ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಹಲವಾರು ಜನರು ವಿಮಾನಗಳಲ್ಲಿ ಪ್ರಯಾಣಿಸಿರುತ್ತಾರೆ. ಆದರೆ ಎಲ್ಲರಿಗೂ ಪೈಲಟ್‌ಗಳು ಕುಳಿತುಕೊಳ್ಳುವ ಕಾಕ್‌ಪಿಟ್‌ಗೆ ಪ್ರವೇಶಿಸುವ ಅವಕಾಶ ದೊರೆಯುವುದಿಲ್ಲ. ಕೆಲವೇ ಕೆಲವು ಜನರು ಮಾತ್ರ ವಿಮಾನದ ಕಾಕ್‌ಪಿಟ್‌ಗೆ ಭೇಟಿ ನೀಡಿರುತ್ತಾರೆ.

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ವಿಮಾನದ ಕಾಕ್‌ಪಿಟ್‌ಗೆ ಹೋದವರು ಪೈಲಟ್‌ಗಳು ಕುಳಿತುಕೊಳ್ಳುವ ಸೀಟುಗಳನ್ನು ಗಮನಿಸಿರಬಹುದು. ಬಹುತೇಕ ವಿಮಾನಗಳಲ್ಲಿ ಪೈಲಟ್‌ಗಳ ಆಸನವನ್ನು ಕುರಿ ಚರ್ಮದಿಂದ ಮುಚ್ಚಲಾಗಿರುತ್ತದೆ. ಆ ಸೀಟುಗಳು ಬೂದು ಅಥವಾ ಬಿಳಿ ಬಣ್ಣದ ಸ್ಪಂಜುಗಳಂತೆ ಕಾಣುತ್ತವೆ.

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ವಿಮಾನದ ಕಾಕ್‌ಪಿಟ್‌ಗೆ ಹೋಗದವರು ಸಿನಿಮಾಗಳಲ್ಲಿ ಅಥವಾ ಫೋಟೋಗಳಲ್ಲಿ ಪೈಲಟ್‌ಗಳ ಸೀಟುಗಳನ್ನು ಕಾಣಬಹುದು. ಪೈಲಟ್‌ಗಳ ಸೀಟುಗಳನ್ನು ನೋಡುವವರಿಗೆ ಅವುಗಳಲ್ಲಿ ಕುರಿ ಚರ್ಮವನ್ನು ಏಕೆ ನೀಡಲಾಗಿರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಪೈಲಟ್‌ಗಳ ಆಸನಗಳಲ್ಲಿ ಕುರಿ ಚರ್ಮವನ್ನು ಬಳಸುವುದರ ಹಿಂದೆ ವಿವಿಧ ಕಾರಣಗಳಿವೆ. ಯಾವ ಕಾರಣಕ್ಕೆ ಪೈಲಟ್‌ಗಳ ಆಸನಗಳಲ್ಲಿ ಕುರಿ ಚರ್ಮವನ್ನು ಬಳಸಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಕಾಕ್‌ಪಿಟ್‌ನ ತಾಪಮಾನವೇನೆ ಇರಲಿ, ಪೈಲಟ್‌ಗಳು ಕುರಿ ಚರ್ಮಗಳನ್ನು ಆಸನಗಳಲ್ಲಿ ಬಳಸುವುದಕ್ಕೆ ಪ್ರಮುಖ ಕಾರಣವೆಂದರೆ ಬೇಸಿಗೆಯಲ್ಲಿ ಆಸನಗಳನ್ನು ತಂಪಾಗಿಡುವುದಕ್ಕೆ ಹಾಗೂ ಚಳಿಗಾಲದಲ್ಲಿ ಬೆಚ್ಚಗಿಡುವುದಕ್ಕೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಕುರಿ ಚರ್ಮಗಳು ಹೈಪೋಲಾರ್ಜನಿಕ್ ಕೂಡ ಆಗಿರುತ್ತವೆ. ಅವು ಕುಳಿತುಕೊಳ್ಳುವವರಿಗೆ ಕಿರಿಕಿರಿಯನ್ನುಂಟು ಮಾಡುವುದಿಲ್ಲ. ಜೊತೆಗೆ ಯಾವುದೇ ಅಲರ್ಜಿಯನ್ನುಂಟು ಮಾಡುವುದಿಲ್ಲ.

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಕುರಿ ಚರ್ಮವನ್ನು ಪೈಲಟ್‌ಗಳ ಸೀಟುಗಳಲ್ಲಿ ಬಳಸಲು ಮತ್ತೊಂದು ಕಾರಣವೆಂದರೆ ಅವು ಸುಲಭವಾಗಿ ಉರಿಯುವುದಿಲ್ಲ. ವಿಮಾನಗಳ ಪ್ರಮಾಣೀಕರಣದ ಕಾರ್ಯವಿಧಾನಗಳಲ್ಲಿ ಈ ಅಂಶವು ಕಡ್ಡಾಯವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಕುರಿ ಚರ್ಮವು ತನ್ನಲ್ಲಿ ನೈಸರ್ಗಿಕವಾಗಿ ಅಧಿಕವಾಗಿರುವ ಸಾರಜನಕ ಹಾಗೂ ನೀರಿನ ಅಣುವಿನಿಂದಾಗಿ ಸುಲಭವಾಗಿ ಸುಡುವುದಿಲ್ಲ. ಕುರಿ ಚರ್ಮದಲ್ಲಿರುವ ಈ ಅಂಶದಿಂದಾಗಿ ಪೈಲಟ್‌ಗಳ ಸೀಟುಗಳಲ್ಲಿ ಅವುಗಳನ್ನು ಬಳಸಲಾಗುತ್ತದೆ.

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಕುರಿ ಚರ್ಮವು ಬಾಳಿಕೆ ಬರುವ ಕಾರಣ, ಪೈಲಟ್‌ಗಳ ಸೀಟುಗಳಲ್ಲಿ ಅವುಗಳನ್ನು ಬಳಸಲಾಗುತ್ತದೆ. ಕುರಿ ಚರ್ಮವನ್ನು ವಿಮಾನಗಳ ಕಾಕ್‌ಪಿಟ್‌ಗಳಲ್ಲಿರುವ ಪೈಲಟ್‌ಗಳ ಸೀಟುಗಳಲ್ಲಿ ಮಾತ್ರ ಬಳಸುವುದಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೈಲಟ್ ಸೀಟುಗಳು ಕುರಿ ಚರ್ಮ ಹೊಂದಿರಲು ಕಾರಣಗಳಿವು

ಕೆಲವರು ಕಾರು ಹಾಗೂ ದ್ವಿಚಕ್ರ ವಾಹನಗಳ ಸೀಟುಗಳಲ್ಲಿಯೂ ಕುರಿ ಚರ್ಮವನ್ನು ಬಳಸುತ್ತಾರೆ. ಕುರಿ ಚರ್ಮದ ಸೀಟುಗಳ ಮೇಲೆ ಕುಳಿತಾಗ ಮೆತ್ತನೆಯ ಅನುಭವವಾಗುತ್ತದೆ.

Most Read Articles

Kannada
English summary
Reasons for pilot seats having sheep skin cover. Read in Kannada.
Story first published: Saturday, March 20, 2021, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X