ಬ್ರಿಟನ್‌ನ ಅರ್ಧದಷ್ಟು ಮಂದಿ ಕಾರಲ್ಲಿ ರತಿಕ್ರೀಡೆ!
ಈ ಲೇಖನವನ್ನು ಓದಲು ಮುಜುಗರ ಅನಿಸಿದರೂ ನೈಜ ಸಮೀಕ್ಷಾ ವರದಿಯನ್ನು ಒಪ್ಪಿಕೊಳ್ಳಲೇಬೇಕು. ಒಂದು ಕ್ಷಣ ಲೇಖನ ಬರೆಯಬೇಕೋ ಬೇಡವೋ ಎಂಬ ಗೊಂದಲ ನಮ್ಮಲ್ಲೂ ಸೃಷ್ಟಿಯಾಗಿತ್ತು. ಆದರೆ ಇಲ್ಲಿ ಕೊಟ್ಟಿರುವ ಮಾಹಿತಿಯಂತೂ ಸಂಪೂರ್ಣ ಸತ್ಯ. ಯಾಕೆಂದರೆ ಬ್ರಿಟನ್‌ನ ಪ್ರಖ್ಯಾತ ದಿನಪತ್ರಿಕೆ ಡೈಲಿ ಮೇಲ್‌ನಲ್ಲಿ ವರದಿಯಾಗಿರುವ ವಾರ್ತೆಯಿದು.
ಹೌದು, ಬ್ರಿಟನ್‌ನ ಅರ್ಧದಷ್ಟು ಮಂದಿ ತಾವು ಕಾರಲ್ಲಿ ರತಿಕ್ರೀಡೆ ಮಾಡುತ್ತಿರುವುದನ್ನು ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಂಡಿರುತ್ತಾರೆ. ಇನ್ನು ಹೆಚ್ಚು ಆಳವಾಗಿ ಹೇಳಬೇಕೆಂದರೆ ಫೋರ್ಡ್, ಫೋಕ್ಸ್‌ವ್ಯಾಗನ್‌ಗಳಂತಹ ಕಾರುಗಳು ರೋಮಾನ್ಸ್ ಮಾಡಲು ನೆಚ್ಚಿನ ಪ್ರದೇಶವಂತೆ! ಇನ್ನು ಏನೆಲ್ಲ ವಿಚಾರವನ್ನು ಹಂಚಿಕೊಂಡಿರಬಹುದು? ಸ್ಲೈಡರ್‌ನಲ್ಲಿದೆ ಸ್ಪಷ್ಟ ವರದಿ.

ಕಾರಲ್ಲಿ ರತಿಕ್ರೀಡೆ
ಶೇಕಡಾ 49ರಷ್ಟು ಬ್ರಿಟನ್ ಮಂದಿಗಳು ಜೀವನದಲ್ಲಿ ಒಂದು ಬಾರಿಯಾದರೂ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಏನೋ ಮಹತ್ತರ ಸಾಧನೆ ಮಾಡಿದ ರೀತಿಯಲ್ಲಿ ಒಪ್ಪಿಕೊಂಡಿದ್ದಾರೆ.

ಸಮೀಕ್ಷಾ ವರದಿ
ಕಾರು ತಯಾರಕ ಸಂಸ್ಥೆ ಬಿಬಿಎ ರೇಮಾನ್ (BBA Reman) ನಡೆಸಿರುವ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಒಟ್ಟು 2,018 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಐದು ಬಾರಿ ಪುನರಾವರ್ತನೆ
ನೀವು ಒಂದು ಬಾರಿ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ಬಹುಶ: ಕನಿಷ್ಠ ಪಕ್ಷ ಐದು ಬಾರಿ ಇದನ್ನು ಆವರ್ತಿಸಿರಬಹುದು ಎಂದು ವರದಿಯು ತಿಳಿಸುತ್ತದೆ.

ಪ್ರಾಯ ಪರಿಧಿ
35ರಿಂದ ಹಿಡಿದು 55 ವರ್ಷದ ತನಕದ ಪುರುಷ ಹಾಗೂ ಮಹಿಳೆಯರು ಕಾರಲ್ಲಿ ರತಿಕ್ರೀಡೆಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಚಲಿಸುವ ಕಾರಲ್ಲಿ...
ಇನ್ನು ಆಸಕ್ತಿದಾಯಕ ವಿಚಾರವೆಂದರೆ ಶೇಕಡಾ 3ರಷ್ಟು ಮಂದಿ ಚಲಿಸುವ ಕಾರಿನಲ್ಲಿ ಇಂತಹ ಅನುಭವವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಫೇವರಿಟ್ ಕಾರು
ಫೋರ್ಡ್, ಫೋಕ್ಸ್‌ವ್ಯಾಗನ್, ವಾಕ್ಸ್‌ಹ್ಯಾಲ್ ಕಾರುಗಳು ಬ್ರಿಟನ್ ಸೆಕ್ಸ್ ಪ್ರಿಯರ ಫೇವರಿಟ್ ಎನಿಸಿಕೊಂಡಿದೆ.

ಬ್ಯಾಕ್ ಸೀಟ್
ಇನ್ನು ಸೆಕ್ಸ್ ಮಾಡಲು ಬ್ಯಾಕ್ ಸೀಟ್ ಸೂಕ್ತವಾದ ಪ್ರದೇಶವಾಗಿದೆ ಎಂಬುದನ್ನು ಕೂಡಾ ಬಹಿರಂಗಪಡಿಸಿದ್ದಾರೆ.

ಯುವಕ-ಯುವತಿ
ಪ್ರಾಯಸ್ಥರನ್ನು ಗಮನಿಸಿದಾಗ ಯೌವನಾವಸ್ಥೆಯ 18ರಿಂದ 34 ಪ್ರಾಯ ಪರಿಧಿಯೊಳಗಿರುವವರ ಶೇಕಡಾವಾರು ಸಂಖ್ಯೆ ಸ್ವಲ್ಪ ಕಡಿಮೆ. ಇದು ಶೇಕಡಾ 38 ಆಗಿದೆ.

ಐದು ಬಾರಿ
ಇನ್ನು ಎಷ್ಟು ಬಾರಿ ಇಂತಹ ಪ್ರಸಂಗಗಳಲ್ಲಿ ತೊಡಗಿದ್ದಾರೆ ಎಂಬ ಪ್ರಶ್ನೆಗೆ ಸರಾಸರಿ ಐದು ಬಾರಿಯೆಂಬ ಉತ್ತರ ಬಂದಿದೆ.

ಸಣ್ಣ ಕಾರುಗಳ ಆಯ್ಕೆ
ತಮ್ಮ ಲೈಂಗಿಕ ಆಸೆಗಳನ್ನು ತೀರಿಸಿಕೊಳ್ಳಲು ಫೋರ್ಡ್ ಫಿಯೆಸ್ಟಾ, ಫೋಕ್ಸ್‌ವ್ಯಾಗನ್ ಗಾಲ್ಫ್‌ಗಳಂತಹ ಸಣ್ಣ ಕಾರುಗಳನ್ನು ಇಷ್ಟಪಡುತ್ತಾರೆ.

ಸುರಕ್ಷತೆಗೆ ಪ್ರಾಮುಖ್ಯತೆ
ಶೇಕಡಾ 3ರಷ್ಟು ಮಂದಿ ಮಾತ್ರ ಸಂಚರಿಸುವ ಕಾರುಗಳಲ್ಲಿ ರತಿಕ್ರಿಯೆ ಇಷ್ಟಪಡುವುದರಿಂದ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಸಮೀಕ್ಷೆಯು ಉಲ್ಲೇಖಿಸಿದೆ.

ರತಿಕ್ರೀಡೆಗಾಗಿ ಬಳಸುವ ಅಚ್ಚುಮೆಚ್ಚಿನ ಕಾರುಗಳು
ಫೋರ್ಡ್ ಫಿಯೆಸ್ಟಾ- ಶೇಕಡಾ 29
ಫೋಕ್ಸ್‌ವ್ಯಾಗನ್ ಗಾಲ್ಫ್- ಶೇಕಡಾ 27
ವ್ಯಾಕ್ಸ್‌ಹಾಲ್ ಕೋರ್ಸಾ- ಶೇಕಡಾ 23

ರತಿಕ್ರೀಡೆ ನಡೆಸುವ ಅಚ್ಚುಮೆಚ್ಚಿನ ಕಾರುಗಳು
ಮಿನಿ- ಶೇಕಡಾ 21
ರೆನೊ ಕ್ಲಿಯೊ- ಶೇಕಡಾ 18
ಪಿಯೊಜೆಟ್ 205- ಶೇಕಡಾ 15

ರತಿಕ್ರೀಡೆ ನಡೆಸುವ ಅಚ್ಚುಮೆಚ್ಚಿನ ಕಾರುಗಳು
ಫೋರ್ಡ್ ಎಸ್ಕಾರ್ಟ್- ಶೇಕಡಾ 11
ವೋಲ್ವೋ ವಿ70- ಶೇಕಡಾ 8
ನಿಸ್ಸಾನ್ ಮೈಕ್ರಾ- ಶೇಕಡಾ 5
ವ್ಯಾಕ್ಸ್‌ಹಾಲ್ ಆಸ್ಟ್ರಾ- ಶೇಕಡಾ 5

ನೆಚ್ಚಿನ ಸ್ಥಳ
ಪ್ರದರ್ಶನಾತ್ಮಕ ಜಾಗ ಶೇಕಡಾ 37
ಪಾರ್ಕ್ ಮಾಡಿದ ಕಾರಲ್ಲಿ ಶೇಕಡಾ 29
ವಾಹನಪಥದಲ್ಲಿ ಶೇಕಡಾ 22
ಚಲಿಸುತ್ತಿರುವ ಕಾರಲ್ಲಿ ಶೇಕಡಾ 3


Click it and Unblock the Notifications








