ರೋಲ್ಸ್ ರಾಯ್ಸ್ ಕಾರನ್ನು ಭಾರತದಲ್ಲಿ ಕಸ ಸಂಗ್ರಹಕ್ಕೆ ಎಂದೂ ಬಳಸಿಲ್ಲ... ಹಾಗಾದ್ರೆ ನೈಜ ಕಥೆ ಏನು?

ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಕಂಪನಿ 'ರೋಲ್ಸ್ ರಾಯ್ಸ್' ತನ್ನ ಕಾರುಗಳಿಂದ ಖ್ಯಾತಿಗಳಿಸಿದೆ. ಅದರ ಪ್ರೀಮಿಯಂ ಲುಕ್, ಫೀಚರ್ ಹಾಗೂ ಸೂಪರ್ ಸೈಲೆಂಟ್ ಕ್ಯಾಬಿನ್‌ ಎಲ್ಲರಿಗೂ ಇಷ್ಟವಾಗುತ್ತದೆ.

ಇದು ಅನೇಕ ಸೆಲೆಬ್ರಿಟಿಗಳು, ಉದ್ಯಮಿಗಳು ಹೊಂದಿರುವ ಪ್ರಮುಖ ಕಾರ್ ಬ್ರ್ಯಾಂಡ್ ಆಗಿದೆ. ಇಂತಹ 'ರೋಲ್ಸ್ ರಾಯ್ಸ್' ಕಾರಿನ ಬಗ್ಗೆ ಭಾರತದಲ್ಲಿ ಅನೇಕ ಕಥೆಗಳು ಚಾಲ್ತಿಯಲ್ಲಿವೆ. ಮಹಾರಾಜ ಜೈ ಸಿಂಗ್ ಕಸ ಸಂಗ್ರಹಿಸಲು ಈ ಕಾರನ್ನು ಬಳಸಿದ್ದರಂತೆ. ಹಾಗಾದರೆ ಕಥೆ ಏನು?

ರೋಲ್ಸ್ ರಾಯ್ಸ್ ಕಾರನ್ನು ಭಾರತದಲ್ಲಿ ಕಸ ಸಂಗ್ರಹಕ್ಕೆ ಎಂದೂ ಬಳಸಿಲ್ಲ... ಹಾಗಾದ್ರೆ ನೈಜ ಕಥೆ ಏನು?

ನೀವು ಇಂಟರ್‌ನೆಟ್‌ನಲ್ಲಿ ಈ ಘಟನೆಯ ಬಗ್ಗೆ ತಿಳಿದುಕೊಳ್ಳಲು ಹುಡುಕಿದರೆ, ಇಂತಹ ಕಥೆಗಳ ಹಲವು ಆವೃತ್ತಿಗಳು ಲಭ್ಯವಿವೆ. ಒಮ್ಮೆ ಮಹಾರಾಜ ಜೈ ಸಿಂಗ್ ಲಂಡನ್‌ಗೆ ಭೇಟಿ ನೀಡಿದ್ದರು. ಭಾರತೀಯ ಉಡುಪನ್ನು ಧರಿಸಿ, ನಗರದಲ್ಲಿ ಸುತ್ತಾಡುವಾಗ ಕಾರಿನ ಬಗ್ಗೆ ತಿಳಿದುಕೊಳ್ಳಲು ರೋಲ್ಸ್ ರಾಯ್ಸ್ ಶೋ ರೂಂ ಒಳ ಹೋಗಲು ಪ್ರಯತ್ನಿಸಿದರು. ಆದರೆ, ಅವರು ಭಾರತೀಯ ಉಡುಗೆ ತೊಟ್ಟಿದ್ದರಿಂದ ಮಹಾರಾಜರನ್ನು ಭಿಕ್ಷುಕ ಎಂದು ಭಾವಿಸಿ ಅಲ್ಲಿನ ಸಿಬ್ಬಂದಿ ಒಳಗೆ ಬಿಡಲಿಲ್ಲ.

ಈ ಘಟನೆಯಿಂದ ಅಪಮಾನಗೊಂಡ ಮಹಾರಾಜ ಜೈ ಸಿಂಗ್, 6 ರೋಲ್ಸ್ ರಾಯ್ಸ್ ಕಾರುಗಳನ್ನು ಕೊಳ್ಳಲು ತೀರ್ಮಾನ ಮಾಡಿದರು. ಅಲ್ಲಿಯೇ ಕಾರುಗಳನ್ನು ಖರೀದಿಸಿ ಅವುಗಳನ್ನು ಭಾರತಕ್ಕೆ ರವಾನಿಸಿದರು. ಕಾರುಗಳು ಸಂಸ್ಥಾನಕ್ಕೆ ಬಂದ ನಂತರ, ಸೇಡು ತೀರಿಸಿಕೊಳ್ಳುವ ಮನಸ್ಥಿತಿ ಹೊಂದಿದ್ದ ಅವರು, ರೋಲ್ಸ್ ರಾಯ್ಸ್ ಕಾರುಗಳನ್ನು ಮುನ್ಸಿಪಲ್ ಕಾರ್ಮಿಕರಿಗೆ ದಾನ ಮಾಡಿ, ಕಸ ಸಂಗ್ರಹಣೆಗೆ ಇವುಗಳನ್ನು ಬಳಸುವಂತೆ ತಿಳಿಸಿದ್ದರು. ಇಂತಹ ಅನೇಕ ಚಿತ್ರಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ರೋಲ್ಸ್ ರಾಯ್ಸ್ ಕಾರನ್ನು ಭಾರತದಲ್ಲಿ ಕಸ ಸಂಗ್ರಹಕ್ಕೆ ಎಂದೂ ಬಳಸಿಲ್ಲ... ಹಾಗಾದ್ರೆ ನೈಜ ಕಥೆ ಏನು?

ಈ ಕಥೆ ನಿಜವೋ ಸುಳ್ಳೋ ಎಂದು ನಾವು ತಿಳಿಯಬೇಕಾದರೆ, ನಾವು ಇತಿಹಾಸವನ್ನು ಸ್ವಲ್ಪ ಕೆದಕಬೇಕು. ಮಹಾರಾಜರ ಪೂರ್ಣ ಹೆಸರು ಸವಾಯಿ ಜೈ ಸಿಂಗ್ ಅಥವಾ ಜೈ ಸಿಂಗ್ II ಎಂದು ಕರೆಯುತ್ತಾರೆ. ಅವರು ನವೆಂಬರ್ 3, 1688 ರಂದು ಜನಿಸಿದರು. ಸೆಪ್ಟೆಂಬರ್ 21, 1743 ರಂದು ನಿಧನರಾದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, 1885ರವರೆಗೆ ಮೋಟಾರು ವಾಹನಗಳನ್ನು ಅಭಿವೃದ್ಧಿಯೇ ಪಡಿಸಿರಲಿಲ್ಲ. ಆ ವರ್ಷವೇ ಕಾರ್ಲ್ ಬೆಂಜ್ ಅವರು ಕಾರಿನ ತಯಾರಿಕೆ ಆರಂಭಿಸಿದ್ದರು.

ರೋಲ್ಸ್ ರಾಯ್ಸ್ ಕಂಪನಿ 1906ರಲ್ಲಿ ಪ್ರಾರಂಭವಾಯಿತು. ಅದು ಕೂಡ ಮಹಾರಾಜ ಜೈ ಸಿಂಗ್ ಅವರ ಮರಣದ ನಂತರ. ಇದರಿಂದ ಈ ಕಥೆ ನಿಜವಲ್ಲ ಎಂದು ತಿಳಿಯುತ್ತದೆ. ಇದು ಕೇವಲ ಮಹಾರಾಜ ಜೈ ಸಿಂಗ್ ಮಾತ್ರವಲ್ಲ. ಹೈದರಾಬಾದಿನ ನಿಜಾಮ, ಭರತಪುರದ ಮಹಾರಾಜ ಕಿಶನ್ ಸಿಂಗ್ ಮತ್ತು ಪಟಿಯಾಲದ ಮಹಾರಾಜರಿಗೂ ಇದೇ ರೀತಿಯ ಕಥೆಯನ್ನು ಹೇಳಲಾಗುತ್ತದೆ. ಆದರೆ, ಪ್ರತಿಯೊಂದು ರಾಜರ ಅವಧಿಯನ್ನು ಗಮಸಿದಾಗ ಇದು ಬಹುತೇಕ ಸುಳ್ಳು ಎಂದು ಗೊತ್ತಾಗುತ್ತದೆ.

ರೋಲ್ಸ್ ರಾಯ್ಸ್ ಕಾರನ್ನು ಭಾರತದಲ್ಲಿ ಕಸ ಸಂಗ್ರಹಕ್ಕೆ ಎಂದೂ ಬಳಸಿಲ್ಲ... ಹಾಗಾದ್ರೆ ನೈಜ ಕಥೆ ಏನು?

ಈ ಚಿತ್ರದಲ್ಲಿರುವಂತೆ ರಸ್ತೆ ಸ್ವಚ್ಛಗೊಳಿಸಲು ರೋಲ್ಸ್ ರಾಯ್ಸ್ ಕಾರಿನ ಮುಂಭಾಗದ ಬಂಪರ್‌ಗೆ ಪೊರಕೆಗಳನ್ನು ಕಟ್ಟಿರಲಿಲ್ಲ. ಮಾಹಿತಿ ಪ್ರಕಾರ, ಟೈರ್‌ಗಳನ್ನು ಉಳಿಸಲು ದುಬಾರಿ ಕಾರುಗಳ ಮುಂದೆ ಪೊರಕೆ ಕಟ್ಟಲಾಗಿದೆ ಎನ್ನಲಾಗಿದೆ. ಅದು ಬ್ರೂಮ್ ಟೈರ್ ಅಥವಾ ಚಕ್ರಗಳಿಗೆ ಹಾನಿಯುಂಟು ಮಾಡುವುದನ್ನು ತಡೆಯಲಿ ಎಂಬುದು ಅದರ ಹಿಂದಿನ ಉದ್ದೇಶವಾಗಿತ್ತು. ಆ ಸಮಯದಲ್ಲಿ ಭಾರತದ ರಸ್ತೆಗಳ ಸ್ಥಿತಿಯು ಅಷ್ಟೇನು ಉತ್ತಮವಾಗಿಲ್ಲದ ಕಾರಣ, ಇದು ಸ್ವಲ್ಪ ಹೆಚ್ಚು ನಂಬಲು ಅರ್ಹವಾಗಿದೆ.

ಭಾರತದ ಆಗಿನ ಮಹಾರಾಜರು ಎಷ್ಟು ಸಿರಿವಂತರು ಅಂದರೆ, ಅವರು ಕಾರುಗಳ ಟೈರ್ ಬದಲಾಯಿಸುತ್ತಿರಲಿಲ್ಲ. ಬದಲಾಗಿ, ನೇರವಾಗಿ ಶೋರೂಂ ಹೋಗಿ ಹೊಸ ಕಾರು ಖರೀದಿಸುತ್ತಿದ್ದರು. ಆದ್ದರಿಂದ, ಪೊರಕೆಯು ವಾಹನದ ಟೈರ್ ಜೀವಿತಾವಧಿಯನ್ನು ಹೆಚ್ಚಳ ಮಾಡುತ್ತಿತ್ತೇ ಹೊರತು ಕಸ ಸಂಗ್ರಹಿಸುವ ಉದ್ದೇಶ ಹೊಂದಿರಲಿಲ್ಲ. ಐಷಾರಾಮಿ 'ರೋಲ್ಸ್ ರಾಯ್ಸ್' ಕಾರಿನ ಬಗ್ಗೆ ಈ ರೀತಿಯ ಕಥೆಗಳು ಈಗಲೂ ಚಾಲ್ತಿಯಲ್ಲಿವೆ. ನೀವು ಈ ರೀತಿಯ ಕಥೆಗಳನ್ನು ಕೇಳಿದ್ದರೆ ಕಮೆಂಟ್ ಮಾಡಿ.

Most Read Articles

Kannada
English summary
Rolls royce car used for garbage collection by the king of India
Story first published: Wednesday, November 23, 2022, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X