ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಕೆಲವು ವರ್ಷಗಳ ಹಿಂದೆ ದೆವ್ವ ಭೂತಗಳಿಗೆ ಸಂಬಂಧಿಸಿದ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಈಗ ಅಂತಹ ಸಿನಿಮಾಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆ ಸಿನಿಮಾಗಳಲ್ಲಿ ಭಯಾನಕ ದೃಶ್ಯಗಳನ್ನು ಕಾಣಬಹುದು. ಕೆಲವು ದೃಶ್ಯಗಳಲ್ಲಿ ಚಾಲಕರಿಲ್ಲದೇ ಚಲಿಸುವ ಕಾರುಗಳನ್ನು, ಸವಾರನಿಲ್ಲದೇ ಚಲಿಸುವ ಬೈಕುಗಳನ್ನು ಸಹ ಕಾಣಬಹುದು.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಈ ರೀತಿಯ ದೃಶ್ಯಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವೆಂದು ಕೊಂಡರೆ ಅದು ತಪ್ಪು ಅಭಿಪ್ರಾಯ. ಹಾರರ್ ಚಿತ್ರಗಳಿಗೆ ಸಡ್ಡು ಹೊಡೆಯುವಂತಹ ಘಟನೆಯೊಂದು ನಿಜವಾಗಿಯೂ ಸಂಭವಿಸಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದಲ್ಲಿ. ಮಹಾರಾಷ್ಟ್ರದ ಪುಣೆ - ನಾಸಿಕ್ ಹೆದ್ದಾರಿಯಲ್ಲಿ ಈ ಸಿನಿಮೀಯ ಘಟನೆ ನಡೆದಿದೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಆಗಸ್ಟ್ 9 ರಂದು ಸಂಜೆ 6.30 ರ ಸುಮಾರಿಗೆ ಸವಾರನಿಲ್ಲದ ರಾಯಲ್ ಎನ್ ಫೀಲ್ಡ್ ಬೈಕ್ ಪುಣೆ - ನಾಸಿಕ್ ಹೆದ್ದಾರಿಯಲ್ಲಿ ಚಲಿಸಿದೆ. ರಸ್ತೆಯಲ್ಲಿದ್ದ ಜನರು ಸವಾರನಿಲ್ಲದೇ ಚಲಿಸುತ್ತಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ನೋಡಿ ಒಂದು ಕ್ಷಣ ಅವಕ್ಕಾಗಿದ್ದಾರೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಇದೇ ವೇಳೆ ಆಟೋಮ್ಯಾಟಿಕ್ ಆಗಿ ಚಲಿಸುತ್ತಿದ್ದ ಈ ರಾಯಲ್ ಎನ್ ಫೀಲ್ಡ್ ಬೈಕಿನ ಮುಂದೆ ಬರುತ್ತಿದ್ದ ಬೇರೆ ವಾಹನ ಚಾಲಕರಿಗೆ ಅಲ್ಲಿದ್ದ ಜನರು ಜೋರಾಗಿ ಕೂಗುತ್ತಾ ಎಚ್ಚರಿಕೆ ನೀಡುತ್ತಿರುವುದನ್ನು ಈ ವೀಡಿಯೊದಲ್ಲಿ ಗಮನಿಸ ಬಹುದು.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಈ ಕೂಗಾಟದಿಂದ ಆ ಪ್ರದೇಶದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಅಲ್ಲಿದ್ದ ಕೆಲವು ಜನರು ಈ ಬೈಕ್ ಅನ್ನು ಹಿಂಬಾಲಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಎದುರಿನಿಂದ ವಾಹನಗಳು ವೇಗವಾಗಿ ಬರುತ್ತಿದ್ದ ಕಾರಣ ಅವರಿಗೆ ಬೈಕ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಆಟೋಮ್ಯಾಟಿಕ್ ಆಗಿ ಚಲಿಸುತ್ತಿದ್ದ ಈ ರಾಯಲ್ ಎನ್ ಫೀಲ್ಡ್ ಬೈಕ್ ವೇಗವಾಗಿ ಚಲಿಸುತ್ತಾ ಎದುರಿನಿಂದ ಬಂದ ಕಮರ್ಷಿಯಲ್ ವಾಹನಕ್ಕೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಆದರೆ ಅಷ್ಟರಲ್ಲಿಯೇ ಆ ವಾಹನದ ಚಾಲಕ ತಾನು ಚಾಲನೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಿದ್ದಾನೆ. ನಂತರ ಆ ಬೈಕ್ ಹತ್ತಿರದಲ್ಲಿದ್ದ ಕಟ್ಟಡದ ಆವರಣಕ್ಕೆ ತೆರಳಿ ಕೆಳಕ್ಕೆ ಬೀಳುತ್ತದೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಎದುರಿಗೆ ಬರುತ್ತಿದ್ದ ಕಮರ್ಷಿಯಲ್ ವಾಹನದ ಚಾಲಕ ಈ ಮಾನವ ರಹಿತ ಬೈಕನ್ನು ನೋಡಿ ತನ್ನ ವಾಹನವನ್ನು ನಿಲ್ಲಿಸಿದ್ದಾನೆ. ಈ ವೀಡಿಯೊವನ್ನು ನೋಡುವವರು ಈ ಬೈಕ್ ಖಂಡಿತವಾಗಿಯೂ ಆ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ ಎಂದು ಭಾವಿಸಿದ್ದರು.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಆದರೆ ಕಮರ್ಷಿಯಲ್ ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತವಾಗುವುದು ತಪ್ಪಿದೆ. ಈ ರಾಯಲ್ ಎನ್ ಫೀಲ್ಡ್ ಬೈಕ್ ಆಟೋಮ್ಯಾಟಿಕ್ ಆಗಿ ಸುಮಾರು 300 ಮೀ ಗಳವರೆಗೆ ಚಲಿಸಿದೆ. ನಂತರ ಖಾಸಗಿ ಪ್ರದೇಶಕ್ಕೆ ಅಪ್ಪಳಿಸಿದೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ವರದಿಗಳ ಪ್ರಕಾರ ಈ ಘಟನೆಯಲ್ಲಿ ಆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನಾರ್ಧನ ಎಂಬಾತನಿಗೆ ಸ್ವಲ್ಪ ಗಾಯವಾಗಿದೆ. ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುವನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಹೆದ್ದಾರಿಯಲ್ಲಿ ಮಾನವ ರಹಿತವಾಗಿ ರಾಯಲ್ ಎನ್ ಫೀಲ್ಡ್ ಬೈಕ್ ಚಲಿಸಿದ ಘಟನೆಯು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೊ ಆಧಾರದ ಮೇಲೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಈ ರಾಯಲ್ ಎನ್‍ಫೀಲ್ಡ್ ಬೈಕ್ ರಸ್ತೆಯಲ್ಲಿ ಆಟೋಮ್ಯಾಟಿಕ್ ಆಗಿ ಹೇಗೆ ಚಲಿಸಿತು, ಈ ಬೈಕಿನ ಮಾಲೀಕರು ಯಾರು ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಲಭ್ಯವಾಗಿಲ್ಲ. ವಿಶ್ವದಲ್ಲಿ ಈಗ ಟೆಸ್ಲಾ ಕಂಪನಿಯ ಕಾರುಗಳು ಮಾತ್ರ ಚಾಲಕ ರಹಿತವಾಗಿ ಸಂಚಾರ ನಡೆಸುತ್ತಿವೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ಆದರೆ ಜಗತ್ತಿನಲ್ಲಿ ಇದುವರೆಗೂ ಯಾರೂ ಚಾಲಕ ರಹಿತ ಬೈಕುಗಳನ್ನು ಅಭಿವೃದ್ಧಿ ಪಡಿಸಿಲ್ಲ. ಇದರ ಜೊತೆಗೆ ರಾಯಲ್ ಎನ್‍ಫೀಲ್ಡ್ ಕಂಪನಿಯು ಸಹ ತನ್ನ ಯಾವುದೇ ಬೈಕ್‍ಗಳಲ್ಲಿ ಚಾಲಕ ರಹಿತ ಸವಾರಿಯ ತಂತ್ರಜ್ಞಾನಗಳನ್ನು ನೀಡಿಲ್ಲ.

ಭೌತಶಾಸ್ತ್ರದ ನಿಯಮದ ಪ್ರಕಾರ ಈ ಬೈಕ್ ರೀತಿ 300 ಮೀ ಗಳವರೆಗೆ ಆಟೋಮ್ಯಾಟಿಕ್ ಆಗಿ ಚಲಿಸಿದೆ. ಇದರರ್ಥ ಈ ಬೈಕ್ ಅನ್ನು ಅದರ ಮಾಲೀಕ ಇಳಿ ಜಾರು ಪ್ರದೇಶದಲ್ಲಿ ನಿಲ್ಲಿಸಿರಬಹುದು. ಸಮತೋಲನ ಕಳೆದುಕೊಂಡ ಬೈಕ್ ಆಟೋಮ್ಯಾಟಿಕ್ ಆಗಿ ಇಳಿ ಜಾರು ಪ್ರದೇಶದಲ್ಲಿ ಚಲಿಸಿರುವ ಸಾಧ್ಯತೆಗಳಿವೆ.

ಸವಾರನಿಲ್ಲದೇ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿದ ರಾಯಲ್ ಎನ್‍ಫೀಲ್ಡ್ ಬೈಕ್

ರಾಯಲ್ ಎನ್ ಫೀಲ್ಡ್ ಬೈಕ್ ಯಾವ ಸವಾರರು ಇಲ್ಲದೇ ಅತಿ ವೇಗದಲ್ಲಿ ಚಲಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೈಕಿನ ಗೇರ್ ಬದಲಿಸದೇ ಗರಿಷ್ಠ ವೇಗದಲ್ಲಿ ಇಳಿ ಜಾರು ಪ್ರದೇಶದಲ್ಲಿ ಮಾತ್ರ ಸಾಗ ಬಹುದು. ಅದು ಈ ಘಟನೆಯಲ್ಲೂ ನಡೆದಿದೆ.

ಈ ಹಿಂದೆ ಇಳಿ ಜಾರು ಪ್ರದೇಶದಲ್ಲಿ ನಿಲ್ಲಿಸಿದ್ದ ಬಸ್ಸು ಹಾಗೂ ಕಾರುಗಳು ಸಹ ಮುಂದಕ್ಕೆ ಚಲಿಸಿ ಅನಾಹುತವಾದ ಘಟನೆಗಳು ವರದಿಯಾಗಿದ್ದವು.

ಗಮನಿಸಿ: ಈ ಲೇಖನದಲ್ಲಿ ಮೊದಲ ಆರು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Royal enfield bike moves without rider on pune nashik highway video details
Story first published: Friday, August 13, 2021, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X