viral video: ಜೀವ ಪಣಕ್ಕಿಟ್ಟು ದನಗಳ ರಕ್ಷಿಸಿದವನ ಕಾರು ನಜ್ಜುಗುಜ್ಜು! ಆದ್ರೆ ಚಾಲಕ...
ಭಾರತದಲ್ಲಿ ಈಗ ಅಂತರಾಷ್ಟ್ರೀಯ ಮಟ್ಟದ ಹೆದ್ದಾರಿಗಳಿವೆ, ಭಾರತೀಯ ರಸ್ತೆಗಳು ಮತ್ತು ಮೂಲಸೌಕರ್ಯಗಳು ವೇಗವಾಗಿ ಸುಧಾರಿಸುತ್ತಿವೆ. ನಾವು ಈಗ ಎಕ್ಸ್‌ಪ್ರೆಸ್‌ವೇಗಳನ್ನು ಕೂಡ ಹೊಂದಿದ್ದೇವೆ, ಆದ್ರೂ ಕೂಡ ಹೆದ್ದಾರಿಗಳಲ್ಲಿ ನಾವು ಒಪ್ಪಲಾಗದಂತಹ ಕಾರಣಗಳಿಂದ ಅಪಘಾತಗಳು ನಡೆಯುತ್ತವೆ ಎಂದರೆ ಯಾವಮಟ್ಟಿಗೆ ನಿಯಮಗಳ ಉಲ್ಲಂಘನೆಯಾಗುತ್ತದೆ ಒಮ್ಮೆ ಯೋಚಿಸಬೇಕಾದ ಸಂಗತಿ.
ನಿಯಮಗಳ ಉಲ್ಲಂಘನೆ ಹೊರತಾಗಿ, ಜಾನುವಾರುಗಳು, ಬೀದಿ ನಾಯಿಗಳು ಅಡ್ಡ ಬರುವ ಸಮಸ್ಯೆಗಳನ್ನು ಎದುರಿಸುತ್ತೇವೆ. ಇವುಗಳಿಂದ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಇದೀಗ ಅಂತಹದ್ದೇ ಅವಘಡ ಸಂಭವಿಸಿದ್ದು, ಎಮ್ಮೆ ಅಥವಾ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿ ರೆನಾಲ್ಟ್ ಟ್ರೈಬರ್ ಉರುಳಿಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಜಾನುವಾರುಗಳ ಹಿಂಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿರುವುದಾಗಿ ತಿಳಿದುಬಂದಿದೆ. ಈ ವೇಳೆ ಒಂದು ಎಮ್ಮೆ ಡಿವೈಡರ್‌ಗೆ ಸಿಲುಕಿದ್ದಾಗ ಟೈರ್ ಅದಕ್ಕೆ ಒಡೆದಿದೆ. ಕೂಡಲೇ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ. ಈ ಕುರಿತ ವೈರಲ್ ವಿಡಿಯೋವನ್ನು ನೋಡಿದ್ರೆ ರೆನಾಲ್ಟ್ ಟ್ರೈಬರ್ ಹೆಚ್ಚಿನ ವೇಗದಲ್ಲಿ ಓಡಿಸುತ್ತಿರುವುದು ತಿಳಿದುಬಂದಿದೆ.
ಎ ಪಿಲ್ಲರ್, ಮುಂಭಾಗದ ವಿಂಡ್‌ಶೀಲ್ಡ್, ಸೈಡ್ ಪ್ಯಾನಲ್‌ಗಳು ಮತ್ತು ಡೋರ್‌ಗಳು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದ ಚಾಲಕ ಸೀಟ್ ಬೆಲ್ಟ್ ಹಾಕಿದ್ದ ಕಾರಣ, ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಿಂದ ಪಾರಾಗಿದ್ದಾನೆ. ಆದರೆ, ಕಾರಣಾಂತರಗಳಿಂದ ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ರೆನಾಲ್ಟ್ ಟ್ರೈಬರ್‌ನಲ್ಲಿನ ಟೈರ್‌ಗಳು ಹಾನಿಗೊಳಗಾಗಿರುವುದು ಸ್ಪಷ್ಟವಾಗಿದೆ. ಕಾರು ರಿಪೇರಿ ಮಾಡಲು ಸಾಧ್ಯವಾಗದಷ್ಟು ಹಾನಿಯಾಗಿದೆ. ಕಾರಿನ ಸ್ಥಿತಿಯನ್ನು ಗಮನಿಸಿದರೆ ಇದು ಖಂಡಿತ ದೊಡ್ಡ ಅಪಘಾತದಂತೆ ಕಾಣುತ್ತಿದೆ. ಆದ್ರೂ ಚಾಲಕ ಬದುಕುಳಿದಿರುವುದು ರೆನಾಲ್ಟ್ ಟ್ರೈಬರ್‌ನ ನಿರ್ಮಾಣ ಗುಣಮಟ್ಟದಿಂದಲೇ ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ರೆನಾಲ್ಟ್ ಟ್ರೈಬರ್ ಅದ್ಬುತ ಗುಣಮಟ್ಟ: ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ರೆನಾಲ್ಟ್ ಟ್ರೈಬರ್ 4-ಸ್ಟಾರ್ ರೇಟಿಂಗ್ ಗಳಿಸಿದೆ. ಇದೊಂದೆ ಕಾರಣ ಅಪಘಾತದಲ್ಲಿ ಚಾಲಕನನ್ನು ಕಾಪಾಡಿದೆ ಎಂಬುದು ನಮ್ಮ ಅನಿಸಿಕೆ. ಹಾಗೆಯೇ ಆತನ ಅದೃಷ್ಟ ಕೂಡ ಕರುಣಿಸಿದೆ ಎಂದೇ ಹೇಳಬಹುದು. ಏಕೆಂದರೆ ಆ ಮಟ್ಟದ ಅಪಘಾತದಲ್ಲಿ ಬದುಕುಳಿಯುವುದು ಅಸಾಧ್ಯ.

ನೀವು ವೀಡಿಯೊವನ್ನು ಎಚ್ಚರಿಕೆಯಿಂದ ಗಮನಿಸಿದರೆ, ಟ್ರೈಬರ್‌ನ ಎ ಪಿಲ್ಲರ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ, ಹಾಗೆಯೇ ರೂಫ್ ಮತ್ತು ವಿಂಡ್‌ಸ್ಕ್ರೀನ್ ಎಲ್ಲವೂ ನಜ್ಜುಗುಜ್ಜಾಗಿದೆ. ಡ್ಯಾಶ್‌ಬೋರ್ಡ್ ಮತ್ತು ಸ್ಟೀರಿಂಗ್ ವೀಲ್ ಸಹ ಹಾನಿಗೊಳಗಾಗಿವೆ. ಈ ಘಟನೆಯು ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕತೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ರಸ್ತೆಯಲ್ಲಿ ವೇಗದ ಮಿತಿಯನ್ನು ಪಾಲಿಸಿದ್ದರೆ ಸಕಾಲದಲ್ಲಿ ವಾಹನ ನಿಲ್ಲಿಸಿ ಈ ರೀತಿಯ ಅಪಘಾತವನ್ನು ತಪ್ಪಿಸಬಹುದಿತ್ತು. ಆದ್ರೂ ಇದು ಹೆದ್ದಾರಿ ಆಗಿರುವುದರಿಂದ ಚಾಲಕನನ್ನು ನಿಂಧಿಸಲು ಸಾಧ್ಯವಿಲ್ಲ, ಏಕೆಂದರೆ ಹೆದ್ದಾರಿಗಳಿರುವುದೇ ತುಸು ವೇಗದಲ್ಲಿ ಚಲಿಸಲು. ಹಾಗಯೇ ಹೆದ್ದಾರಿಗಳಿಗೆ ಜಾನುವಾರುಗಳನ್ನು ಬಿಡುವುದು ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಿದೆ.
ಗುಣಮಟ್ಟಕ್ಕೆ ಆದ್ಯತೆ: ಸದ್ಯ ಭಾರತದಲ್ಲಿನ ಕಾರು ತಯಾರಕರು ನಿರ್ಮಾಣ ಗುಣಮಟ್ಟವನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಟಾಟಾ ಮತ್ತು ಮಹೀಂದ್ರಾದಂತಹ ಬ್ರ್ಯಾಂಡ್‌ಗಳು ತಮ್ಮ ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದಾರೆ. ರೆನಾಲ್ಟ್, ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕೂಡ ಈ ಗುಂಪಿಗೆ ಸೇರಿಕೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications