ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಪ್ರಪಂಚದಾದ್ಯಂತ ಹಲವು ರೀತಿಯ ತುರ್ತು ವಾಹನಗಳಿವೆ. ಇವುಗಳಲ್ಲಿ ಆಂಬ್ಯುಲೆನ್ಸ್‌, ಅಗ್ನಿಶಾಮಕ ವಾಹನ, ಪೊಲೀಸ್ ವಾಹನಗಳು ಸೇರಿವೆ. ಈ ತುರ್ತು ವಾಹನಗಳ ಮೇಲ್ಭಾಗದಲ್ಲಿ ತುರ್ತು ದೀಪ ಅಂದರೆ ಎಮರ್ಜೆನ್ಸಿ ಲೈಟ್'ಗಳನ್ನು ಅಳವಡಿಸಲಾಗಿರುತ್ತದೆ.

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಈ ಎಮರ್ಜೆನ್ಸಿ ಲೈಟ್'ಗಳ ಬಣ್ಣಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ. ಒಮ್ಮೊಮ್ಮೆ ಈ ಲೈಟ್'ಗಳು ರಾಜ್ಯದಿಂದ ರಾಜ್ಯಕ್ಕೆ ಹಾಗೂ ನಗರದಿಂದ ನಗರಕ್ಕೆ ಬದಲಾಗುವ ಸಾಧ್ಯತೆಗಳಿರುತ್ತವೆ. ಸಾಮಾನ್ಯವಾಗಿ ಕೆಂಪು ಹಾಗೂ ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್'ಗಳನ್ನು ವಿಶ್ವದ ವಿವಿಧ ಭಾಗಗಳಲ್ಲಿರುವ ತುರ್ತು ವಾಹನಗಳಲ್ಲಿ ಬಳಸಲಾಗುತ್ತದೆ.

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ತುರ್ತು ವಾಹನಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣ ಸಂಯೋಜನೆಯ ಎಮರ್ಜೆನ್ಸಿ ಲೈಟ್'ಗಳನ್ನು ಬಳಸುವುದರ ಹಿಂದೆ ಹಲವು ಕಾರಣಗಳಿವೆ. ಕೆಂಪು ಬಣ್ಣವು ನಿಲ್ಲಿಸುವುದಕ್ಕೆ ಹಾಗೂ ಎಚ್ಚರಿಕೆಗೆ ಸಂಬಂಧಿಸಿದೆ. ಈ ಕಾರಣಕ್ಕಾಗಿಯೇ ತುರ್ತು ವಾಹನಗಳಲ್ಲಿ ಕೆಂಪು ದೀಪಗಳನ್ನು ಬಳಸಲಾಗುತ್ತದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಆದರೆ ಹೆಚ್ಚಿನ ದಟ್ಟಣೆ ಇರುವ ಪ್ರದೇಶಗಳಲ್ಲಿ ಕೆಂಪು ಬಣ್ಣವು ಇತರ ವಾಹನ ಚಾಲಕರ ಗಮನ ಸೆಳೆಯುವ ಸಾಧ್ಯತೆಗಳು ಕಡಿಮೆ. ಬಹುತೇಕ ವಾಹನಗಳ ಟೇಲ್ ಲೈಟ್'ಗಳು ಕೆಂಪು ಬಣ್ಣದಲ್ಲಿರುವುದೇ ಇದಕ್ಕೆ ಕಾರಣ. ಇಂತಹ ಸಂದರ್ಭಗಳಲ್ಲಿ ನೀಲಿ ಬಣ್ಣವು ಇತರ ವಾಹನಗಳ ಚಾಲಕರನ್ನು ಎಚ್ಚರಿಸುತ್ತದೆ.

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಎಮರ್ಜೆನ್ಸಿ ಲೈಟ್'ಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣದ ಸಂಯೋಜನೆಯನ್ನು ಬಳಸಲು ಇದು ಪ್ರಮುಖ ಕಾರಣವಾಗಿದೆ. ಇದೇ ರೀತಿ ಇನ್ನೂ ಹಲವು ಕಾರಣಗಳಿವೆ. ಅಧ್ಯಯನಗಳ ಪ್ರಕಾರ ಹಗಲಿನಲ್ಲಿ ಕೆಂಪು ಬಣ್ಣ ಹಾಗೂ ರಾತ್ರಿಯಲ್ಲಿ ನೀಲಿ ಬಣ್ಣವು ಸುಲಭವಾಗಿ ಗೋಚರಿಸುತ್ತವೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಈ ಕಾರಣಕ್ಕೆ ಕೆಂಪು ಹಾಗೂ ನೀಲಿ ಬಣ್ಣಗಳ ಸಂಯೋಜನೆಯನ್ನು ಬಳಸಲಾಗುತ್ತದೆ. ಇದರಿಂದ ಹಗಲು ಅಥವಾ ರಾತ್ರಿ ವೇಳೆಯಲ್ಲಿ ಇತರ ವಾಹನ ಚಾಲಕರನ್ನು ಸುಲಭವಾಗಿ ಎಚ್ಚರಿಸಬಹುದು.

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಕೆಂಪು ಹಾಗೂ ನೀಲಿ ಬಣ್ಣಗಳ ಸಂಯೋಜನೆಯು ಬಣ್ಣ ಕುರುಡುತನ (ಕಲರ್ ಬ್ಲೈಂಡ್'ನೆಸ್) ಹೊಂದಿರುವ ಚಾಲಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಕಲರ್ ಬ್ಲೈಂಡ್'ನೆಸ್ ಹೊಂದಿರುವವರು ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಕೆಂಪು ಬಣ್ಣವನ್ನು ಗ್ರಹಿಸಲು ತೊಂದರೆಯಾಗುತ್ತದೆ. ಆದರೆ ಅಂತಹ ಜನರು ನೀಲಿ ಬಣ್ಣವನ್ನು ಸುಲಭವಾಗಿ ಗ್ರಹಿಸುತ್ತಾರೆ.

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಇನ್ನೂ ಕೆಲವರು ಕೆಂಪು ಬಣ್ಣವನ್ನು ಸುಲಭವಾಗಿ ಗ್ರಹಿಸುತ್ತಾರೆ. ಆದರೆ ಅವರಿಗೆ ನೀಲಿ ಬಣ್ಣವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎಮರ್ಜೆನ್ಸಿ ಲೈಟ್'ಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣವನ್ನು ಸಂಯೋಜಿಸಲಾಗಿರುತ್ತದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ತುರ್ತು ವಾಹನಗಳು ಕೆಂಪು, ನೀಲಿ ಬಣ್ಣದ ಎಮರ್ಜೆನ್ಸಿ ಲೈಟ್ ಹೊಂದಿರಲು ಕಾರಣಗಳಿವು

ಈ ಬಣ್ಣಗಳ ಸಂಯೋಜನೆಯಿಂದ ಕಲರ್ ಬ್ಲೈಂಡ್'ನೆಸ್ ನಿಂದ ಬಳಲುತ್ತಿರುವವರು ಸೇರಿದಂತೆ ಎಲ್ಲಾ ಚಾಲಕರನ್ನು ಎಚ್ಚರಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕೆ ತುರ್ತು ವಾಹನಗಳಲ್ಲಿರುವ ಎಮರ್ಜೆನ್ಸಿ ಲೈಟ್'ಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣ ಸಂಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

Most Read Articles

Kannada
English summary
Reasons for emergency vehicles having red and blue color emergency lights. Read in Kannada.
Story first published: Thursday, May 27, 2021, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X