ ಮತ್ತು ಮಧ್ಯದಲ್ಲಿ ಮರ್ಸಿಡಿಸ್ ಬೆಂಝ್ ಲೋಗೊವನ್ನು ಅಳವಡಿಸಲಾಗಿದೆ. ಈ ಎಸ್‍ಯುವಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, 21 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್, ಕ್ರೋಮ್ ಬೆಜೆಲ್‌ಗಳೊಂದಿಗೆ ಡ್ಯುಯಲ್ ಎಕ್ಸಾಸ್ಟ್ ಮಫ್ಲರ್‌ಗಳು ಮತ್ತು ಹಲವಾರು ಸೂಕ್ಷ್ಮ ನವೀಕರಣಗಳನ್ನು ನಡೆಸಲಾಗಿದೆ.

More from DriveSpark

Article Published On: Tuesday, October 31, 2023, 17:45 [IST]
English summary
Raveena tandon spotted in mercedes benz gls suv viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+