ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಜನರು ವಿಮಾನಗಳಲ್ಲಿ ಸಂಚರಿಸುವಾಗ ಪೈಲಟ್‌ಗಳನ್ನು ಗಮನಿಸಿರ ಬಹುದು. ಬಹುತೇಕ ಪೈಲಟ್‌ಗಳು ತಮ್ಮ ಮುಖವನ್ನು ಶೇವ್ ಮಾಡಿರುತ್ತಾರೆ. ಪೈಲಟ್‌ಗಳು ಗಡ್ಡ ಬಿಡಲು ವಿಮಾನಯಾನ ಕಂಪನಿಗಳು ಅನುಮತಿ ನೀಡುವುದಿಲ್ಲ.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಆದರೆ ಕೆಲವು ಕೆಲವು ವಿಮಾನಯಾನ ಕಂಪನಿಗಳು ಮಾತ್ರ ತಮ್ಮ ಪೈಲಟ್‌ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಗಡ್ಡ ಬಿಡಲು ಅನುಮತಿ ನೀಡುತ್ತವೆ. ಯಾವ ಕಾರಣಕ್ಕೆ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲವೆಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಭದ್ರತಾ ಕಾರಣಗಳು

ವಿಮಾನಯಾನ ಕಂಪನಿಗಳು ಭದ್ರತಾ ಕಾರಣಗಳಿಗಾಗಿ ಪೈಲಟ್‌ಗಳು ಗಡ್ಡ ಬಿಡುವುದನ್ನು ನಿಷೇಧಿಸುತ್ತಿವೆ. ವಿಮಾನವು ನಿರ್ದಿಷ್ಟ ಎತ್ತರದಿಂದ ಮೇಲಕ್ಕೆ ಹಾರಿದಾಗ ಆಕ್ಸಿಜನ್ ಮಾಸ್ಕ್'ಗಳನ್ನು ಧರಿಸಬೇಕು. ಈ ಕಾರಣಕ್ಕೆ ಪೈಲಟ್‌ಗಳಿಗೆ ಗಡ್ಡ ಬಿಡಲು ವಿಮಾನಯಾನ ಕಂಪನಿಗಳು ಅನುಮತಿ ನೀಡುವುದಿಲ್ಲ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ವಿಮಾನಗಳು 12,500 ಅಡಿಗಳಿಗಿಂತ ಹೆಚ್ಚು ಮೇಲೆ ಹಾರಾಟ ನಡೆಸುವಾಗ ಯಾವುದೇ ಸಮಯದಲ್ಲಿ ಗಾಳಿಯ ಒತ್ತಡ ಇಳಿಯಬಹುದು. ಆ ಸಮಯದಲ್ಲಿ ಆಕ್ಸಿಜನ್ ಪೂರೈಕೆಗೆ ಅಡಚಣೆಯಾದರೆ ದೊಡ್ಡ ಅಪಾಯ ಎದುರಾಗುತ್ತದೆ.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಈ ವೇಳೆ ಪೈಲಟ್‌ಗಳಿಗೆ ಆಕ್ಸಿಜನ್ ಪೂರೈಸ ಬೇಕಾಗುತ್ತದೆ. ಈ ವೇಳೆ ಆಕ್ಸಿಜನ್ ಸರಬರಾಜು ಆಗುವುದನ್ನು ತಡೆಯಬಾರದು ಎಂಬ ಏಕೈಕ ಕಾರಣಕ್ಕೆ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ದೊಡ್ಡದಾಗಿ ಗಡ್ಡ ಬಿಡಲು ಅವಕಾಶ ನೀಡುವುದಿಲ್ಲ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಗಡ್ಡವು ದೊಡ್ಡದಾಗಿದ್ದರೆ ಮಾಸ್ಕ್'ಗಳು ಪೈಲಟ್‌ಗಳ ಮುಖಕ್ಕೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಇದರಿಂದ ಪೈಲಟ್‌ಗಳಿಗೆ ಆಕ್ಸಿಜನ್ ಸಿಗದಂತಾಗುತ್ತದೆ. ಈ ಅಂಶವನ್ನು ಪರಿಗಣಿಸಿ ಹಲವು ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲ.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಈ ವಿಷಯದ ಬಗ್ಗೆ ವಿಜ್ಞಾನ ಹೇಳುವುದೇನು?

ಇತ್ತೀಚೆಗೆ ಕೆನಡಾದ ಸೈಮನ್ ಫ್ರೇಸರ್ ವಿಶ್ವವಿದ್ಯಾಲಯವು ಗಡ್ಡದ ಮೇಲೆ ಆಕ್ಸಿಜನ್ ಮಾಸ್ಕ್ ಬಳಸುವುದರಿಂದ ಆಗುವ ಪರಿಣಾಮಗಳ ಕುರಿತು ಅಧ್ಯಯನನಡೆಸಿತು. ಇದಕ್ಕಾಗಿ ಮೂರು ಗುಂಪುಗಳನ್ನು ರಚಿಸಲಾಗಿತ್ತು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಈ ಗುಂಪಿನಲ್ಲಿದ್ದ ಯಾರಿಗೂ ಗಡ್ಡವಿರಲಿಲ್ಲ. ಒಬ್ಬರು ಅಲ್ಪ ಪ್ರಮಾಣದ ಗಡ್ಡ ಹಾಗೂ ಮತ್ತೊಬ್ಬರು ಹೆಚ್ಚು ಗಡ್ಡವನ್ನು ಅಂಟಿಸಿಕೊಂಡು ಆಕ್ಸಿಜನ್ ಮಾಸ್ಕ್ ಬಳಸಿದಾಗ ಆಕ್ಸಿಜನ್ ಮಟ್ಟ ಎಷ್ಟಿರುತ್ತದೆ ಎಂಬುದನ್ನು ಪರೀಕ್ಷಿಸಿದರು.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಆಕ್ಸಿಜನ್ ಮಾಸ್ಕ್ ಹಾಗೂ ಗಡ್ಡದ ನಡುವೆ ಕಿರಿಕಿರಿ ಅನುಭವವಾಗುತ್ತದೆಯೇ ಎಂಬುದನ್ನು ಸಂಶೋಧನೆ ನಡೆಸಿದರು. ಆದರೆ ಈ ಸಂಶೋಧನೆಯಲ್ಲಿ ಅಲ್ಪ ಪ್ರಮಾಣದ ಗಡ್ಡ ಹಾಗೂ ಹೆಚ್ಚು ಗಡ್ಡ ಎರಡೂ ಒಂದೇ ರೀತಿಯ ಅನುಭವಗಳನ್ನು ಪಡೆದಿವೆ ಎಂದು ಕಂಡು ಬಂದಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಆದರೆ ಹಲವು ವರ್ಷಗಳಿಂದ ಜಾರಿಯಲ್ಲಿರುವ ನಿಯಮಗಳನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲವೆಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ಈ ನಿಯಮಗಳನ್ನು ಬದಲಿಸುವ ಮುನ್ನ ಮತ್ತಷ್ಟು ಸಂಶೋಧನೆ ನಡೆಸಬೇಕು ಎಂಬುದು ವಿಮಾನಯಾನ ತಜ್ಞರ ಅಭಿಪ್ರಾಯ.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಗಡ್ಡ ಹೊಂದಲು ಅನುಮತಿ ನೀಡಿರುವ ವಿಮಾನಯಾನ ಕಂಪನಿಗಳು

ಪೈಲಟ್‌ಗಳು ಗಡ್ಡ ಬಿಡಲು ಅನುಮತಿ ನೀಡಿರುವ ವಿಮಾನಯಾನ ಕಂಪನಿಗಳಲ್ಲಿ ಅಮೆರಿಕೇತರ ವಿಮಾನಯಾನ ಕಂಪನಿಗಳೇ ಸೇರಿವೆ. ಅವುಗಳಲ್ಲಿ ಏರ್ ಕೆನಡಾ ಸಹ ಒಂದು. ಅಮೆರಿಕಾದಲ್ಲಿರುವ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಭವಿಷ್ಯದಲ್ಲಿ ಈ ಪರಿಸ್ಥಿತಿ ಬದಲಾಗುವ ನಿರೀಕ್ಷೆಗಳಿವೆ. ಇದಕ್ಕೆ ಏರ್ ಕೆನಡಾ ಕಂಪನಿ ಉತ್ತಮ ಉದಾಹರಣೆಯಾಗಿದೆ. ಇಂತಹ ಹಲವು ಕಂಪನಿಗಳು ತಮ್ಮ ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಮೀಸೆ ಬಗ್ಗೆ

ಮೀಸೆ ಬಿಡುವುದರ ಬಗ್ಗೆ ವಿಮಾನಯಾನ ಕಂಪನಿಗಳು ನಿರ್ಬಂಧ ವಿಧಿಸಿಲ್ಲ. ಪೈಲಟ್‌ಗಳು ಉದಾರವಾಗಿ ಮೀಸೆ ಬೆಳೆಸಬಹುದು ಎಂದು ಹಲವು ವಿಮಾನಯಾನ ಕಂಪನಿಗಳು ಹೇಳಿವೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಿಮಾನಗಳ ಪೈಲಟ್‌ಗಳು ಗಡ್ಡ ಬಿಡದೇ ಇರಲು ಪ್ರಮುಖ ಕಾರಣಗಳಿವು

ಆದರೂ ಕೆಲವು ಪೈಲಟ್‌ಗಳು ತಮ್ಮ ಗಡ್ಡ ಹಾಗೂ ಮೀಸೆಗಳನ್ನು ಟ್ರಿಮ್ ಮಾಡುತ್ತಾರೆ. ಇನ್ನೂ ಕೆಲವು ಪೈಲಟ್‌ಗಳು ದೊಡ್ಡದಾಗಿ ಮೀಸೆ ಬಿಡುವುದನ್ನು ಕಾಣಬಹುದು.

Article Published On: Tuesday, June 8, 2021, 18:35 [IST]
English summary
Reasons for pilots not having beard. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+