ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ನಮ್ಮಲ್ಲಿ ಕೆಲವರಾದರೂ ಕಾರು ಜಂಪಿಂಗ್ ಸಾಹಸ ದೃಶ್ಯಗಳನ್ನು ಕಣ್ಣಾರೆ ನೋಡಿರುತ್ತಾರೆ. ತಮ್ಮ ಜೀವವನ್ನೇ ಪಣತೊಟ್ಟಿರುವ ರೇಸ್ ಚಾಲಕರು ಬಹಳ ಚಾಣಕ್ಷತೆಯಿಂದ ಕೌಶಲ್ಯ ಪ್ರದರ್ಶಿಸುತ್ತಾರೆ.

ಗಿನ್ನೆಸ್ ದಾಖಲೆ

ಹಾಗಿರುವಾಗ ಇಲ್ಲೊಬ್ಬ ಉತ್ಸಾಹಿ ಕಾರು ಚಾಲಕ ಜಂಪಿಂಗ್‌ನಲ್ಲಿ ನೂತನ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಕಾರು ನೆಗೆತ ಮಾಡುವುದೇ ದೊಡ್ಡ ವಿಷಯ; ಹಾಗಿರುವಾಗ ಇದೆಂಥ ರಿವರ್ಸ್ ಜಂಪ್ ಸಾಧನೆ ಅಂತೀರಾ? ಇಲ್ಲಿದೆ ನೋಡಿ ರೋಮಾಂಚನಕಾರಿ ಮಾಹಿತಿ.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ಹೌದು, ರೊಬ್ ಡಿರೆಕ್ (Rob Dyrek) ಎಂಬವರು ಇಂತಹದೊಂದು ಮಹಾ ಸಾಧನೆ ಮಾಡಿ ತೋರಿಸಿದ್ದಾರೆ. ವಿಶೇಷವೆಂದರೆ ಇವರು ಯಾವುದೇ ವೃತ್ತಿ ನಿರತ ರೇಸ್ ಚಾಲಕ ಅಥವಾ ಸ್ಟಂಟ್ ರೇಸರ್ ಅಲ್ಲ.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ನೀವಿಲ್ಲಿ ಡಿರೆಕ್ ಸಾಧನೆಯನ್ನು ಮೆಚ್ಚಲೇ ಬೇಕಾಗುತ್ತದೆ. ಈ ಮೂಲಕ ಕಾರು ರಿವರ್ಸ್‌ನಲ್ಲಿ ಅತ್ಯಂತ ದೂರಕ್ಕೆ ನೆಗೆದ ಚಾಲಕರೆಂಬ ದಾಖಲೆಯೊಂದಿಗೆ ಗಿನ್ನೆಸ್ ಪುಟ ಸೇರಿಕೊಂಡಿದ್ದಾರೆ.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ಅಷ್ಟಕ್ಕೂ ರೊಬ್ ಎಷ್ಟು ದೂರದ ವರೆಗೆ ಕಾರಲ್ಲಿ ನೆಗೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲತೆ ನಿಮ್ಮನ್ನು ಕಾಡಬಹುದು. ಹೌದು, 89 ಫೀಟ್ ಹಾಗೂ 3 ಕಾಲು ಇಂಚು ನಗೆಯುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ಇದಕ್ಕಾಗಿ ಅವರು ಷೆವರ್ಲೆ ಸೊನಿಕ್ ಹ್ಯಾಚ್‌ಬ್ಯಾಕ್ ಕಾರನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ತರಲಾಗಿತ್ತು. ಉದಾಹರಣೆ ಭಾರ ಕಡಿತಗೊಳಿಸುವುದು ಹಾಗೂ ಹೆಚ್ಚಿನ ಸುರಕ್ಷತೆ ಒದಗಿಸುವುದು ಮುಂತಾದ ಬದಲಾವಣೆಗಳನ್ನು ತರಲಾಗಿತ್ತು.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ಪ್ರಸ್ತುತ ಇಂತಹ ಸಾಹಸ ಪ್ರದರ್ಶನ ಮಾಡುವುದರಲ್ಲಿ ರೊಬ್ ನಿಸ್ಸೀಮಿರೆನಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ 360 ಡಿಗ್ರಿ ಕಿಕ್-ಪ್ಲಿಪ್ ಸ್ಟಂಟ್ ಪ್ರದರ್ಶಿಸಿದ ಮೊದಲ ಚಾಲಕರೆನಿಸಿಕೊಂಡಿದ್ದರು. ಅಲ್ಲೂ ಷೆವರ್ಲೆ ಸೊನಿಕ್ ಕಾರನ್ನೇ ಬಳಕೆ ಮಾಡಿದ್ದರು.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ಅಂದ ಹಾಗೆ ರೊಬ್ ಷೆವರ್ಲೆ ಕಾರನ್ನೇ ಆಯ್ಕೆ ಮಾಡಲು ಕಾರಣವೊಂದಿದೆ. ಅವರು ಷೆವರ್ಲೆ ಕಾರುಗಳನ್ನು ಅತಿ ಹೆಚ್ಚು ನೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಷೆವಿ ಕಾರಗಳನ್ನು ಹೆಚ್ಚು ಇಷ್ಟಪಡುವುದಾಗಿ ತಿಳಿಸಿದ್ದಾರೆ.

ರಿವರ್ಸ್ ಕಾರು ಜಂಪ್; ಗಿನ್ನೆಸ್ ದಾಖಲೆ ಬರೆದ ರೊಬ್

ಅಮೆರಿಕದಲ್ಲಿ ಟಿವಿ ಚಾನೆಲ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ರೊಬ್ 'ಫ್ಯಾಂಟಸಿ ಫ್ಯಾಕ್ಟರಿ' ಎಂಬ ರಿಯಾಲಿಟಿ ಶೋ ನಡೆಸಿ ಕೊಡುತ್ತಾರೆ. ಇದರ ಗ್ರಾಂಡ್ ಫಿನಾಲೆಯಲ್ಲಿ ಇಂತಹದೊಂದು ಸಾಧನೆ ಮೆರೆದಿದ್ದಾರೆ.

ರಿವರ್ಸ್ ಕಾರು ಜಂಪ್ - ವೀಕ್ಷಿಸಿ ರೋಮಾಂಚನಕಾರಿ ವೀಡಿಯೋ

More from DriveSpark

Article Published On: Monday, February 17, 2014, 11:14 [IST]
English summary
A new Guinness World Record has been set for the "Farthest Reverse Ramp Jump by a Car" and the surprising thing is that it was not set by a professional racer or even a stunt person. The person who currently holds the new title for the longest reverse car jump is Rob Dyrdek, a professional skateboarder from America and a TV personality.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+