ವಿದೇಶದಲ್ಲಿ ಬೆಲೆ ಎಷ್ಟೇ ಇರಲಿ ಭಾರತದಲ್ಲಿ ಸಾಂಪ್ರದಾಯಿಕ ಸ್ವಾಗತ ಕಡ್ಡಾಯ: 10.50 ಕೋಟಿ ಕಾರಿಗೆ ಪೂಜೆ!
ಇತ್ತೀಚೆಗೆ ವಿಶ್ವ ಪ್ರಸಿದ್ಧ ರೋಲ್ಸ್ ರಾಯ್ಸ್ ಕಲ್ಲಿನನ್ ಸಿರೀಸ್-II ಐಷಾರಾಮಿ ಕಾರನ್ನು ಮಾಲೀಕರೊಬ್ಬರು ಡೆಲಿವರಿ ಪಡೆದ ಫೋಟೋಗಳು ಸಖತ್ ವೈರಲ್ ಆಗಿದ್ದು, ಅದರಲ್ಲೂ ಆ ಕಾರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸುವುದು ಹಲವರ ಗಮನಸೆಳೆದಿದೆ. ಇದು ಬೆಂಗಳೂರಿನಲ್ಲಿ ನಡೆದಿದ್ದು, ಆಟೋಮೊಬಿಲಿ ಆರ್ಡೆಂಟ್ ಇಂಡಿಯಾ ಎಂಬ ಸಾಮಾಜಿಕ ಜಾಲತಾಣದ ಅಕೌಂಟ್ ಒಂದರಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಕಲ್ಲಿನನ್ ಸಿರೀಸ್-II ಕಾರಿಗೆ ಪೂಜೆ ಮಾಡುತ್ತಿರುವ ಚಿತ್ರಗಳು ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸಿದೆ.
ಹಿಂದೂ ಸಂಪ್ರದಾಯದಲ್ಲಿ ಮಾಲೀಕರು ಹೊಸದಾಗಿ ಖರೀದಿಸಿದ ವಾಹನಗಳಿಗೆ ಪೂಜೆ ನೆರವೇರಿಸುವುದು ಸಾಮಾನ್ಯವಾಗಿದೆ. ವಿಶೇಷ ಎಂದರೆ ಪೂಜಾರಿ ಸಹ ಕಾರು ಉತ್ಸಾಹಿಯಂತೆ ಕಾಣುತ್ತಾರೆ, ಪೂಜೆಯನ್ನು ಪೂರ್ಣಗೊಳಿಸಿದ ನಂತರ ಐಷಾರಾಮಿ ಕಾರಿನೊಂದಿಗೆ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ. ವಿದೇಶಗಳಲ್ಲಿ ಎಷ್ಟೇ ದುಬಾರಿಯಾಗಿದ್ದರೂ ಅದ್ದಕ್ಕೆ ಎಷ್ಟೇ ಜನಪ್ರಿಯತೆ ಇದ್ದರೂ ಭಾರತಕ್ಕೆ ಬಂದ ಮೇಲೆ ಸಾಂಪ್ರದಾಯಿಕ ಸ್ವಾಗತ ಕಡ್ಡಾಯ ಎಂಬುದನ್ನು ಈ ಫೋಟೋಗಳು ನಿರೂಪಿಸಿವೆ.

ರೋಲ್ಸ್ ರಾಯ್ಸ್ ಕಲ್ಲಿನನ್ ಸಿರೀಸ್-II ವಿಶೇಷೆಗಳು: ರೋಲ್ಸ್ ರಾಯ್ಸ್ ಕಂಪನಿಯು ಸೆಪ್ಟೆಂಬರ್ 2024 ನಲ್ಲಿ ಭಾರತದಲ್ಲಿ ಸಿರೀಸ್-II ಕಲ್ಲಿನಾನ್ ಅನ್ನು ಬಿಡುಗಡೆ ಮಾಡಿತು. ಭಾರತದ ಎಕ್ಸ್ ಶೋರೂಂ ದರದಂತೆ ಇದರ ಬೆಲೆಯು ರೂ.10.50 ಕೋಟಿಗಳಾಗಿದೆ. ಈ ಮೂಲಕ ಕಲ್ಲಿನನ್ ಭಾರತದ ಅತ್ಯಂತ ದುಬಾರಿ ಎಸ್‌ಯುವಿಯಾಗಿ ಮುಂದುವರೆದಿದೆ.
ಎಲ್-ಆಕಾರದ ಎಲ್ಇಡಿ ಡಿಆರ್ಎಲ್‌ಗಳೊಂದಿಗೆ ಐಷಾರಾಮಿ ಮುಂಭಾಗವನ್ನು ಹೊಂದಿದ್ದು, ಅದಕ್ಕೆ ತಕ್ಕ ಬಂಪರ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಈ ಕಾರಿನ ಮುಂಭಾಗದ ಫ್ಯಾಸಿಯಾದ ಒಟ್ಟಾರೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹಿಂಭಾಗದಲ್ಲಿ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಇದು ಈಗ ಹೊಸ ಸ್ಟೇನ್ ಲೆಸ್-ಸ್ಟೀಲ್ ಸ್ಕಿಡ್ ಪ್ಲೇಟ್‌ನೊಂದಿಗೆ ಬರುತ್ತದೆ.

ಇಂಟೀರಿಯರ್‌ನಲ್ಲಿ ಹೆಚ್ಚಿನ ತಂತ್ರಜ್ಞಾನಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಪೂರ್ಣ-ಅಗಲದ ಗ್ಲಾಸ್ ಪ್ಯಾನಲ್‌ನೊಂದಿಗೆ ಡಿಸೈನ್ ಮಾಡಲಾಗಿದೆ. ಇದು ದೊಡ್ಡ ಫ್ಯಾಂಟಮ್ VIII ನಲ್ಲಿ ಕಂಡುಬರುವ ಅದೇ ಡಿಸೈನ್ ಅನ್ನು ಹೋಲುತ್ತದೆ. ಹೊಸ ಡಿಸ್ಪ್ಲೇ ಕ್ಯಾಬಿನೆಟ್ ಕೂಡ ಇದ್ದು, ಇದು ವಿವರವಾದ ಅನಲಾಗ್ ಗಡಿಯಾರ ಮತ್ತು ಮಿನಿಯೇಟರೈಸ್ಡ್, ಪ್ರಕಾಶಮಾನವಾದ ಸ್ಪಿರಿಟ್ ಆಫ್ ಎಕ್ಸ್ಟಸಿ ಲೋಗೋವನ್ನು ಹೊಂದಿದೆ.
ಸೀರಿಸ್ II ಕಲ್ಲಿನನ್ ತಯಾರಕರ ಸ್ಪಿರಿಟ್ ಇನ್ಫೋಟೈನ್ ಮೆಂಟ್ ಸಿಸ್ಟಂನ ಇತ್ತೀಚಿನ ಆವೃತ್ತಿಯನ್ನು ಸಹ ಪಡೆಯುವುದರ ಜೊತೆಗೆ ರೋಲ್ಸ್ ರಾಯ್ಸ್ ಕಲ್ಲಿನನ್ ನಲ್ಲಿ ಉನ್ನತ ಮಟ್ಟದ ವೈಯಕ್ತೀಕರಣವನ್ನು (ಕಸ್ಟಮೈಸೇಷನ್) ನೀಡಲಾಗಿದೆ. ಇದು ಸುಧಾರಿತ ಗ್ರಾಫಿಕ್ಸ್ ಮತ್ತು ಉತ್ತಮ ಟಚ್ ರೆಸ್ಪಾನ್ಸ್ ಹೊಂದಿದೆ. ಎಸ್‌ಯುವಿಯು ಮಾಲೀಕರಿಗೆ ಬಾಹ್ಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಬಣ್ಣವನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.
ಕಲ್ಲಿನನ್ ಸೀರಿಸ್ II ಎಂಜಿನ್ ವಿಷಯಕ್ಕೆ ಬಂದರೆ 6.75 ಲೀಟರಿನ ಟ್ವಿನ್ ಟರ್ಬೋಚಾರ್ಜ್ಡ್ ವಿ12 ಎಂಜಿನ್ ಹೊಂದಿದ್ದು, 571 ಬಿಹೆಚ್ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ವಾಹನವು ಆಲ್ ವ್ಹೀಲ್ ಡ್ರೈವ್ (ಎಡಬ್ಲ್ಯುಡಿ) ಅನ್ನು ಸಹ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








