ದುಬೈನಲ್ಲಿ ಭಾರತೀಯನ ಗಮ್ಮತ್ತು! ಈತನ ಕಾರು ಸಂಗ್ರಹ ಬಿಡಿ, ನಂಬರ್ ಪ್ಲೇಟ್‌ಗಳ ಬೆಲೆಯೇ 142 ಕೋಟಿ!
ಭಾರತೀಯ ಮೂಲದವರು ವಿದೇಶಗಳಲ್ಲಿ ತಮ್ಮ ವಿವಿಧ ಉದ್ಯಮಗಳ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಇಂತಹ ಬಿಲೇನಿಯರ್‌ಗಳು ಹಲವರಿದ್ದರು, ಕೆಲವರು ಮಾತ್ರ ತಮ್ಮ ವಿಶಿಷ್ಟ ಹವ್ಯಾಸಗಳ ಮೂಲಕ ಸದ್ದು ಮಾಡುತ್ತಾರೆ. ಅಂಥವರಲ್ಲಿ ದುಬೈನ ಅತ್ಯಂತ ಕೋಟ್ಯಾಧಿಪತಿ ಬಲ್ವಿಂದರ್ ಸಿಂಗ್ ಸಾಹ್ನಿ ಕೂಡ ಒಬ್ಬರು.
ದುಬೈನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಉದ್ಯಮಿ ಬಲ್ವಿಂದರ್ ಸಿಂಗ್ ಸಾಹ್ನಿ ಅವರು ದುಬಾರಿ ರೋಲ್ಸ್ ರಾಯ್ಸ್ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಈ ಕಾರುಗಳನ್ನು ಇನ್ನಷ್ಟು ವಿಶೇಷವಾಗಿಸುವುದು ಅವುಗಳ ದುಬಾರಿ ನಂಬರ್ ಪ್ಲೇಟ್‌ಗಳು, ಇವು ಪ್ರಪಂಚದಲ್ಲಿ ಮಾರಾಟವಾಗುವ ಕೆಲವು ಅತ್ಯಂತ ದುಬಾರಿ ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿವೆ.

"ಅಬು ಸಲಾಹ್" ಎಂಬ ಅಡ್ಡ ಹೆಸರಿನಿಂದಲೂ ಕರೆಯಲ್ಪಡುವ ಬಲ್ವಿಂದರ್ ಸಿಂಗ್ ಸಾಹ್ನಿ ಅವರು ಮಧ್ಯಪ್ರಾಚ್ಯದಲ್ಲಿ ಆಟೋಮೋಟಿವ್, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಉಪಕರಣಗಳ ವಲಯಗಳಲ್ಲಿ ಪ್ರಾಥಮಿಕವಾಗಿ ವ್ಯವಹಾರಗಳನ್ನು ನಿರ್ವಹಿಸುವ ಆರ್‌ಎಸ್‌ಜಿ ಗ್ರೂಪ್ ಆಫ್ ಕಂಪನಿಗಳ ಸಂಸ್ಥಾಪಕರಾಗಿದ್ದಾರೆ. ಆದರೆ ಫೇಮಸ್ ಆಗಿದ್ದು ಮಾತ್ರ ಅವರ ಕಾರ್ ಕ್ರೇಜ್‌ನಿಂದ.
ಇತ್ತೀಚೆಗೆ YouTube ವೀಡಿಯೊದ ಮೂಲಕ ತಮ್ಮ ದುಬಾರಿ ನೋಂದಣಿ ನಂಬರ್ ಪ್ಲೇಟ್‌ಗಳು ಮತ್ತು ಅವರ ಅದ್ದೂರಿ ಜೀವನಶೈಲಿಯನ್ನು ಹೊಂದಿರುವ ಅವರ ಸೂಪರ್ - ಎಕ್ಸ್‌ಕ್ಲೂಸಿವ್ ಕಾರುಗಳ ಒಂದು ನೋಟವನ್ನು ಒದಗಿಸಿದ್ದಾರೆ. ವೀಡಿಯೊದಲ್ಲಿ ತಮ್ಮ ರೋಲ್ಸ್ ರಾಯ್ಸ್ ಕಾರುಗಳ ಫ್ಲೀಟ್ ಅನ್ನು ಪ್ರದರ್ಶಿಸಿದ್ದಾರೆ, ಇವೆಲ್ಲವು ಕೂಡ ದುಬಾರಿ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ.

ಅಬು ಸಲಾಹ್ ಅವರ ದುಬಾರಿ ಕಾರು ಸಂಗ್ರಹವು ಪ್ರಾಥಮಿಕವಾಗಿ ರೋಲ್ಸ್ ರಾಯ್ಸ್ ಕಾರುಗಳನ್ನು ಒಳಗೊಂಡಿದೆ, ಇದರಲ್ಲಿ ಒಂದೆರಡು ಕುಲಿನನ್ ಮತ್ತು ಫ್ಯಾಂಟಮ್ VIII ಸೆಡಾನ್‌ಗಳು ಕೂಡ ಇವೆ. ಈ ಎಲ್ಲಾ ರೋಲ್ಸ್ ರಾಯ್ಸ್ ಕಾರುಗಳು 5 - 6 ಕೋಟಿ ರೂ. ಗಿಂತ ಹೆಚ್ಚು ಬೆಲೆಯಿದ್ದಾಗಿವೆ.
ನಂ "1" ಮತ್ತು "27" ನಂತಹ ಏಕ ಅಂಕಿಯ ಮತ್ತು ಎರಡು ಅಂಕಿಯ ಸಂಖ್ಯೆಗಳನ್ನು ಒಳಗೊಂಡಿರುವ ದುಬಾರಿ ನಂಬರ್ ಪ್ಲೇಟ್‌ಗಳೊಂದಿಗೆ ಬರುತ್ತವೆ. ಈ ದುಬಾರಿ ನಂಬರ್ ಪ್ಲೇಟ್‌ಗಳ ವೆಚ್ಚವು $8 ರಿಂದ 10 ಮಿಲಿಯನ್ (ಸುಮಾರು ರೂ. 60 - 84 ಕೋಟಿ) ಬೆಲೆಯನ್ನು ಹೊಂದಿವೆ. ಇದು ರೋಲ್ಸ್ ರಾಯ್ಸ್ ಕಾರುಗಳಿಂತ ಅಧಿಕ ಬೆಲೆ.

ಇತ್ತೀಚೆಗೆ D5 ನೋಂದಣಿ ಖರೀದಿ: ಅಬು ಸಲಾಹ್ ಕೆಲವು ತಿಂಗಳುಗಳ ಹಿಂದೆ ಖರೀದಿಸಿದ ಹೊಸ ರೋಲ್ಸ್ ರಾಯ್ಸ್ ಕುಲಿನನ್‌ಗಾಗಿ "ದುಬೈ ಡಿ 5" ನೋಂದಣಿ ಸಂಖ್ಯೆಯನ್ನು ಆಯ್ಕೆ ಮಾಡಿದ್ದರು. ಅವರ ಕಲಿನನ್‌ನ ಬೆಲೆ - ಸರಿಸುಮಾರು ರೂ. 10 ಕೋಟಿಯಿದ್ದು, ಇದೀಗ ಅವರ ಹೊಸ ನಂಬರ್ ಪ್ಲೇಟ್ ಖರೀದಿಯ ಬಳಿಕ ಒಟ್ಟಾರೆ ಎಲ್ಲಾ ನಂಬರ್ ಪ್ಲೇಟ್‌ಗಳ ಬೆಲೆಯು ಈಗ 17 ಮಿಲಿಯನ್ ಡಾಲರ್‌ಗೆ (ಸುಮಾರು 142 ಕೋಟಿ ರೂ.) ಏರಿದೆ.
ಇವಿಷ್ಟೇ ಅಲ್ಲದೇ ಕಾರ್ಬನ್ ಫೈಬರ್‌ನಿಂದ ಮಾಡಲಾದ ಅಪರೂಪದ ಸೀಮಿತ ಆವೃತ್ತಿ ಬುಗಾಟ್ಟಿ ಚಿರಾನ್ ಅನ್ನು ಸಹ ಹೊಂದಿದ್ದಾರೆ. ಆದ್ರೆ, ಸಲಾಹ್ ಅವರು ಬುಗಾಟಿಯನ್ನು ಎಂದೂ ಓಡಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸಂಗ್ರಹಣೆಯಲ್ಲಿನ ಇತರ ಕಾರುಗಳಿಗಿಂತ ಭಿನ್ನವಾಗಿ, ಈ ಅಪರೂಪದ ಚಿರೋನ್‌ಗೆ ಯಾವುದೇ ನಂಬರ್ ಪ್ಲೇಟ್ ನೀಡದೆ ಶೋಪೀಸ್‌ನಂತೆ ಮನೆಯಲ್ಲಿಟ್ಟಾದರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications