ಸಿಸಿಟಿವಿಯಲ್ಲಿ ಕೃತ್ಯ ಸೆರೆ: ಶ್ರೀಮಂತ ಮಹಿಳೆ ದುಬಾರಿ ಕಾರಿನಲ್ಲಿ ಬಂದು ಮಾಡಿದ ಕೆಲಸಕ್ಕೆ ಎಲ್ಲರು ಶಾಕ್!

ಸಮಾಜದಲ್ಲಿ ಶ್ರೀಮಂತರು ಏನು ಮಾಡಿದ್ರೂ ಸರಿ ಎನ್ನುವ ಒಂದು ಕಾಲವಿತ್ತು, ಆದ್ರೆ ಈಗ ಎಲ್ಲವೂ ಬದಲಾಗಿದೆ. ವೇಗದ ಇಂಟರ್‌ನೆಟ್ ಜಗತ್ತಿನಲ್ಲಿ ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ ಎರಲ್ಲೂ ಸಮಾನರೇ, ಸೋಷಿಯಲ್ ಮೀಡಿಯಾ ಎಂಬ ಅಸ್ತ್ರವು ಸದ್ಯದ ಪರಿಸ್ಥಿಗಳನ್ನು ಎಲ್ಲರಿಗೂ ವೇಗವಾಗಿ ತಲುಪಿಸುತ್ತಿದೆ. ಇತ್ತೀಚೆಗೆ ದುಬಾರಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದು ಮಹಿಳೆ ಮಾಡಿದ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಇಡೀ ಘಟನೆಯು ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವಾಗಿದೆ. ನೆಟ್ಟಿಗರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?: ಆಶ್ಚರ್ಯಕರ ಘಟನೆಯೊಂದರಲ್ಲಿ, ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರಸ್ತೆಯ ಬದಿಯಿಂದ ಹೂವಿನ ಕುಂಡಿಯನ್ನು ಕದ್ದೊಯ್ಯುವ ದೃಷ್ಯಗಳು ಕಂಡುಬಂದಿವೆ. ದುರದೃಷ್ಟವಶಾತ್ ಆಕೆಯ ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡಲು ಶ್ರೀಮಂತರಂತೆ ಕಾಣುವ ಮಹಿಳೆ ಇಂತಹ ಕೆಲಸವನ್ನು ಏಕೆ ಮಾಡಿದ್ದಾರೆ? ಶ್ರೀಮಂತ ಕುಟುಂಬಕ್ಕೆ ಸೇರಿದವರು ಕೇವಲ 500 ರೂ. ಹೂವಿನ ಕುಂಡಿಗಾಗಿ ಕಳ್ಳತನ ಮಾಡುವುದು ಅಚ್ಚರಿಗೊಳಿಸಿದೆ.

rich-women-steal-roadside-flower-pot-visual-caught-in-cctv

ಈ ಅಚ್ಚರಿಯ ವಿಡಿಯೋವನ್ನು X (ಟ್ವಿಟ್ಟರ್)ನಲ್ಲಿ ಸಚಿನ್ ಗುಪ್ತಾ ಎಂಬವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆರೆಂಜ್ ಬಣ್ಣದ ದುಬಾರಿ ಬಿಎಂಡಬ್ಲ್ಯು ಕಾರನ್ನು ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 18ರ ರಸ್ತೆಯೊಂದರ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ದುಬಾರಿ ಬಿಎಂಡಬ್ಲ್ಯು ಎಸ್‌ಯುವಿಯಿಂದ ಮಹಿಳೆಯೊಬ್ಬರು ಹೊರಬಂದು ರಸ್ತೆ ಬದಿಯಲ್ಲಿದ್ದ ಹೂವಿನ ಕುಂಡಿಯನ್ನು ಕದ್ದು ಕಾರಿನಲ್ಲಿ ಇರಿಸುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಇನ್ನೂ ವಿಚಿತ್ರವೆಂದರೆ ಆ ಮಹಿಳೆಗೆ ಕುಂಡಿಯನ್ನು ಕಾರಿನಲ್ಲಿ ಇರಿಸಲು ಅದೇ ಕಾರಿನಲ್ಲಿದ್ದ ಮತ್ತೊಬ್ಬರು ಸಹಾಯ ಮಾಡಿದ್ದಾರೆ. ಹೂವಿನ ಕುಂಡಿಯನ್ನು ಕಾರಿನೊಳಗೆ ಇರಿಸಿದ ಮಹಿಳೆ ರಸ್ತೆ ಬದಿಯಿದ್ದ ಯಾರೊಂದಿಗೋ ಮಾತನಾಡುವುದನ್ನು ಸಹ ಕಾಣಬಹುದು. ಬಹುಶಃ ಆಕೆಯ ಕೃತ್ಯಗಳ ಬಗ್ಗೆ ಸ್ಥಳೀಯರೊಬ್ಬರು ಪ್ರಶ್ನಿಸಿರಬೇಕು. ಆದ್ರೆ ವಿಡಿಯೋ ಅಲ್ಲಿಗೆ ಕೊನೆಗೊಳ್ಳುವುದರಿಂದ ನಂತರ ಏನಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.

rich-women-steal-roadside-flower-pot-visual-caught-in-cctv

ಈ ಇಡೀ ಘಟನೆಯು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ದುಬಾರಿ ಕಾರಿದ್ದವರು ಇಂತಹ ಕೃತ್ಯಗಳನ್ನು ಮಾಡಲು ಕಾರಣವೇನಿರಬಹುದು? ಎಂದು ಕೆಲವರು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಆಕೆಯ ಕೃತ್ಯಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕರು ಇಂತಹ ಕೃತ್ಯಗಳನ್ನು ಮಾಡಿದ್ರೆ ಸುಮ್ಮನೆ ಬಿಡುವರೇ? ಶ್ರೀಮಂತರ ವಿಷಯದಲ್ಲೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆಯೂ ಇಂತಹ ಒಂದೆರಡು ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಕೆಲವು ಕಾರಣಗಳಿಂದಾಗಿ, ದೊಡ್ಡ ಕಾರುಗಳಲ್ಲಿ ಬಂದು ಜನರು ಇಂತಹ ಕೃತ್ಯಗಳನ್ನು ಎಸಗಿರುವುದು ಈ ಹಿಂದೆ ವಿಡಿಯೋಗಳಲ್ಲಿ ಸೆರೆಹಿಡಿಯಲಾಗಿತ್ತು. ಈ ಪ್ರಕರಣಗಳಲ್ಲಿಯೂ ಹೂವಿನ ಕುಂಡಿಗಳನ್ನು ಕದ್ದೊಯ್ದ ಉದಾಹರಣೆಗಳಿವೆ. ಕಾರುಗಳಿಗೆ ಕೋಟಿ ಖರ್ಚು ಮಾಡುವ ವ್ಯಕ್ತಿಗಳು, 500 ರಿಂದ 1000 ರೂ. ಒಳಗಿನ ಹೂವಿನ ಕುಂಡಿಗಳನ್ನು ಕಳ್ಳತನ ಮಾಡುವುದು ವಿಚಿತ್ರವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಮಗೆ ಘಟನೆಯ ಬಗ್ಗೆ ಪೂರ್ಣ ಕಥೆ ತಿಳಿದಿಲ್ಲ, ಈ ವ್ಯಕ್ತಿಗಳನ್ನು ಕಳ್ಳರು ಎಂದು ನಿರ್ಧಾರಿಸಲು ಸಾಧ್ಯವಿಲ್ಲ. ಆದರೂ ಈ ವಿಡಿಯೋವನ್ನು ನೋಡಿದ್ರೆ ಆಶ್ಚರ್ಯಕರವಾಗಿದೆ. ಈ ವಿಡಿಯೋ ಕುರಿತ ಹೆಚ್ಚಿನ ಮಾಹಿತಿ ಲಭ್ಯವಾದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ತರುತ್ತೇವೆ. ಈ ಘಟನೆ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 29, 2024, 13:40 [IST]
English summary
Rich women steal roadside flower pot visual caught in cctv
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+