ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು..!
ವರದಿಗಳ ಪ್ರಕಾರ, ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗೆ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಪುರುಷರ ಪೈಕಿ 14.4% ಜನರು 15ರಿಂದ 39 ವರ್ಷ ವಯಸ್ಸಿನವರಾಗಿದ್ದಾರೆ.

15ರಿಂದ 29 ವರ್ಷ ವಯಸ್ಸಿನ 17.7% ಪುರುಷರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ರಸ್ತೆ ಅಪಘಾತಗಳಲ್ಲಿ ಮೃತ ಪಟ್ಟ 15ರಿಂದ 39 ವರ್ಷ ಮಹಿಳೆಯರ ಸಂಖ್ಯೆ 3.4% ಆಗಿದ್ದರೆ, 15ರಿಂದ 29 ವರ್ಷ ವಯಸ್ಸಿನ 3.3% ಮಹಿಳೆಯರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.

ಈ ವರದಿಯಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವ 15ರಿಂದ 19 ವರ್ಷ ವಯಸ್ಸಿನವರ ಸಂಖ್ಯೆಯು ಕಳೆದ 30 ವರ್ಷಗಳಲ್ಲಿ ಇಳಿಮುಖವಾಗಿರುವುದಾಗಿ ಹೇಳಲಾಗಿದೆ. ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿರುವುದರಿಂದ ಈ ಪ್ರಮಾಣವು ಇಳಿಮುಖವಾಗಿದೆ ಎಂದು ವರದಿ ಹೇಳಿದೆ.

ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದಕ್ಕೆ ಕಾರಣ ಪುರುಷ ಚಾಲಕರು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವುದು ಎಂದು ಸಹ ಹೇಳಲಾಗಿದೆ. ಪುರುಷರ ಸಾವಿನ ಸಂಖ್ಯೆಯು ಅವರ ವಯಸ್ಸಿನ ಜೊತೆಗೆ ಹೆಚ್ಚಾಗುತ್ತಿದೆ.

ಹದಿಹರೆಯದ ಪುರುಷರ ಸಾವಿನ ಸಂಖ್ಯೆಯ ಪ್ರಮಾಣ ಕಡಿಮೆಯಾಗಿದೆ ಎಂದು ಈ ವರದಿ ಹೇಳಿದೆ. ಇದಕ್ಕೆ ಕಾರಣ ಯುವಕರು ವಯಸ್ಸಾದ ಪುರುಷರಿಗಿಂತ ಹೆಚ್ಚು ಜಾಗರೂಕತೆಯನ್ನು ವಹಿಸುತ್ತಿರುವುದು ಎಂದು ಹೇಳಲಾಗಿದೆ.

ಕಳೆದ 30 ವರ್ಷಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಜಾಗರೂಕತೆಯನ್ನು ವಹಿಸಿ ವಾಹನ ಚಲಾಯಿಸುತ್ತಿರುವುದು ಸಹ ಮಹಿಳೆಯರ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವುದಕ್ಕೆ ಕಾರಣವೆಂದು ಹೇಳಲಾಗಿದೆ.

ಈ ಮೊದಲು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವ 15ರಿಂದ 19 ವರ್ಷ ವಯಸ್ಸಿನ ಯುವಕರ ಸಾವಿನ ಸಂಖ್ಯೆಯು ಹೆಚ್ಚಾಗಿತ್ತು. ಆದರೆ ಈಗ ಇಳಿಮುಖವಾಗಿದೆ. ಇದರ ಜೊತೆಗೆ 20ರಿಂದ 29 ವರ್ಷ ವಯಸ್ಸಿನ ಪುರುಷರ ಸಾವಿನ ಪ್ರಮಾಣವೂ ಸಹ ಕಡಿಮೆಯಾಗಿದೆ.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಲು ಅನುಮತಿ ನೀಡದೇ ಇರುವುದು ಸಹ 15ರಿಂದ 19 ವರ್ಷ ವಯಸ್ಸಿನ ಯುವಕರ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುವುದಕ್ಕೆ ಪ್ರಮುಖ ಕಾರಣವಾಗಿದೆ.
MOST READ: ವಾಹನ ಡೀಲರ್‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕೆಲಸಕ್ಕೆ ಹೋಗುವ ಪುರುಷರ ಸಾವಿನ ಸಂಖ್ಯೆಯು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುವುದು. ಯಾವ ವಯಸ್ಸಿನ ಪುರುಷರೇ ಆಗಲಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಒಳಿತು.


Click it and Unblock the Notifications