Video: ಮಧ್ಯರಾತ್ರಿಲಿ.. ಸಿಟಿ ರೋಡಲಿ.. ಚಲಿಸುವ ಬುಲೆಟ್ ಬೈಕ್ ಆಯ್ತು ಬೆಡ್‌ರೂಮ್, ಹಾಟ್ ರೋಮ್ಯಾನ್ಸ್!
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವುದು ಸದ್ಯ ಕ್ರೇಜ್ ಆಗಿ ಮಾರ್ಪಟ್ಟಿದೆ. ಅದಕ್ಕಾಗಿ ಕೆಲವು ಯುವಕ, ಯುವತಿಯರು ಸಾಕಷ್ಟು ಹರಸಾಹಸ ಪಡುತ್ತಾರೆ. ದೇಶದ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ವಾಹನಗಳಲ್ಲಿ ಸ್ಟಂಟ್ ಮಾಡುವುದು ಅಪರಾಧವಾಗಿದೆ ಎಂದು ತಿಳಿದಿದ್ದರೂ ಬೇಗ ಫೇಮಸ್ ಆಗಲು ಇದನ್ನೇ ಆರಿಸಿಕೊಳ್ಳುತ್ತಾರೆ.
ಹೆದ್ದಾರಿ ಸೇರಿದಂತೆ ಯಾವುದೇ ರೋಡ್ ಗಳಲ್ಲಿ ಬೈಕ್ ಅಥವಾ ಕಾರು ಬಳಸಿ, ಸಾಹಸ ಪ್ರದರ್ಶನ ಮಾಡಿ, ಹಲವು ಮಂದಿ ತಮ್ಮ ಪ್ರಾಣಕ್ಕೂ ಹಾನಿ ಮಾಡಿಕೊಳ್ಳುತ್ತಾರೆ. ಇಲ್ಲವೇ ಬೇರೆಯವರ ಜೀವಕ್ಕೂ ಎರವಾಗುತ್ತಾರೆ. ಇಂತಹ ಸಾಕಷ್ಟು ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ವಿಡಿಯೋವೊಂದು ಸಖತ್ ಹಲ್ ಚಲ್ ಸೃಷ್ಟಿಸಿದೆ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ. ಯುವಕನೊಬ್ಬ ತನ್ನ ಗೆಳತಿಯೊಂದಿಗೆ ತಡರಾತ್ರಿ ವೇಗವಾಗಿ ಚಲಿಸುವ ಬುಲೆಟ್ ಬೈಕ್ ನಲ್ಲಿ ಕುಳಿತುಕೊಂಡು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಮಮತಾ ತ್ರಿಪಾಠಿ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಲ್ಲಿನ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋವನ್ನು 40 ಸಾವಿರಕ್ಕೂ ಅಧಿಕ ಮಂದಿ ಈವರೆಗೆ ವೀಕ್ಷಿಸಿದ್ದಾರೆ. 100ಕ್ಕೂ ಹೆಚ್ಚು ಬಾರಿ ರೀ ಟ್ವಿಟ್ ಮಾಡಲಾಗಿದೆ. ಘಟನೆಗೆ ನೆಟ್ಟಿಗರು ಕಿಡಿ ಕಾರಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇಂತಹದ್ದೇ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಯುವತಿಯರಿಬ್ಬರೂ ಜೀವದ ಮೇಲೆ ಭಯವಿಲ್ಲ ಎಂಬಂತೆ ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಾ ಸ್ವಲ್ಪವು ನಾಚಿಕೆ ಇಲ್ಲದಂತೆ ಚುಂಬಿಸಿಕೊಂಡಿದ್ದರು. ಇದನ್ನು ನೆಟ್ಟಿಗರು ತೀವ್ರವಾಗಿ ಖಂಡಿದ್ದರು. ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯೇ ಇಲ್ಲ.
ದೇಶದ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಅಥವಾ ಕಾರುಗಳನ್ನು ಬಳಸಿ, ಸ್ಟಂಟ್ ಮಾಡಲು ಯಾವುದೇ ರೀತಿಯಿಂದಲ್ಲೂ ಅವಕಾಶವಿಲ್ಲ. ಆಗೋ ಸಾಹನ ಪ್ರದರ್ಶನ ಮಾಡಬೇಕು ಅಂದುಕೊಂಡರೇ ರೇಸ್ ಟ್ರ್ಯಾಕ್ ಅಥವಾ ನಿಮ್ಮ ಖಾಸಗಿ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಡೆಸಿ. ಜನಸಂಚಾರಿ ರೋಡ್ ನಲ್ಲಿ ಈ ಕೆಲಸ ಮಾಡಿ, ಇತರರಿಗೆ ತೊಂದರೆ ನೀಡಬೇಡಿ.
ಇನ್ನು, ಲಕ್ನೋದಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ವೇಗವಾಗಿ ಚಲಿಸುವ ಬೈಕ್ ನಲ್ಲಿ ಕುಳಿತುಕೊಂಡು ರೋಮ್ಯಾನ್ಸ್ ಮಾಡಿರುವ ವಿಡಿಯೋಗೆ ಎಲ್ಲಡೆ ಭಾರಿ ವಿರೋಧ ವ್ಯಕ್ತವಾಗಿದ್ದು, ಅಲ್ಲಿನ ಪೊಲೀಸರು ಕಠಿಣ ಕ್ರಮಕೈಗೊಂಡು ಈ ರೀತಿ ಮತ್ತೆ ಕೆಲಸವನ್ನು ಮಾಡದಂತೆ ಎಚ್ಚರಿಸಬೇಕಾಗಿದೆ. ಯಾರೇ ಆಗಲಿ ತಮ್ಮ ಹುಚ್ಚುತನದಿಂದ ಇಂತಹ ಕೆಲಸ ಕೈ ಹಾಕಬೇಡಿ. ಇದರಿಂದ ನಿಮ್ಮ ಬಂಗಾರದ ಬದುಕು ಅಪಾಯಕ್ಕೆ ಸಿಲುಕಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications