ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿರಿಸಲಿರುವ ಇಬ್ಬರು ಹೊಸ ಆತಿಥಿಗಳು
ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಮುಂಬರುವ 2016 ಎಪ್ರಿಲ್ 17ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಈ ನಡುವೆ ಮದುವೆಗೂ ಮುಂಚೆಯೇ ಭಾವಿ ಮಾವನಿಂದ ಐಷಾರಾಮಿ ಉಡುಗೊರೆಯೊಂದನ್ನು ಪಡೆದಿದ್ದಾರೆ.
ಕಳೆದ ಫೆಬ್ರವರಿ 05 ರಂದು ಖ್ಯಾತ ಉದ್ಯಮಿ ಹರ್ ದೇವ್ ಸೋಲಂಕಿ ಅವರ ಪುತ್ರಿ ಹಾಗೂ ತಮ್ಮ ದೀರ್ಘಕಾಲದ ಗೆಳತಿ ರೀವಾ ಸೋಲಂಕಿ ಅವರೊಂದಿಗೆ ಜಡೇಜಾ ವಿವಾಹ ನಿಶ್ಚಿತಾರ್ಥ ನೇರವೇರಿತ್ತು. ಈಗ ಅದ್ದೂರಿ ಮದುವೆ ಸಮಾರಂಭಕ್ಕೂ ಮುನ್ನವೇ ಐಷಾರಾಮಿ ಕಾರೊಂದನ್ನು ಉಡುಗೊರೆಯ ರೂಪದಲ್ಲಿ ಪಡೆದಿದ್ದಾರೆ.

ರವೀಂದ್ರ ಜಡೇಜಾ ಅವರಿಗೆ ಭಾವಿ ಮಾವ ಸೋಲಂಕಿ, ಬರೋಬ್ಬರಿ ಒಂದು ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ ಶ್ವೇತ ವರ್ಣದ ಆಡಿ ಕ್ಯೂ7 ಕಾರನ್ನು ಉಡುಯಾರೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆಡಿ ಅಧಿಕಾರಿಗಳು ಭಾವಿ ಜಡೇಜಾ-ಸೋಲಂಕಿ ದಂಪತಿಗಳಿಗೆ ಆಡಿ ಕ್ಯೂ7 ಕಾರಿನ ಕೀಲಿಯನ್ನು ಹಸ್ತಾಂತರಿಸಿದರು. ಸ್ವತ: ಜಡೇಜಾ ಭಾವಿ ಪತ್ನಿ ಪೂಜಾ ಕರ್ಮಗಳನ್ನು ನೇರವೇರಿಸಿರುವುದು ಗಮನಕ್ಕೆ ಪಾತ್ರವಾಗಿತ್ತು.

ಈಗ ತಮ್ಮ ಹುಟ್ಟೂರಾದ ಜಾಮ್ ನಗರಕ್ಕೆ ಕಾರಿನಲ್ಲಿ ತೆರಳಿರುವ ಜಡೇಜಾ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ರೀವಾ ಅವರನ್ನು ವರಿಸಲಿದ್ದಾರೆ. ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ನಿಕಟವರ್ತಿಗಳು ಮಾತ್ರ ಭಾಗವಹಿಸಲಿದ್ದಾರೆ.

ಆಡಿಯ ಅತ್ಯಂತ ಜನಪ್ರಿಯ ಐಷಾರಾಮಿ ಕ್ರೀಡಾ ಬಳಕೆಯ ಕಾರುಗಳಲ್ಲಿ ಒಂದಾಗಿರುವ ಕ್ಯೂ7 ದೈತ್ಯ ರಸ್ತೆ ಸಾನಿಧ್ಯವನ್ನು ಪಡೆದಿದೆ. ಮುಂಭಾಗದಲ್ಲಿರುವ ದೊಡ್ಡದಾದ ಗ್ರಿಲ್ ಪ್ರಮುಖ ಆಕರ್ಷಣೆಯಾಗಿದೆ.

ಆಡಿ ಕ್ಯೂ7 ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ ಅನುಕ್ರಮವಾಗಿ 3 ಲೀಟರ್ ಮತ್ತು 4.2 ಲೀಟರ್ ಎಂಜಿನ್ ಆಳವಡಿಸಲಾಗಿದೆ.

ಆಡಿ ಕ್ಯೂ7 ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್, ಬಿಎಂಡಬ್ಲ್ಯು ಎಕ್ಸ್5 ಮತ್ತು ವೋಲ್ವೋ ಎಕ್ಸ್‌ಸಿ90 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಆಡಿ ಕ್ಯೂ 7 ಕ್ರೀಡಾ ಬಳಕೆಯ ವಾಹನ 440 ಎನ್ ಎಂ ತಿರುಗುಬಲದಲ್ಲಿ 333 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ. ಅಲ್ಲದೆ 8 ಸ್ಪೀಡ್ ಟ್ರಿಪ್ ಟ್ರಾನಿಕ್ ಗೇರ್ ಬಾಕ್ಸ್ ಇದರಲ್ಲಿ ಆಳವಡಿಸಲಾಗಿದೆ.

ಇನ್ನುಳಿದಂತೆ ಕೇವಲ 6.3 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಹಳೆಯ ಮಾದರಿಗಿಂತಲೂ ಹೆಚ್ಚು ವೇಗತೆಯನ್ನು ಕಾಪಾಡಿಕೊಂಡಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾವುದಾದ್ದಲ್ಲಿ ಎಲ್ ಇಡಿ ಮ್ಯಾಟ್ರಿಕ್ ಹೆಡ್ ಲ್ಯಾಂಪ್, ಡೇಟೈಮ್ ರನ್ನಿಂಗ್ ಲೈಟ್ಸ್ ಗಳು ಮತ್ತು ಎಲ್ ಇಡಿ ಟೈಲ್ ಲ್ಯಾಂಪ್ ಗಳು ತಾಜಾತನವನ್ನು ತುಂಬಲಿದೆ.

ಕಾರಿನೊಳಗೆ ಬಹು ಕ್ರಿಯಾತ್ಮಕ ಟಚ್ ಸ್ಕೀನ್ ಪರದೆ, ಲೆಥರ್ ಹೋದಿಕೆಯ ಸೀಟುಗಳು, ರಿಯರ್ ವ್ಯೂ ಮಿರರ್, ಸುಲಭವಾಗಿ ನಿರ್ವಹಿಸಬಹುದಾದ ಡೋರ್, ಆಡಿ ಸೌಂಡ್ ಸಿಸ್ಟಂ, ಚಾಲಕ ಮಾಹಿತಿ ವ್ಯವಸ್ಥೆ, ಎಲೆಕ್ಟ್ರಿಕ್ ಲಗ್ಗೇಜ್ ವ್ಯವಸ್ಥೆ ಇತ್ಯಾದಿ ಹಲವಾರು ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.


Click it and Unblock the Notifications