ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಾರುಗಳಿಗೆ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ ಈ ಪೈಕಿ ಕೆಲವರು ಮಾತ್ರವೇ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಲು ಸಾಧ್ಯವಾಗಿದೆ. ಈ ಕಾರುಗಳು ಎಷ್ಟು ದುಬಾರಿಯೆಂದರೆ ಅವುಗಳನ್ನು ಸಾಮಾನ್ಯ ಜನರು ಖರೀದಿಸಲು ಸಾಧ್ಯವೇ ಇಲ್ಲ.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ಶ್ರೀಮಂತರು ಮಾತ್ರವೇ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಲು ಸಾಧ್ಯ. ಭಾರತದಲ್ಲಿ ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯ ರೋಲ್ಸ್ ರಾಯ್ಸ್ ಕಾರುಗಳಿವೆ. ಕೋಟ್ಯಾಂತರ ರೂಪಾಯಿ ಬೆಲೆಯನ್ನು ಹೊಂದಿರುವ ರೋಲ್ಸ್ ರಾಯ್ಸ್ ಕಾರುಗಳು ತಮ್ಮ ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತವೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಸೆಳೆಯುತ್ತವೆ.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಾರ್ಪೊರೇಟ್ ಕಾರುಗಳಲ್ಲಿರುವ ಐಷಾರಾಮಿ ಅಂಶಗಳು ಬೇರೆ ಕಾರುಗಳಲ್ಲಿರುವುದಿಲ್ಲವೇ ಎಂಬ ಪ್ರಶ್ನೆ ಕಾಡಬಹುದು. ರೋಲ್ಸ್ ರಾಯ್ಸ್ ಕಾರುಗಳು ಒಂದು ಚೂರು ಅಲುಗಾಡದೇ ಅರಮನೆಯಲ್ಲಿ ಓಡಾಡುವಂತಹ ಅನುಭವವನ್ನು ನೀಡುತ್ತವೆ.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ಹಳೆಯ ರೋಲ್ಸ್ ರಾಯ್ಸ್ ಕಂಪನಿಯ ಪ್ರಧಾನ ಕಚೇರಿ ಬ್ರಿಟನ್‍‍ನ ಡರ್ಬಿಯಲ್ಲಿದೆ. ಈಗ ಬಹುರಾಷ್ಟ್ರೀಯ ಕಂಪನಿಯಾಗಿರುವ ರೋಲ್ಸ್ ರಾಯ್ಸ್ ಚೆನ್ನೈ ಐಐಟಿಯೊಂದಿಗೆ ಕೈಜೋಡಿಸಿದೆ. ರೋಲ್ಸ್ ರಾಯ್ಸ್ ಕಂಪನಿ ಹಾಗೂ ಐಐಟಿ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಿವೆ.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ಸಂಶೋಧನಾ ಉದ್ದೇಶಗಳಿಗಾಗಿ, ರೋಲ್ಸ್ ರಾಯ್ಸ್ ಹಾಗೂ ಐಐಟಿ ಚೆನ್ನೈ ಈ ಒಪ್ಪಂದಕ್ಕೆ ಸಹಿ ಹಾಕಿವೆ. ಜಂಟಿಯಾಗಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ರೋಲ್ಸ್ ರಾಯ್ಸ್ ಕಂಪನಿಯು ತಿಳಿಸಿದೆ.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ಈ ಒಪ್ಪಂದದ ಪ್ರಕಾರ, ರೋಲ್ಸ್ ರಾಯ್ಸ್ ಕಂಪನಿಯ ಕೆಲವು ಎಂಜಿನಿಯರ್‌ಗಳನ್ನು ಉನ್ನತ ಅಧ್ಯಯನಕ್ಕಾಗಿ ಐಐಟಿ ಮದ್ರಾಸ್‌ಗೆ ಕಳುಹಿಸಲಾಗುವುದು. ಈ ಒಪ್ಪಂದದ ಭಾಗವಾಗಿ, ರೋಲ್ಸ್ ರಾಯ್ಸ್ ಹಾಗೂ ಐಐಟಿ ಮದ್ರಾಸ್, ರೋಲ್ಸ್ ರಾಯ್ಸ್‌ನ ಭವಿಷ್ಯದ ತಂತ್ರಜ್ಞಾನಗಳಿಗೆ ಸೂಕ್ತವಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲಿವೆ.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಐಐಟಿ ಮದ್ರಾಸ್ ಸಹಯೋಗದಲ್ಲಿ ತನ್ನ ಕೆಲವು ಸಿಬ್ಬಂದಿಗಳಿಗೆ ಮಾಸ್ಟರ್ಸ್ ಹಾಗೂ ಪಿಎಚ್‌ಡಿ ಮಟ್ಟದ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಹಣಕಾಸಿನ ನೆರವು ನೀಡಲಿದೆ. ಇದಕ್ಕಾಗಿ ರೋಲ್ಸ್ ರಾಯ್ಸ್ ಉದ್ಯೋಗಿಗಳು ಐಐಟಿ ಮದ್ರಾಸ್ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಐಐಟಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ರೋಲ್ಸ್ ರಾಯ್ಸ್

ಕರ್ನಾಟಕ ರಾಜ್ಯ ಬೆಂಗಳೂರಿನ ರೋಲ್ಸ್ ರಾಯ್ಸ್ ಎಂಜಿನಿಯರಿಂಗ್ ಕೇಂದ್ರದಲ್ಲಿರುವ ಖಾಯಂ ನೌಕರರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಅವರು ರೋಲ್ಸ್ ರಾಯ್ಸ್‌ನಲ್ಲಿ 36 ತಿಂಗಳ ಸೇವೆಯನ್ನು ಪೂರೈಸಿದ್ದಾರೆ. ಇದರ ಮಾಹಿತಿಯನ್ನು ರೋಲ್ಸ್ ರಾಯ್ಸ್ ಕಂಪನಿಯು ಬಿಡುಗಡೆಗೊಳಿಸಿದೆ.

Most Read Articles

Kannada
English summary
Rolls Royce and IIT Madras signs MOU. Read in Kannada.
Story first published: Tuesday, March 10, 2020, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X