263 ಕೀ.ಮೀ. ವೇಗದಲ್ಲಿ ಸಂಚರಿಸಿದ ಸೈಕಲ್ ದಾಖಲೆ
ಒಂದು ಸಾಮಾನ್ಯ ಸೈಕಲ್ ಅಬ್ಬಬ್ಬಾ ಅಂದರೆ ಎಷ್ಟು ಕಿಲೋ ಮೀಟರ್ ವೇಗದಲ್ಲಿ ಸಂಚರಿಸಬಹುದು? ಇಲ್ಲೊಂದು ಸೈಕಲ್ ಪ್ರತಿ ಗಂಟೆಗೆ 263 ಕೀ.ಮೀ. ವೇಗದಲ್ಲಿ ಸಂಚರಿಸುತ್ತಿದೆ ಅಂದ್ರೆ ನಿಮ್ಮಿಂದ ನಂಬಲು ಸಾಧ್ಯವೇ?
ಹೌದು, ಇದುವೇ ರಾಕೆಟ್ ಸೈಕಲ್. ಫ್ರಾನ್ಸ್‌ನ ಫ್ರಾಂಕಾಯ್ಸ್ ಗಿಸ್ಸೆ (Francois Gissy) ಎಂಬಾತರೇ ಈ ಸಾಧನೆ ಮಾಡಿದ್ದಾರೆ. ನಾವು ಕಾರು, ಬೈಕ್ ಸ್ಪೀಡ್ ದಾಖಲೆಗಳನ್ನು ನೋಡಿರುತ್ತೇವೆ. ಆದರೆ ರಾಕೆಟ್ ತಂತ್ರಜ್ಞಾನವನ್ನು ಆಳವಡಿಸಿರುವ ಸೈಕಲ್‌ನಲ್ಲಿ ಈ ಸಾಧನೆ ಮಾಡಲಾಗಿದೆ.
ಸ್ವಿಜರ್ಲೆಂಡ್‌ನ Exotic Thermo Engineering ಕಂಪನಿಯು ಇದನ್ನು ನಿರ್ಮಿಸಿದ್ದು, ಹೈಡ್ರೋಜನ್ ಪೆರಾಕ್ಸೈಡ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಇದರಿಂದ ಗರಿಷ್ಠ ಅಶ್ವಶಕ್ತಿ ಉತ್ಪಾದಿಸಲು ನೆರವಾಗಿದೆ.

ಈ ಮೂಲಕ ಗಿಸ್ಸೆ ತಮ್ಮ ಹೆಸರಲ್ಲೇ ಇದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಹಿಂದೆ ಪ್ರತಿ ಗಂಟೆಗೆ 242.6 ಕೀ.ಮೀ. ವೇಗತೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಪೂರ್ವ ಫ್ರಾನ್ಸ್‌ನ ಏರೋಡ್ರೋಮ್ ಎಂಬಲ್ಲಿ ಈ ಯಶಸ್ವಿ ಪರೀಕ್ಷೆ ನಡೆಸಲಾಗಿದೆ.

ಅಷ್ಟೇ ಯಾಕೆ ಅತಿ ವೇಗದಲ್ಲಿ ಕಾರನ್ನು ಹಿಂದಿಕ್ಕುವಲ್ಲಿ ಈ ರಾಕೆಟ್ ಸೈಕಲ್ ಯಶಸ್ವಿಯಾಗಿದೆ.

ಅಷ್ಟಕ್ಕೂ ಈ ಆಕರ್ಷಕ ವಿಡಿಯೋ ನೋಡುವ ಕುತೂಹಲ ನಿಮ್ಮಲಿದೆಯೇ. ಹಾಗಿದ್ದರೆ ಮುಂದಿನ ಪುಟದತ್ತ ಸಾಗಿರಿ...
ವೀಡಿಯೋ ವೀಕ್ಷಿಸಿ
ವೀಡಿಯೋ ವೀಕ್ಷಿಸಿ
ವೀಡಿಯೋ ವೀಕ್ಷಿಸಿ


Click it and Unblock the Notifications








