ಬೆಡ್‌ರೂಂ ಆಯ್ತು ಬೈಕ್... ಓಯೋದಿಂದ ಬೈಕ್ ಖರೀದಿಸಿದ್ದೀರಾ? ನೆಟ್ಟಿಗರ ಪ್ರಶ್ನೆ
ಇತ್ತೀಚೆಗೆ ಸಾರ್ವಜನಿಕ ರಸ್ತೆಗಳಲ್ಲಿ ಪ್ರೇಮಿಗಳ ರೊಮ್ಯಾನ್ಸ್ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಬೈಕ್ ಮೇಲೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಅಶ್ಲೀಲವಾಗಿ ವರ್ತಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಜೋಡಿ ನೇರವಾಗಿ ಓಯೊದಿಂದ ಬೈಕ್ ಖರೀದಿಸಿದಂತಿದೆ, ಬೆಡ್‌ರೂಂ ಆಯ್ತು ಬೈಕ್ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್‌ಗಳು ಅಥವಾ ಈ ರೀತಿ ಬೈಕನ್ನು ಬೆಡ್‌ರೂಂ ಮಾಡಿಕೊಂಡು ಓಡಿಸುವುದು ಅವರಿಗೆ ಮಾತ್ರವಲ್ಲ ಸಹ ಪ್ರಯಾಣಿಕರಿಗೂ ಕುತ್ತು ತರುತ್ತದೆ. ಯುವ ಜೋಡಿಗಳು ಬೈಕ್‌ಗಳಲ್ಲಿ ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುವ ಹಲವು ಸುದ್ದಿಗಳನ್ನು ನಾವೇ ಬಿತ್ತರಿಸಿದ್ದೇವೆ. ಇದೀಗ ದೆಹಲ್ಲಿಯಿಂದ ವರದಿಯಾದ ಮತ್ತೊಂದು ಘಟನೆಯಲ್ಲಿ ಪ್ರೇಮಿಗಳು ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡಿ ಪೊಲೀಸರಿಂದ ದಂಡ ಹಾಕಿಸಿಕೊಂಡಿದ್ದಾರೆ.

ಜುಲೈ 16 ರಂದು ದೆಹಲಿಯ ಮಂಗೋಲ್ಪುರಿ ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ ಎಂದು ವೀಡಿಯೊವನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಯುವತಿ ಇಂಧನ ಟ್ಯಾಂಕ್ ಮೇಲೆ ಕುಳಿತು ತನ್ನ ಪ್ರೇಮಿಗೆ ಮುಖಾಮುಖಿಯಾಗಿ ತಬ್ಬಿಕೊಂಡು ಕುಳಿತಿದ್ದರೇ ಆತ ಅತಿವೇಗವಾಗಿ ಬೈಕ್ ಚಲಾಯಿಸುವುದನ್ನು ನೋಡಬಹುದು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಬೇಜವಾಬ್ದಾರಿ ಮತ್ತು ಅಶ್ಲೀಲ ನಡವಳಿಕೆ ಖಂಡಿಸಿ ಹಲವರು ಟೀಕಿಸಿದ್ದಾರೆ. ಹಾಗೆಯೇ ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಟ್ರಾಫಿಕ್ ಪೊಲೀಸರು, ''ಧನ್ಯವಾದಗಳು, ಟ್ರಾಫಿಕ್ ಉಲ್ಲಂಘನೆಯನ್ನು ದೆಹಲಿ ಟ್ರಾಫಿಕ್ ಪೊಲೀಸ್ ಸೆಂಟಿನೆಲ್ ಆಪ್‌ನಲ್ಲಿ ವರದಿ ಮಾಡಲು ನಿಮ್ಮನ್ನು ವಿನಂತಿಸುತ್ತೇವೆ'' ಎಂದು ಹೇಳಿದ್ದಾರೆ.
ಈ ಹಿಂದೆಯೂ ಹಲವು ಘಟನೆಗಳು: ಯುವತಿಯರಿಬ್ಬರೂ ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಾ, ಜೊತೆಗೆ ಸ್ವಲ್ಪವು ನಾಚಿಕೆ ಇಲ್ಲದಂತೆ ಚುಂಬಿಸಿಕೊಂಡಿದ್ದರು. ಇದನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ವಾಹನದ ನೋಂದಣಿ ಸಂಖ್ಯೆಯು ತಮಿಳುನಾಡಿನದ್ದಾಗಿತ್ತು.
ಜಾರ್ಖಂಡ್ ಮೂಲದ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿತ್ತು. ಇದರಲ್ಲಿ ಚಲಿಸುತ್ತಿರುವ ಬೈಕಿನಲ್ಲಿ ಇಬ್ಬರು ಯುವತಿಯರು ಯಾವುದೇ ಭಯವಿಲ್ಲದೆ, ಪರಸ್ಪರ ಮುಖ ಮಾಡಿಕೊಂಡು ಕುಳಿತು, ಕೊಂಚವು ಅಳುಕಿಲ್ಲದೆ ಚುಂಬಿಸುತ್ತಾ ತಬ್ಬಿಕೊಂಡು ಚುಂಭಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು, ಪಕ್ಕದಲ್ಲಿಯೇ ಬಂದ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದ.

ಜನನಿಬಿಡ ದೆಹಲಿ ರಸ್ತೆಯೊಂದರಲ್ಲಿ ಈ ಹಿಂದೆ ಯುವಕ ಡ್ರೈವಿಂಗ್ ಮಾಡುತ್ತಲೇ ಹಿಂಬದಿ ಕುಳಿತಿರುವ ತನ್ನ ಪ್ರೇಯಸಿಯನ್ನು ತಬ್ಬಿಕೊಳ್ಳುವ ರೀತಿ ಕುಳಿತಿದ್ದ. ಯುವತಿ ಕೂಡ ಆ ಯುವಕನನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಶಾಲು ಕಶ್ಯಪ್ ತನೇಜಾ ಎಂಬ ಬಳಕೆದಾರರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದರು.
ಸರ್ಕಾರಗಳು ಎಷ್ಟೇ ಕ್ರಮ ಕೈಗೊಂಡರೂ ಇಂತಹ ಘಟನೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಬೈಕ್ ಹಾಗೂ ಕಾರುಗಳಲ್ಲಿ ಹೀಗೆ ಸ್ಟಂಟ್ ಮಾಡಿಕೊಂಡು ತಾವು ಅಪಾಯಕ್ಕೆ ಸಿಲುಕುವುದಲ್ಲದೇ ಎದರುಗಡೆ ಬರುವ ಪ್ರಯಾಣಿಕರನ್ನೂ ಅಪಘಾತಗಳಿಗೆ ಸಿಲುಕಿಸುವುದು ಸರಿಯಲ್ಲ. ಯುವತಿ, ಯುವಕರು ಈ ಲೇಖನವನ್ನು ಓದುತ್ತಿದ್ದರೇ ದಯವಿಟ್ಟು ಇಂತಹ ಕೆಲಸಗಳನ್ನು ಮಾಡದಿರಿ ಎಂಬುದು ಡ್ರೈವ್‌ಸ್ಪಾರ್ಕ್ ವಿನಂತಿ.


Click it and Unblock the Notifications