ಕ್ಯಾಬ್‌ನಲ್ಲಿ ರೊಮ್ಯಾನ್ಸ್ ಮಾಡುವವರಿಗೆ ಖಡಕ್ ಎಚ್ಚರಿಕೆ.. ಈ ಡ್ರೈವರ್ ಹಲವರಿಗೆ ಮಾದರಿ: Video viral

ಕ್ಯಾಬ್‌ಗಳು ನಗರ ಪ್ರದೇಶದ ಜನರ ಜೀವನದ ಭಾಗವಾಗಿ ಮಾರ್ಪಟ್ಟಿವೆ. ಅದರಲ್ಲೂ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೆಚ್ಚಾಗಿ ಇವುಗಳ ಮೇಲೆ ಅವಲಂಬಿತರಾಗಿರುತ್ತಾರೆ. ಸದ್ಯ, 'ಕ್ಯಾಬ್‌ನೊಳಗೆ ರೋಮ್ಯಾನ್ಸ್ ಮಾಡುವಂತಿಲ್ಲ' ಎಂದು ಪೇಪರ್ ನಲ್ಲಿ ಪ್ರಿಂಟ್ ಮಾಡಿ, ಆಂಟಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಟ್ರಾಫಿಕ್ ಕಿರಿ - ಕಿರಿ, ತುಂಬಿ ತುಳುಕುವ ಬಸ್ ಗಳ ಸಹವಾಸವೇ ಬೇಡವೆಂದು ಬಹುತೇಕರು ಕ್ಯಾಬ್‌ಗಳ ಮೊರೆ ಹೋಗುತ್ತಾರೆ. ಮೊಬೈಲ್ ಫೋನ್ ನಲ್ಲಿ ಸಂಬಂಧಪಟ್ಟ ಕ್ಯಾಬ್‌ ಸೇವೆ ಒದಗಿಸುವ ಕಂಪನಿ ಆಪ್ ಇದ್ದು, ಅದರಲ್ಲಿ ಬುಕಿಂಗ್ ಮಾಡಿದ ಕೆಲವೇ ಕ್ಷಣದಲ್ಲಿ ಕ್ಯಾಬ್ ಬಂದು ನಿಮ್ಮ ಮನೆ ಮುಂದೆ ನಿಲ್ಲುತ್ತದೆ. ಜೊತೆಗೆ ನಿಮ್ಮನ್ನು ಸಮಯಕ್ಕೆ ಸರಿಯಾಗಿ, ನಿರ್ದಿಷ್ಟ ಸ್ಥಳಕ್ಕೆ ಅದರ ಚಾಲಕರು ತಲುಪಿಸುತ್ತಾರೆ.

ಕ್ಯಾಬ್‌ನಲ್ಲಿ ರೊಮ್ಯಾನ್ಸ್ ಮಾಡುವವರಿಗೆ ಖಡಕ್ ಎಚ್ಚರಿಕೆ.. ಈ ಡ್ರೈವರ್ ಹಲವರಿಗೆ ಮಾದರಿ: Video viral

ಅದಕ್ಕೂ ಮೊದಲು ಕ್ಯಾಬ್ ಹತ್ತಿದ ಕೊಡಲೇ ಚಾಲಕರು, ನೀವು ತಲುಪಬೇಕಾದ ಸ್ಥಳ, ಹಣ ಪಾವತಿ ವಿಧಾನ ಸೇರಿದಂತೆ ಇನ್ನಿತರೇ ಮಾಹಿತಿ ಪಡೆಯುತ್ತಾರೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸುವಂತೆಯೂ ಮನವಿ ಮಾಡುತ್ತಾರೆ. ಇದೀಗ, ಸೋಷಿಯಲ್ ಮೀಡಿಯಾದಲ್ಲಿ ಕ್ಯಾಬ್‌ನಲ್ಲಿ ರೋಮ್ಯಾನ್ಸ್ ಮಾಡುವಂತಿಲ್ಲ (Romance not allowed in this cab) ಎಂದು ಸ್ಟಿಕರ್ ಅಂಟಿಸಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ 'thatguywithbeard' ಎಂಬ ಯೂಸರ್ ಶೇರ್ ಮಾಡಿರುವ ವಿಡಿಯೋದಲ್ಲಿ ಆತ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಕಾರಿನೊಳಗೆ ಕುಳಿತುಕೊಂಡ ತಕ್ಷಣ, 'ಕ್ಯಾಬ್‌ನಲ್ಲಿ ರೋಮ್ಯಾನ್ಸ್ ಮಾಡಬಾರದು' ಎಂದು ಪೇಪರ್ ನಲ್ಲಿ ಪ್ರಿಂಟ್ ಮಾಡಿ, ಆಂಟಿಸಿರುವ ಸ್ಟಿಕರ್ ಓದಿ, 'ಅಚ್ಚಾ ಹುವಾ ಮೇ ಅಪ್ನಿ ಗೆಳತಿ ಕೆ ಸಾಥ್ ನಹೀ ಆಯಾ' (ನನ್ನ ಗೆಳತಿಯೊಂದಿಗೆ ಬರದಿರುವುದು ಒಳ್ಳೆಯದಾಯಿತು) ಎಂದು ಹೇಳುತ್ತಾರೆ.

ಇದನ್ನು ಕೇಳಿಕೊಂಡ ಚಾಲಕ, 'ಸರ್, ಆಪ್ಕಿ ಭಿ ಗರ್ಲ್ ಫ್ರೆಂಡ್ ಹೈ?' (ನಿಮಗೂ ಒಬ್ಬ ಗೆಳತಿ ಇದ್ದಾಳೆಯೇ?)" ಎಂದು ಮರು ಪ್ರಶ್ನೆ ಮಾಡುತ್ತಾರೆ. ಸದ್ಯ, ಈ ಪೋಸ್ಟ್ ವೈರಲ್ ಆಗಿ ಮಾರ್ಪಟ್ಟಿದ್ದು, ಕೇವಲ ಆರು ದಿನದಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ ಬಂದಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಬಳಕೆದಾರನೊಬ್ಬ 'ಯಾರಾದರೂ ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಆದರೆ ನನಗಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬ ಇನ್ಸ್ಟಾಗ್ರಾಮ್ ಯೂಸರ್, 'ಇದು ಎಮೋಷನಲ್ ಡ್ಯಾಮೇಜ್' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಕೆಲವೇ ಸೆಕೆಂಡುಗಳಲ್ಲಿ ನಾಶವಾಯಿತು' ಎಂದು ಹೇಳಿದ್ದು, ಬಹುತೇಕರು, ನಗುವಿನ ಎಮೋಜಿಗಳನ್ನು ಬಳಕೆ ಮಾಡಿ, ಪ್ರತಿಕ್ರಿಯೆ ನೀಡಿದ್ದು, ಕಾಮೆಂಟ್ ಸಂಖ್ಯೆಯೇ 350ಕ್ಕೂ ಹೆಚ್ಚಿದೆ.

ಇನ್ನು, ಈ ಚಾಲಕ ಮಾಡಿರುವುದು ಸರಿಯಿದೆ. ಸಾರ್ವಜನಿಕ ಸ್ಥಳದದಲ್ಲಿ ರೋಮ್ಯಾನ್ಸ್ ಮಾಡುವುದು ತಪ್ಪು. ಅವರು, ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಇನ್ನಷ್ಟು ಮಂದಿ, ಈ ರೀತಿಯಾಗಿ ಸ್ಟಿಕರ್ ಹಾಕುವುದು ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಈ ವಿಚಾರವಂತೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.

Article Published On: Thursday, May 18, 2023, 12:54 [IST]
English summary
Romance not allowed in this cab video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+