83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಸಿನಿಮಾ ನಟರಾಗಿರಲಿ ಅಥವಾ ಕ್ರೀಡಾಪಟುವಾಗಿರಲಿ ವಿಶ್ವದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ದುಬಾರಿ ಕಾರುಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಅದರಲ್ಲೂ ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದರೆ ಈ ಕ್ರೇಜ್ ತುಸು ಹೆಚ್ಚೇ ಇರುತ್ತದೆ.

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಹೌದು, ನಾವು ಹೇಳುತ್ತಿರುವುದು ವಿಶ್ವದ ಅತ್ಯುತ್ತಮ ಹಾಗೂ ಶ್ರೀಮಂತ ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊರವರ ಬಗ್ಗೆ. ಕ್ರಿಸ್ಟಿಯಾನೊ ರೊನಾಲ್ಡೊ ಸದ್ಯಕ್ಕೆ ಜುವೆಂಟಸ್ ಕ್ಲಬ್ ಪರ ಆಡುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಕ್ಲಬ್‌ 36ನೇ ಸರಣಿಯ ಎ ಚಾಂಪಿಯನ್‌ಶಿಪ್ ಗೆಲ್ಲಲು ನೆರವಾಗಿದ್ದಾರೆ. ಇದೇ ಖುಷಿಯಲ್ಲಿ ಅವರು ವಿಶ್ವದ ಅತ್ಯಂತ ದುಬಾರಿ ಬೆಲೆಯ ಕಾರನ್ನು ಖರೀದಿಸಿದ್ದಾರೆ. ಅವರು ಖರೀದಿಸಿರುವ ಕಾರಿನ ಕೇವಲ 10 ಯುನಿಟ್ ಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಮಾಧ್ಯಮ ಮೂಲಗಳ ಪ್ರಕಾರಕ್ರಿಸ್ಟಿಯಾನೊ ರೊನಾಲ್ಡೊರವರು ಬುಗಾಟಿ ಸಂಟೋಡಿಚಿ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ 8.5 ಮಿಲಿಯನ್ ಯುರೋಗಳಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.83 ಕೋಟಿಗಳಾಗುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಕ್ರಿಸ್ಟಿಯಾನೊ ರೊನಾಲ್ಡೊರವರು ಈಗಾಗಲೇ ಚಿರೋನ್, ವೇರಿಯನ್, ಲಾ ವಾಯ್ತೂರ್ ನಾಯ್ರ್ ಎಂಬ ಮೂರು ಮಾದರಿಯ ಬುಗಾಟಿ ಕಾರುಗಳನ್ನು ಹೊಂದಿದ್ದಾರೆ. ಬುಗಾಟಿ ಸಂಟೋಡಿಚಿ ಕಾರು ಚಿರೋನ್ ಮಾದರಿಯ ಮೇಲೆ ಆಧಾರಿತವಾಗಿದೆ. ಈ ಕಾರ್ ಅನ್ನು ಸೀಮಿತ ಸಂಖ್ಯೆಯಲ್ಲಿ ತಯಾರಿಸಲಾಗಿದೆ.

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಈ ಸೂಪರ್ ಕಾರು 8 ಲೀಟರಿನ ಡಬ್ಲ್ಯು 16 ಎಂಜಿನ್ ಹೊಂದಿದೆ. ಈ ಎಂಜಿನ್ 1600 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಕಾರು ಕೇವಲ 2.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಬುಗಾಟಿ ಸಂಟೋಡಿಚಿ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 380 ಕಿ.ಮೀಗಳಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಕಂಪನಿಯು ಈ ಕಾರನ್ನು ಮುಂದಿನ ವರ್ಷ ರೊನಾಲ್ಡೊಗೆ ಹಸ್ತಾಂತರಿಸಲಿದೆ. ರೊನಾಲ್ಡೊರವರು ಈಗಾಗಲೇ ಶತಕೋಟಿ ಬೆಲೆ ಬಾಳುವ ಕಾರುಗಳನ್ನು ಹೊಂದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಮರ್ಸಿಡಿಸ್ ಜಿ ವ್ಯಾಗನ್ ಕಾರ್ ಅನ್ನು ಉಡುಗೊರೆಯಾಗಿ ಪಡೆದಿದ್ದರು.

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಸಂಟೋಡಿಚಿ ಎಂದರೆ ಇಟಾಲಿಯನ್ ಭಾಷೆಯಲ್ಲಿ 110 ಎಂದು ಅರ್ಥ. ಬುಗಾಟಿ ಕಂಪನಿಯು ತನ್ನ 110ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಬಿಳಿ ಹಾಗೂ ಕಪ್ಪು ಬಣ್ಣವನ್ನು ಹೊಂದಿರುವ ಈ ಕಾರು ಅಗ್ರೇಸಿವ್ ಡಿಸೈನ್ ಹೊಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಕ್ರಿಸ್ಟಿಯಾನೊ ರೊನಾಲ್ಡೊರವರು ರೋಲ್ಸ್ ರಾಯ್ಸ್ ಫ್ಯಾಂಟಮ್, ಲ್ಯಾಂಬೊರ್ಗಿನಿ ಅವೆಂಟಡಾರ್, ಫೆರಾರಿ ಎಫ್ 430, ಮಾಸೆರೋಟಿ ಗ್ರೆನಾಕಾಬ್ರಿಯೊ ಹಾಗೂ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಕಾರುಗಳನ್ನು ಸಹ ಹೊಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೆಕ್ ಲಾರೆನ್ ಸಿಯೆನಾ ಸೂಪರ್ ಕಾರ್ ಅನ್ನು ಖರೀದಿಸಿದ್ದರು.

83 ಕೋಟಿ ರೂಪಾಯಿ ಮೌಲ್ಯದ ಸೂಪರ್ ಕಾರು ಖರೀದಿಸಿದ ಶ್ರೀಮಂತ ಕ್ರೀಡಾಪಟು

ಈ ಸೂಪರ್‌ಕಾರಿನ 500 ಯುನಿಟ್ ಗಳನ್ನು ಮಾತ್ರ ತಯಾರಿಸಲಾಗಿದೆ. ಈ ಕಾರಿಗೆ ಸುಪ್ರಸಿದ್ಧ ಎಫ್ 1 ಚಾಲಕ ಅರ್ತನ್ ಸಿಯೆನಾ ಅವರ ಹೆಸರನ್ನಿಡಲಾಗಿದೆ. ಕ್ರಿಸ್ಟಿಯಾನೊ ರೊನಾಲ್ಡೊರವರ ಬಳಿ 2 ಬಿಲಿಯನ್ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಕಾರುಗಳಿವೆ ಎಂದು ಹೇಳಲಾಗಿದೆ.

Most Read Articles

Kannada
English summary
Richest football player Christiano Ronaldo buys super car worth Rs.83 crore. Read in Kannada.
Story first published: Monday, August 3, 2020, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X