ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

By Manoj Bk

ಲೋಟಸ್ ಕಾರ್ಸ್ ತನ್ನ ಹೊಸ ಎಮಿರಾ ಮಾದರಿಯನ್ನು ಇಂದು ಅನಾವರಣಗೊಳಿಸಲು ಸಜ್ಜಾಗಿದೆ. ಲೋಟಸ್ ಕಂಪನಿಯ ಎಲ್ಲಾ ಕಾರುಗಳ ಹೆಸರುಗಳು ಇ ಅಕ್ಷರದಿಂದ ಆರಂಭವಾಗುತ್ತವೆ.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಕಂಪನಿಯ ಇತರ ಕಾರುಗಳಂತೆ ಎಮಿರಾ ಕಾರಿನ ಹೆಸರು ಸಹ ಇ ಅಕ್ಷರದಿಂದ ಆರಂಭವಾಗುತ್ತದೆ. ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ನಿರ್ದಿಷ್ಟ ಅಕ್ಷರದ ಹೆಸರುಗಳನ್ನು ಬಳಸುತ್ತವೆ. ಮಹೀಂದ್ರಾ ಕಂಪನಿಯು ತನ್ನ ಹಲವು ಕಾರುಗಳಲ್ಲಿ ಒ ಅಕ್ಷರದಿಂದ ಕೊನೆಯಾಗುವ ಹೆಸರನ್ನು ಬಳಸುತ್ತದೆ.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಬ್ರಿಟಿಷ್ ಮೂಲದ ಲೋಟಸ್ ಕಂಪನಿಯ ಕಾರುಗಳ ಹೆಸರುಗಳು ಇ ಅಕ್ಷರದಿಂದ ಆರಂಭವಾಗುವುದರ ಹಿಂದೆ ಹಲವು ವರ್ಷಗಳ ಇತಿಹಾಸವಿದೆ. 1950ರ ನಂತರ ಲೋಟಸ್ ಕಾರುಗಳ ಹೆಸರುಗಳಲ್ಲಿ ಇ ಅಕ್ಷರಗಳು ಕಾಣಿಸಿಕೊಂಡವು.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಲೋಟಸ್‌ ಕಂಪನಿಯ ಮೊದಲ ಕಾರ್ ಅನ್ನು ಮಾರ್ಕ್ I ಹೆಸರಿನಲ್ಲಿ ಮಾರಾಟವಾಯಿತು. ನಂತರ ಮಾರಾಟವಾದ ಕಾರುಗಳಲ್ಲಿ ಮಾರ್ಕ್ ಎಕ್ಸ್ ಅಕ್ಷರಗಳು ಕಾಣಿಸಿಕೊಂಡವು. ಮುಂದಿನ ಕಾರನ್ನು ಲೋಟಸ್ ಕಂಪನಿಯು ಮಾರ್ಕ್ XI ಬದಲಿಗೆ ಲೋಟಸ್ XI ಎಂಬ ಹೆಸರಿನಲ್ಲಿ ಮಾರಾಟ ಮಾಡಿತು.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಈ ಹೆಸರುಗಳು ಅರೇಬಿಕ್ ಅಂಕಿಗಳಂತೆ ಇದ್ದ ಕಾರಣ, ಲೋಟಸ್ ಕಂಪನಿಯ ಅಧ್ಯಕ್ಷರಾದ ಕೊಲಿನ್ ಚಾಪ್ಮನ್ ಕಾರುಗಳಿಗೆ ಹೆಸರಿಡಲು ಹೊಸ ತಂತ್ರವನ್ನು ರೂಪಿಸಿದರು. ಇದರನ್ವಯ ಲೋಟಸ್ ಕಂಪನಿಯು ತನ್ನ ಕಾರುಗಳಿಗೆ ಇ ಅಕ್ಷರದಿಂದ ಆರಂಭವಾಗುವ ಹೆಸರನ್ನಿಡಲು ನಿರ್ಧರಿಸಿತು.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಇದು ಇಂದಿಗೂ ಮುಂದುವರೆದಿದೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಎಮಿರಾ ಕಾರು ಸಹ ಇ ಅಕ್ಷರವನ್ನು ಹೊಂದಿದೆ. ಈ ಕಾರು ಲೋಟಸ್ ಕಾರ್ಸ್ ಕಂಪನಿಯ ಪ್ರಮುಖ ಕಾರ್ ಆಗಿರಲಿದೆ.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಎಮಿರಾ, ಇಂಧನ ಎಂಜಿನ್ ಹೊಂದಲಿರುವ ಲೋಟಸ್ ಕಂಪನಿಯ ಕೊನೆಯ ಕಾರ್ ಆಗಿರಲಿದೆ. ಭವಿಷ್ಯದಲ್ಲಿ ಲೋಟಸ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಉತ್ಪಾದಿಸಲು ನಿರ್ಧರಿಸಿದೆ.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಲೋಟಸ್ ಕಂಪನಿಯು ಎಮಿರಾ ಕಾರಿನಲ್ಲಿ ಅಳವಡಿಸಿರುವ ಎಂಜಿನ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಲೋಟಸ್ ಕಂಪನಿಯ ಕಾರುಗಳಲ್ಲಿ ಟೊಯೊಟಾದ 3.5 ಲೀಟರ್ ವಿ 6 ಎಂಜಿನ್'ಗಳನ್ನು ಅಳವಡಿಸಲಾಗುತ್ತದೆ.

ಲೋಟಸ್ ಕಂಪನಿಯ ಕಾರುಗಳ ಹೆಸರು ಇ ಅಕ್ಷರದಿಂದ ಆರಂಭವಾಗುವುದರ ಹಿಂದಿರುವ ಕಾರಣಗಳಿವು

ಹೊಸ ಎಮಿರಾ ಕಾರಿನಲ್ಲಿಯೂ ವಿ 6 ಎಂಜಿನ್‌ ಅಳವಡಿಸುವ ನಿರೀಕ್ಷೆಗಳಿವೆ. ಇದೇ ವೇಳೆ ಎಮಿರಾ ಸ್ಪೋರ್ಟ್ಸ್ ಕಾರ್ 2.0 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Reasons for all lotus cars names starts with letter E. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X