ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ಬಾಲಿವುಡ್ ನಟ ರಿಷಿ ಕಪೂರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಅವರ ಕುಟುಂಬದ ಸದಸ್ಯರೆಲ್ಲರೂ ಅವರ ಪಾರ್ಥೀವ ಶರೀರದತ್ತ ಧಾವಿಸಿದ್ದಾರೆ. ಆದರೆ ಅವರ ಮಗಳು ರಿಧಿಮಾ ಕಪೂರ್ ತಲುಪಲು ಇನ್ನಷ್ಟು ಸಮಯ ಹಿಡಿಯಲಿದೆ.

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ನಿನ್ನೆ ಸಂಜೆ ರಿಷಿ ಕಪೂರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಕಾರಣಕ್ಕೆ ಐಸಿಯುಗೆ ದಾಖಲಿಸಲಾಗಿತ್ತು. ದೆಹಲಿಯಲ್ಲಿ ವಾಸವಿರುವ ಅವರ ಪುತ್ರಿ ರಿಧಿಮಾ ಕಪೂರ್ ಲಾಕ್‌ಡೌನ್ ಮಧ್ಯೆ ರಸ್ತೆ ಮೂಲಕ ಮುಂಬೈಗೆ ಹೋಗಲು ಅನುಮತಿ ಕೋರಿದ್ದಾರೆ.

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ರಿಧಿಮಾ ಕಪೂರ್ ಅವರು ಉದ್ಯಮಿಯೊಬ್ಬರನ್ನು ಮದುವೆಯಾಗಿ, ದೆಹಲಿಯಲ್ಲಿ ನೆಲೆಸಿದ್ದಾರೆ. ಮುಂಬೈಗೆ ಚಾರ್ಟರ್ಡ್ ಫ್ಲೈಟ್ ಮೂಲಕ ತೆರಳಲು ಗೃಹ ಸಚಿವಾಲಯದ ಅನುಮತಿ ಕೋರಿದ್ದಾರೆ. ಆದರೆ ಅನುಮತಿ ದೊರೆತಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ಈ ಕಾರಣಕ್ಕೆ ಅವರು ಮುಂಬೈಗೆ ರಸ್ತೆ ಮೂಲಕ ತೆರಳಲಿದ್ದಾರೆ. ತಡರಾತ್ರಿಯಲ್ಲಿ ಅವರು ಅನುಮತಿ ಕೇಳಿದ್ದು, ಕೆಲವೇ ನಿಮಿಷಗಳಲ್ಲಿ ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಅವರು ದೆಹಲಿಯಿಂದ ಮುಂಬೈಗೆ ರಸ್ತೆ ಮೂಲಕ 1400 ಕಿ.ಮೀ ಪ್ರಯಾಣ ಬೆಳೆಸಲಿದ್ದಾರೆ.

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ಇಷ್ಟು ದೂರ ಪ್ರಯಾಣ ಮಾಡಲು ಸುಮಾರು 18 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವ ಕಾರಣಕ್ಕೆ ವಿಮಾನ, ರೈಲು ಹಾಗೂ ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ರಾಜ್ಯದಲ್ಲಿ ಸಿಕ್ಕಿಬಿದ್ದಿರುವ ಜನರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಿದೆ. ರಸ್ತೆ ಸಂಚಾರದ ಮೂಲಕ ಕರೆತರುವಂತೆ ಸೂಚಿಸಲಾಗಿದೆ. ಅಗತ್ಯ ಕಾರ್ಯಗಳಿಗೆ ಹೊರಬರುವವರು ವಿಶೇಷ ಪಾಸ್‌ಗಳನ್ನು ಪಡೆಯಬೇಕಾಗುತ್ತದೆ.

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ಅಂದ ಹಾಗೆ ರಿಷಿ ಕಪೂರ್‌ರವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಸೋತು ಶರಣಾಗಿದ್ದಾರೆ. ಅವರ ಪತ್ನಿ ನೀತು ಕಪೂರ್ ಹಾಗೂ ಮಗ ಚಿತ್ರನಟ ರಣಬೀರ್ ಕಪೂರ್ ಮುಂಬೈನಲ್ಲಿಯೇ ಇದ್ದಾರೆ. ಈ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸುವಂತೆ ಕುಟುಂಬ ಸದಸ್ಯರು ಎಲ್ಲಾ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಿಶೇಷ ಅನುಮತಿಯೊಂದಿಗೆ ಮುಂಬೈ ತಲುಪಲಿದ್ದಾರೆ ರಿಷಿ ಕಪೂರ್ ಪುತ್ರಿ..!

ನಿನ್ನೆಯಷ್ಟೇ ಮತ್ತೊಬ್ಬ ಬಾಲಿವುಡ್ ನಟ ಇರ್ಫಾನ್ ಖಾನ್‌ರವರು ವಿಧಿವಶರಾಗಿದ್ದರು. ತಮ್ಮ 53ನೇ ವಯಸ್ಸಿನಲ್ಲಿಯೇ ವಿದಾಯ ಹೇಳಿದರು. ಅವರೂ ಸಹ ಕಳೆದ ಎರಡು ವರ್ಷಗಳಿಂದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಿನ್ನೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾದರು.

Article Published On: Thursday, April 30, 2020, 18:07 [IST]
English summary
Rishi Kapoor daughter Riddhima to drive 1400km amidst lockdown from Delhi to Mumbai. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+