ಕಾರು ಚಾಲಕರೇ ನಿವು ಮಾಡೋದು ಸರಿಯೇ? ದರ್ಪ ತೋರಿದ್ರೆ ಬೈಕ್ ಸವಾರರ ಕೈಯಲ್ಲಿ ಸರಿಯಾಗಿ ಬೀಳ್ತವೆ!

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ (Road Rage) ಘಟನೆಯೊಂದು ಕಾರು ಚಾಲಕರ ದರ್ಪವನ್ನು ತೋರುತ್ತದೆ. ಯಾರೋ ಒಬ್ಬರು ಮಾಡುವ ಇಂತಹ ಕೃತ್ಯಗಳಿಂದ ಇತರ ಕಾರು ಚಾಲಕರಿಗೂ ಕೆಟ್ಟ ಹೆಸರು ತರುತ್ತದೆ. ಕಾರಿನ ಡ್ಯಾಷ್‌ಕ್ಯಾಮ್‌ನಲ್ಲಿ ಸೆರೆಯಾದ ದೃಷ್ಯಗಳು ಈಗ ವೈರಲ್ ಆಗಿದ್ದು, ಬಹುತೇಕ ಕಾರು ಚಾಲಕರು ಹೀಗೆ ಮಾಡುತ್ತಾರೆ ಎಂಬ ಕಮೆಂಟ್‌ಗಳು ವ್ಯಕ್ತವಾಗುತ್ತಿವೆ.

ವಿಷಯಕ್ಕೆ ಬಂದರೆ ನಗರದಲ್ಲಿ ಮಳೆ ಬಂದು ಮೇಲ್ಸೇತುವೆಯೊಂದರ ಬಳಿ ನೀರು ತುಂಬಿಕೊಂಡ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು. ಸೇತುವೆಯ ಬಲ ಭಾಗದಲ್ಲಿ ನೀರು ತುಂಬಿಕೊಂಡಿರುವ ಕಾರಣ ಎಡಭಾಗದಲ್ಲಿ ವಾಹನಗಳು ಚಲಿಸುತ್ತಿದ್ದ ವೇಳೆ ಕಾರು ಚಾಲಕ ಬಲಭಾಗಕ್ಕೆ ಏಕಾ ಏಕಿ ನುಗ್ಗಿದ್ದಾನೆ. ಈ ವೇಳೆ ಎಡಭಾಗದಲ್ಲಿದ್ದ ಬಹುತೇಕ ದ್ವಿಚಕ್ರ ವಾಹನ ಸವಾರರಿಗೆ ಕೆಸರಿನ ಸ್ನಾನವಾಗಿದೆ.

Road Rage

ಇವೆಲ್ಲಾ ದೃಷ್ಯಗಳು ಕಾರಿನ ಡ್ಯಾಷ್‌ಕ್ಯಾಮ್‌ನಲ್ಲಿ ಸೆರೆಯಾಗಿವೆ. ಕಾರಿನಲ್ಲಿ ವಯಸ್ಸಾದ ದಂಪತಿ ಇರುವಂತೆ ತೋರುತ್ತಿದೆ. ಕಾರು ಚಾಲಕನ ಕೃತ್ಯಕ್ಕೆ ಆತನ ಪತ್ನಿ ಕೂಡ ಕೋಪಕೊಂಡಿದ್ದು, ಇದಕ್ಕೆ ಪತಿ ಪ್ರತಿಕ್ರಿಯಿಸಿ ನೀರಿನಲ್ಲಿ ನಿಧಾನವಾಗಿ ಹೋದರೆ ಸೈಲೆನ್ಸರ್‌ಗೆ ನೀರು ಹೋಗುತ್ತದೆ ಎಂಬ ಕಾರಣ ಕೊಡುವುದನ್ನು ವಿಡಿಯೋದಲ್ಲಿ ಕೇಳಬಹುದು. ಹಾಗೆಂದು ಮಳೆ ನೀರನ್ನು ಇತರರ ಮೇಲೆ ಎಗರಿಸ್ತೀರಾ ಎಂದು ಮಹಿಳೆ ಕೇಳಿದ್ದಾರೆ.

ಹೀಗೆ ಕೇಳುತ್ತಿದ್ದಂತೆ ಕೆಸರಿನ ನೀರಿನ್ನು ಮೈಮೇಲೆ ಎಗರಿಸಿಕೊಂಡ ಸ್ಕೂಟರ್ ಚಾಲಕರೊಬ್ಬರು ಪಕ್ಕದಲ್ಲೇ ಬಂದು ಕಾರು ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಆದ್ರೂ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಬೆಂಬಿಡದೆ ಫಾಲೋ ಮಾಡಿಕೊಂಡು ಬಂದ ಸ್ಕೂಟರ್ ಸವಾರ ಕಾರಿನ ಮುಂದೆ ಬಂದು ನಿಲ್ಲಿಸಲು ಯತ್ನಿಸಿದ್ದಾರೆ. ಆದ್ರೂ ನಿಲ್ಲಸದೆ ಒಮ್ಮೆ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ.

Road Rage

ಕೊನೆಗೂ ಸ್ಕೂಟರ್ ಸವಾರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿಬಿಟ್ಟಿದ್ದಾರೆ, ಆದ್ರೆ ಕಾರು ಚಾಲಕ ಮಾತ್ರ ಕೆಳಗೆ ಇಳಿದು ಬರಲಿಲ್ಲ. ಮೊದಲೇ ಕುಪಿತಗೊಂಡಿದ್ದ ಸ್ಕೂಟರ್ ಚಾಲಕ ಕಾರಿನ ಮಿರರ್‌ಗಳನ್ನು ಧ್ವಂಸಗೊಳಿಸಿದ್ದಾನೆ. ಅಂದಹಾಗೆ ಸ್ಕೂಟರ್ ಚಾಲಕನ ಜೊತೆಗೆ ಮಹಿಳೆ ಕೂಡ ಇದ್ದು ಅವರಿಗೂ ಕೂಡ ಮಳೆ ನೀರು ಮೈಮೇಲೆ ಎಗರಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಬ್ಯಾಡ್ ಡ್ರೈವರ್ಸ್ ಆಫ್ ಬೆಂಗಳೂರು ಎಂಬ ಯ್ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕಾರು ಚಾಲಕನ ವಿರುದ್ಧ ಭೀಕರ ಆಕ್ರೋಶ ವ್ಯಕ್ತವಾಗಿದ್ದು, ಆತನನ್ನು ಮನಬಂದಂತೆ ಕಮೆಂಟ್‌ಗಳ ಮೂಲಕ ನಿಂಧಿಸಿದ್ದಾರೆ. ಕಾರು ಚಾಲಕರೇ ಹೀಗೆ, ಸ್ವಲ್ಪವೂ ನಿಧಾನವಿಲ್ಲ ರಸ್ತೆಗಳಲ್ಲಿ ಬೈಕ್ ಸವಾರರನ್ನು ತುಂಬಾ ಕಡೆಯಾಗಿ ನೋಡುತ್ತಾರೆ ಎಂಬೆಲ್ಲಾ ಕಮೆಂಟ್‌ಗಳು ವ್ಯಕ್ತವಾಗಿವೆ.

ಎಲ್ಲಾ ಕಾರು ಚಾಲಕರು ಹೀಗೆ ಇರುವುದಿಲ್ಲ, ಯಾರೋ ಒಬ್ಬರ ಬುದ್ಧಿಹೀನ ಕೆಲಸದಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಕೂಡ ಹಲವರು ಕಮೆಂಟ್ ಮಾಡಿದ್ದಾರೆ. ಈ ಘಟನೆಯಲ್ಲಿ ಕಂಡಿತ ಕಾರು ಚಾಲಕನ ತಪ್ಪಿದೆ, ಮಳೆ ಬಿದ್ದಾಗ ರಸ್ತೆಗಳಲ್ಲಿ ತಾಳ್ಮೆಯಿಂದ ಚಾಲನೆ ಮಾಡಬೇಕು. ಮನಬಂದಂತೆ ವ್ಯವಹರಿಸಿದರೆ ಜನ ಗುಂಪು ಸೇರಿ ಒಡೆದ್ರೂ ಅದರಲ್ಲಿ ಆಶ್ಚರ್ಯವಿಲ್ಲ.

ಈ ಕುರಿತ ವಿಡಿಯೋವನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ. ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಇದರಲ್ಲಿ ಯಾರದ್ದು ತಪ್ಪು ಹಾಗೂ ಸ್ಕೂಟರ್ ಸವಾರ ಪ್ರತಿಕ್ರಿಯಿಸಿದ್ದು ಸರಿಯೇ ಎಂಬುದನ್ನು ಕಮಟೆಂಟ್‌ನಲ್ಲಿ ತಿಳಿಸಿ. ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಪೇಜ್‌ಗಳನ್ನು ಫಾಲೊ ಮಾಡಿ.

Article Published On: Monday, June 5, 2023, 18:45 [IST]
English summary
Road rage scooter rider smashed car mirror
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+