ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಭಾರತದಲ್ಲಿ ಆಂಬುಲೆನ್ಸ್‌ಗಳ ತುರ್ತು ಸಂಖ್ಯೆ 108 ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ 108 ಅನ್ನು ತುರ್ತು ಕರೆ ಸಂಖ್ಯೆಯಾಗಿ ಯಾವ ಕಾರಣಕ್ಕೆ ಇರಿಸಲಾಯಿತು ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ. ಆಂಬುಲೆನ್ಸ್‌ಗಳು 108 ಸಂಖ್ಯೆಯನ್ನು ಏಕೆ ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಸೂರ್ಯ, ಚಂದ್ರ, ಭೂಮಿ

ಸಮಭಾಜಕದಲ್ಲಿ ಭೂಮಿಯ ವ್ಯಾಸವು 7,926 ಮೈಲಿಗಳಾಗಿದೆ. ಆದರೆ ಸೂರ್ಯನ ವ್ಯಾಸವು ಇದಕ್ಕಿಂತ 108 ಪಟ್ಟು ದೊಡ್ಡದಾಗಿದೆ. ಸೂರ್ಯನ ವ್ಯಾಸವು 8,56,008 ಮೈಲಿಗಳು. ಅದೇ ಸಮಯದಲ್ಲಿ ಭೂಮಿ ಹಾಗೂ ಸೂರ್ಯನ ನಡುವಿನ ಅಂತರವು ಸುಮಾರು 9,24,48,864 ಮೈಲಿಗಳು. ಇದು ಸೂರ್ಯನ ವ್ಯಾಸಕ್ಕಿಂತ 108 ಪಟ್ಟು ದೊಡ್ಡದಾಗಿದೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಇದೇ ವೇಳೆ ಭೂಮಿಯ ಚಂದ್ರನ ವ್ಯಾಸವು 2,180 ಮೈಲಿಗಳು. ಭೂಮಿ ಹಾಗೂ ಚಂದ್ರನ ನಡುವಿನ ಅಂತರ 2,35,440 ಮೈಲಿಗಳು. ಇದು ಚಂದ್ರನ ವ್ಯಾಸಕ್ಕಿಂತ 108 ಪಟ್ಟು ದೊಡ್ಡದಾಗಿದೆ. ಈ ಎಲ್ಲಾ ಲೆಕ್ಕಾಚಾರಗಳು ಒಟ್ಟಾಗಿ 108 ಅನ್ನು ವಿಶೇಷ ಸಂಖ್ಯೆಯನ್ನಾಗಿ ಮಾಡುತ್ತವೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ನಮ್ಮ ನಕ್ಷತ್ರಪುಂಜದಲ್ಲಿ ಸೂರ್ಯ, ಚಂದ್ರ ಮತ್ತು ಭೂಮಿಯನ್ನು ಜೀವನದ ನಿಜವಾದ ಮೂಲವೆಂದು ಪರಿಗಣಿಸಲಾಗಿದೆ. ಮೂಲಗಳ ಪ್ರಕಾರ ಈ ಕಾರಣಕ್ಕೆ ಸಂಕಷ್ಟದ ಸಮಯದಲ್ಲಿ ರೋಗಿಗಳ ಜೀವ ಉಳಿಸುವ ಆಂಬುಲೆನ್ಸ್‌ಗಳಿಗೆ 108 ಸಂಖ್ಯೆಯನ್ನು ತುರ್ತು ಸಂಖ್ಯೆಯಾಗಿ ನೀಡಲಾಗಿದೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಹಿಂದೂ ಸಂಪ್ರದಾಯ

ಹಿಂದೂ ಧರ್ಮದಲ್ಲಿ ಬಳಸುವ ಪ್ರಾರ್ಥನಾ ಸಂಜೆ 108. ಹಿಂದೂ ಪದ್ಧತಿಯ ಪ್ರಕಾರ 108 ಬಾರಿ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಕಾರಣದಿಂದಾಗಿಯೂ ಆಂಬುಲೆನ್ಸ್‌ಗಳಿಗೆ ತುರ್ತು ಸಂಖ್ಯೆಯಾಗಿ 108 ಸಂಖ್ಯೆಯನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಸೈಕಾಲಜಿ

108 ಬಿಕ್ಕಟ್ಟಿನ ಸಮಯದಲ್ಲಿ ಸುಲಭವಾಗಿ ನೆನಪಿಡುವ ಸಂಖ್ಯೆಯಾಗಿದೆ. ಫೋನ್'ಗಳ ಡಯಲ್ ಪ್ಯಾಡ್ ನೋಡಿದಾಗ ನಮ್ಮ ಕಣ್ಣುಗಳು ಆಟೋಮ್ಯಾಟಿಕ್ ಆಗಿ ಎಡಭಾಗದಲ್ಲಿರುವ ಮೊದಲ ಸಂಖ್ಯೆಯತ್ತ ಅಂದರೆ 1ನೇ ಸಂಖ್ಯೆಯತ್ತ ಹೋಗುತ್ತವೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ನಂತರ ಕ್ರಮೇಣ ಕಡಿಮೆಯಾಗುತ್ತಾ 0 ಸಂಖ್ಯೆಯತ್ತ, ನಂತರ ಸ್ವಲ್ಪ ಮೇಲಕ್ಕೆ ಚಲಿಸಿದರೆ 8ನೇ ಸಂಖ್ಯೆಯತ್ತ ಚಲಿಸುತ್ತವೆ. ಮನುಷ್ಯರ ಈ ಸೈಕಾಲಜಿಯೂ ಸಹ ತುರ್ತು ಕರೆ ಸಂಖ್ಯೆ 108 ಆಗಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಭೂತ ಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲ

ಒಟ್ಟು 108 ಭಾವನೆಗಳಿವೆ ಎಂದು ಹೇಳಲಾಗುತ್ತದೆ. ಇವುಗಳಲ್ಲಿ 36 ಭಾವನೆಗಳು ಭೂತಕಾಲಕ್ಕೆ ಸಂಬಂಧಿಸಿವೆ. 36 ಭಾವನೆಗಳು ವರ್ತಮಾನಕ್ಕೆ ಸಂಬಂಧಿಸಿವೆ. ಇನ್ನು 36 ಭಾವನೆಗಳು ಭವಿಷ್ಯತ್ ಕಾಲಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ. ಇವುಗಳನ್ನು ಒಟ್ಟುಗೂಡಿಸಿದರೆ 108 ಆಗುತ್ತದೆ.

ಆಂಬುಲೆನ್ಸ್‌ಗಳು 108 ಅನ್ನು ತುರ್ತು ಕರೆ ಸಂಖ್ಯೆಯನ್ನಾಗಿ ಹೊಂದಲು ವಿವಿಧ ಕಾರಣಗಳಿವು

ಜೊತೆಗೆ ಒಟ್ಟು 108 ಇಂದ್ರಿಯಗಳಿವೆ ಎಂದು ಹೇಳಲಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಆಂಬುಲೆನ್ಸ್‌ಗಳಿಗೆ ತುರ್ತು ಸಂಖ್ಯೆಯಾಗಿ 108 ಸಂಖ್ಯೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ.

Most Read Articles

Kannada
English summary
Reasons for ambulances having 108 as emergency number. Read in Kannada.
Story first published: Sunday, July 11, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X