ಪರಿಸರ ಕಾಳಜಿಯಿಂದ ಚೀನಾ ಕಂಪನಿಯ ಎಲೆಕ್ಟ್ರಿಕ್ ಕಾರು ಖರೀದಿಸಿದ ಮಾಸ್ ಮಹಾರಾಜ ರವಿ ತೇಜ
ಸಿನಿಮಾ ರಂಗದ ಸೆಲೆಬ್ರಿಟಿಗಳಿಗೆ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುತ್ತಾರೆ. ಕೆಲವು ಸಿನಿಮಾ ನಟ-ನಟಿಯರು ತಮ್ಮ ಸ್ಟೇಟಸ್‌ಗೆ ತಕ್ಕಂತೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಮಾಸ್ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಟಾಲಿವುಡ್ ನಟ ರವಿ ತೇಜ ಕೂಡ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ.
ನಟ ರವಿ ತೇಜ Mercedes-Benz, Audi, ಮತ್ತು BMW ನಂತಹ ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ನಟ ರವಿ ತೇಜ ಅವರು ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಇವರು ಖರೀದಿಸಿದ ಕಾರು ಚೀನಾ ಮೂಲದ ಬಿವೈಡಿ ಕಂಪನಿಯ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಕಾರ್ ಆಗಿದೆ. ನಟ ರವಿ ತೇಜ ಅವರು ತಮ್ಮ ಈ ಹೊಸ ಎಲೆಕ್ಟ್ರಿಕ್ ಕಾರಿಗಾಗಿ, ಫ್ಯಾನ್ಸಿ ನಂಬರ್ ಅನ್ನು ಪಡೆದಿದ್ದಾರೆ. ಭಾರತದಲ್ಲಿ ವಾಹನಕ್ಕೆ ಫ್ಯಾನ್ಸಿ ಸಂಖ್ಯೆಯನ್ನು ಪಡೆಯಲು, ಇ-ಹರಾಜಿನಲ್ಲಿ ಭಾಗವಹಿಸಬೇಕು.

ಸಂಖ್ಯೆಗಳನ್ನು ಅವುಗಳ ಜನಪ್ರಿಯತೆ ಮತ್ತು ಬೇಡಿಕೆಗೆ ಅನುಗುಣವಾಗಿ ವರ್ಗೀಕರಿಸಲಾಗಿದೆ ಮತ್ತು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಅವರ ವಾಹನದಲ್ಲಿ ಆ ನಂಬರ್ ಅನ್ನು ಪಡೆದುಕೊಳ್ಳಬಹುದು. ನಟ ರವಿತೇಜಾ, ಅವರು "2628" ಎಂಬ ಫ್ಯಾನ್ಸಿ ನಂಬರ್ ಅನ್ನು ಪಡೆದುಕೊಂಡಿದ್ದಾರೆ. "2628" ನಂಬರ್ ರವಿ ತೇಜಾಗೆ ವೈಯಕ್ತಿಕ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಅವರ ಆಯ್ಕೆಮಾಡಿದ ಪರವಾನಗಿ ಫಲಕದಲ್ಲಿನ ಅಂಕಿಗಳ ಮೊತ್ತವು 9ಕ್ಕೆ ಸೇರಿಸುತ್ತದೆ.
ಹಲವಾರು ಸಂಸ್ಕೃತಿಗಳಲ್ಲಿ, ಸಂಖ್ಯೆ 9 ಅನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ, ನಟ ರವಿ ತೇಜ ಫ್ಯಾನಿ ನಂಬರ್ ಪಡೆಯಲು 17,628 ರೂ. ವೆಚ್ಚ ಮಾಡಿದ್ದಾರೆ. ಇನ್ನು ನಟ ರವಿ ತೇಜ ಖರೀದಿಸಿದ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಎಸ್‍ಯುವಿಗೆ ಮೊದಲ ತಿಂಗಳಲ್ಲೇ 2,000 ಸಾವಿರ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತು. ಈ ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.
ಈ ಹೊಸ ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕೋನಾ ಇವಿ ಮತ್ತು ಎಂಜಿ ZS ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. 3.0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಇ6 ಎಂಪಿವಿಯ ನಂತರ ಬ್ರ್ಯಾಂಡ್‌ನ ಎರಡನೇ ಎಲೆಕ್ಟ್ರಿಕ್ ವಾಹನವಾಗಿದೆ. ಇದು SKD (ಸೆಮಿ-ನಾಕ್ಡ್ ಡೌನ್) ಮಾರ್ಗದ ಮೂಲಕ ಬರುತ್ತದೆ.
ಇನ್ನು ಚೆನ್ನೈ ಬಳಿಯ ಬ್ರ್ಯಾಂಡ್‌ನ ಶ್ರೀಪೆರಂಬದೂರ್ ಮೂಲದ ಸ್ಥಾವರದಲ್ಲಿ ಜೋಡಿಸಲಾಗಿದೆ. ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 60kWh ಬಿವೈಡಿ ಬ್ಲೇಡ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಪೂರ್ಣ ಚಾರ್ಜ್‌ನಲ್ಲಿ ARAI- ಪ್ರಮಾಣೀಕರಿಸಿದ ಪ್ರಕಾರ 521 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಎಸ್‍ಯುವಿ 201 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಕಾರು 7.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಬ್ಯಾಟರಿ ಪ್ಯಾಕ್ ಅನ್ನು 50 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಈ ಹೊಸ ಬಿವೈಡಿ ಆಟ್ಟೊ ಎಲೆಕ್ಟ್ರಿಕ್ ಎಸ್‍ಯುವಿ ತನ್ನ ದೊಡ್ಡ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಬಲವಾದ ಲೈನ್ ಮತ್ತು ಪೂರ್ಣ-ಅಗಲದ ಎಲ್ಇಡಿ ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿ ಮತ್ತು ಅತ್ಯಾಧುನಿಕವಾಗಿ ಕಾಣುತ್ತದೆ.
ಇದರ ಜೊತೆಗೆ, ಬಿವೈಡಿ ಆಟ್ಟೊ 3 ಎಲೆಕ್ಟ್ರಿಕ್ ಎಸ್‍ಯುವಿಯು ಬೌಲ್ಡರ್ ಗ್ರೇ, ಪಾರ್ಕರ್ ರೆಡ್, ಸ್ಕೀ ವೈಟ್ ಮತ್ತು ಸರ್ಫ್ ಬ್ಲೂ ಸೇರಿದಂತೆ ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ನೊಂದಿಗೆ ಬರುತ್ತದೆ, ಇದನ್ನು ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್ ಅಥವಾ ಪೋಟ್ರೇಟ್ ಓರಿಯಂಟೇಶನ್‌ಗೆ ತಿರುಗಿಸಬಹುದು.


Click it and Unblock the Notifications








