ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್'ಗೂ ಮುನ್ನ ಮೊಬೈಲ್ ಸ್ವಿಚ್ ಆಫ್ ಮಾಡಲು ಕಾರಣಗಳಿವು
ಸುರಕ್ಷತಾ ಕಾರಣಗಳಿಗಾಗಿ ವಿಮಾನಗಳಲ್ಲಿ ಹಲವಾರು ನಿಯಮಗಳನ್ನು ಪಾಲಿಸಲಾಗುತ್ತದೆ. ಇವುಗಳಲ್ಲಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ಮುನ್ನ ಪ್ರಯಾಣಿಕರು ತಮ್ಮ ಸೆಲ್ ಫೋನ್ ಸ್ವಿಚ್ ಆಫ್ ಮಾಡಬೇಕಾಗಿರುವುದು ಸಹ ಸೇರಿದೆ.

ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ಮುನ್ನ ವಿಮಾನಗಳ ಅಟೆಂಡೆಂಟ್'ಗಳು ಮೊಬೈಲ್'ಗಳನ್ನು ಸ್ವಿಚ್ ಆಫ್ ಮಾಡುವಂತೆ ಪ್ರಯಾಣಿಕರಿಗೆ ಸೂಚಿಸುತ್ತಾರೆ. ಈ ಸೂಚನೆಯನ್ನು ಎಲ್ಲಾ ಪ್ರಯಾಣಿಕರು ಪಾಲಿಸಲೇ ಬೇಕು. ವಿಮಾನವು ಹೊರಡುವ ಮೊದಲು ಮೊಬೈಲ್ ಫೋನ್'ಗಳನ್ನು ಯಾವ ಕಾರಣಕ್ಕೆ ಸ್ವಿಚ್ ಆಫ್ ಮಾಡಲಾಗುತ್ತದೆ ಎಂಬುದು ಹಲವರನ್ನು ಕಾಡುವ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ವಿಮಾನಗಳಲ್ಲಿ ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ಔಪಚಾರಿಕವಾಗಿ ನಿಷೇಧಿಸುವುದಿಲ್ಲ.
MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಆದರೆ ಸೆಲ್ ಫೋನ್ ಸೇರಿದಂತೆ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳು ರೇಡಿಯೋ ತರಂಗಗಳನ್ನು ಹೊರಸೂಸುತ್ತವೆ. ಈ ರೇಡಿಯೊ ತರಂಗಗಳ ಫ್ರೀಕ್ವೆನ್ಸಿ ನ್ಯಾವಿಗೇಷನ್ ಸಾಧನಗಳ ಫ್ರೀಕ್ವೆನ್ಸಿಯಷ್ಟೆ ಇದ್ದರೆ ಕಾಕ್‌ಪಿಟ್‌ನಲ್ಲಿರುವ ಏರೋನಾಟಿಕಲ್ ಉಪಕರಣಗಳಿಗೆ ಅಡ್ಡಿಯಾಗಬಹುದು.

ಇದಲ್ಲದೆ ತುಂಬಾ ಎತ್ತರದಲ್ಲಿ ಹಾರಾಟ ನಡೆಸುವಾಗ ಸೆಲ್ ಫೋನ್'ಗಳು ಹೆಚ್ಚು ಸ್ಟ್ರಾಂಗ್ ಆದ ಸಿಗ್ನಲ್'ಗಳನ್ನು ಕಳುಹಿಸುತ್ತವೆ. ಇದರಿಂದ ಭೂಮಿಯ ಮೇಲೆ ನೆಟ್‌ವರ್ಕ್ ದಟ್ಟಣೆ ಉಂಟಾಗುವ ಸಾಧ್ಯತೆಗಳಿರುತ್ತವೆ.
MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಆದರೆ ಇದುವರೆಗೂ ಈ ರೀತಿಯ ಸಿಗ್ನಲ್ ಹಸ್ತಕ್ಷೇಪದಿಂದಾಗಿ ಒಂದೇ ಒಂದು ವಿಮಾನವು ಅಪಘಾತಕ್ಕೀಡಾಗಿಲ್ಲ ಎಂಬುದು ಗಮನಾರ್ಹ. ಈಗ ಬಹುತೇಕ ವಿಮಾನಯಾನ ಕಂಪನಿಗಳು ತಮ್ಮ ವಿಮಾನಗಳಲ್ಲಿ ವೈ-ಫೈ ಸೇವೆಗಳನ್ನು ನೀಡುತ್ತವೆ.

ಇದಕ್ಕೆ ರೇಡಿಯೋ ವೇವ್'ಗಳ ಮೂಲಕ ಕನೆಕ್ಟ್ ಆಗ ಬೇಕಾಗುತ್ತದೆ. ಇದರಿಂದ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಸೆಲ್ ಫೋನ್'ಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸಲಾಗುತ್ತದೆ.
MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹೆಚ್ಚಿನ ವಿಮಾನಯಾನ ಕಂಪನಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಿಚ್ ಆಫ್ ಮಾಡುವುದನ್ನು ಪರಿಗಣಿಸುತ್ತವೆ. ಈ ಕಾರಣಕ್ಕೆ ವಿಮಾನಗಳು ಟೇಕ್ ಆಫ್ ಆಗುವಾಗ ಮತ್ತು ಲ್ಯಾಂಡಿಂಗ್ ಮಾಡುವಾಗ ಪ್ರಯಾಣಿಕರಿಗೆ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸಲಾಗುತ್ತದೆ.

ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಎರಡೂ ವಿಮಾನ ಹಾರಾಟದ ಪ್ರಮುಖ ಹಂತಗಳಾಗಿವೆ. ಈ ಸಮಯದಲ್ಲಿ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಅದಕ್ಕಾಗಿಯೇ ಪ್ರಯಾಣಿಕರಿಗೆ ಈ ಹಂತದಲ್ಲಿ ತಮ್ಮ ಸೆಲ್ ಫೋನ್'ಗಳನ್ನು ಸ್ವಿಚ್ ಆಫ್ ಮಾಡಲು ಸೂಚಿಸಲಾಗುತ್ತದೆ.


Click it and Unblock the Notifications