Bullet food cart: ವಿಡಿಯೋ.. 21ರ ಎಂಜಿನಿಯರಿಂಗ್ ಪದವೀಧರೆಯಿಂದ 'ಬುಲೆಟ್' ಬಂಡಿಯಲ್ಲಿ ಪಾನಿಪುರಿ ಮಾರಾಟ
ವಿಶ್ವದಲ್ಲೇ ಭಾರತ ದೊಡ್ಡ ಆರ್ಥಿಕತೆಯತ್ತ ಮುನ್ನುಗುತ್ತಿದೆ. ಅನೇಕ ಮಹಿಳೆಯರು ತಮ್ಮದೇ ಉದ್ಯಮವನ್ನು ಆರಂಭಿಸುತ್ತಿದ್ದು, ಎಷ್ಟೋ ಮಂದಿಗೆ ಕೆಲಸ ನೀಡುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಆಕೆ ಇಷ್ಟೊಂದು ಖ್ಯಾತಿಗಳಿಸಲು ಕಾರಣವೇನೆಂಬುದನ್ನು ತಿಳಿಯೋಣ.
ತಮ್ಮಿಂದ ಈ ಕೆಲಸವಾಗದೂ ಎಂದು ಸುಮ್ಮನಿರುವವರಿಗೆ ಈ ಯುವತಿ ಪ್ರೇರಣೆಯಾಗಿದ್ದಾಳೆ. ಯಾವುದೇ ಇನ್ಸ್ಟಾಗ್ರಾಮ್ ಅಕೌಂಟ್ ಓಪನ್ ಮಾಡಿದ್ದರೂ 21 ವರ್ಷದ ಎಂಜಿನಿಯರಿಂಗ್ ಪದವೀಧರೆಯ ರೀಲ್ಸ್ ಗಳೇ ಹರಿದಾಡುತ್ತಿದ್ದು, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಫುಡ್ ಕಾರ್ಟ್ ಮಾಡಿ, ಪಾನಿಪುರಿ ಮಾರಾಟ ಮಾಡುತ್ತಿದ್ದಾಳೆ. ಇಷ್ಟಕ್ಕೂ ಆಕೆ ಎಲ್ಲಿ ವ್ಯಾಪಾರ ನಡೆಸುತ್ತಿದ್ದಾಳೆ ಗೊತ್ತಾ.. ಅದುವೇ ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಬುಲೆಟ್ ಬೈಕಿಗೆ ಫುಡ್ ಕಾರ್ಟ್ ಕಟ್ಟಿಕೊಂಡು ಬರುವ ಯುವತಿ ತಾಪ್ಸಿ ಉಪಾಧ್ಯಾಯ, ಸೀದಾ ರಸ್ತೆ ಬದಿಯಲ್ಲಿ ತನ್ನ ಬಂಡಿಯಲ್ಲಿ ನಿಲ್ಲಿಸಿ, ಕೊಂಚ ಸಮಯ ಅಗತ್ಯ ತಯಾರಿ ಮಾಡಿಕೊಂಡು ರುಚಿಯಾದ ಪಾನಿಪುರಿ ಮಾರಟ ಮಾಡುವುದನ್ನು ಪ್ರಾರಂಭಿಸುತ್ತಾಳೆ. ಮತ್ತೊಂದು ವಿಶೇಷವೆಂದರೆ, ಪಾನಿಪುರಿಗೆ ಬಳಕೆ ಮಾಡುವ ಮಸಾಲೆಗಳನ್ನು ತುಂಬಾ ಶುಚಿತ್ವದಿಂದ ತಯಾರಿಸಲಾಗಿದೆ ಎಂದು ತಾಪ್ಸಿ ಅವರೇ ವಿವರಿಸುತ್ತಾರೆ.
'ಯಾವುದೇ ಕೆಲಸವನ್ನು ಮಾಡಬೇಕಾದರೇ, ಶ್ರದ್ದೆ ಹಾಗೂ ಅಚಲ ವಿಶ್ವಾಸ ಮುಖ್ಯ. ವಯಸ್ಸು ಕೇವಲ ಸಂಖ್ಯೆಯಷ್ಟೇ. ನೀನು ಎಂಜಿನಿಯರಿಂಗ್ ಪದವೀಧರೆ ಜೊತೆಗೆ ಮಹಿಳೆ ಮನೆಯಲ್ಲಿಯೇ ಇರು.. ನಿನಗೆ ಪಾನಿಪುರಿ ಮಾರುವ ಅಗತ್ಯವೇನು ಎಂದು ಹಲವಾರು ಹೇಳಿದ್ದರು. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೇ ಈ ವ್ಯಾಪಾರವನ್ನು ಮಾಡುತ್ತಿದ್ದೇನೆ' ಎಂದು ತಾಪ್ಸಿ ಖುಷಿಯಿಂದಲೇ ಹೇಳುತ್ತಾರೆ. ಈಕೆಯ ಕೆಲಸವನ್ನು ಹಲವು ಮಂದಿ ಮೆಚ್ಚಿಕೊಂಡು ಶಬ್ಬಾಸ್ ಗಿರಿ ನೀಡಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಫುಡ್ ಕಾರ್ಟ್ ಆಗಿ ಬದಲಾಯಿತ್ತಿರುವುದು ಇದೇ ಮೊದಲೇನೂ ಅಲ್ಲ. ಈ ರೀತಿಯಾಗಿ ಚೇಂಜ್ ಮಾಡಿರುವ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಬಾರಿ ವೈರಲ್ ಆಗುತ್ತಲೇ ಇರುತ್ತವೆ. 2016ರಲ್ಲಿ ನಮ್ಮದೇ ಬೆಂಗಳೂರಿನಲ್ಲಿ ನಾಲ್ಕು ಜನ ಸ್ನೇಹಿತರೂ ಸೇರಿಕೊಂಡು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್‍ನ್ನು ಪರಿವರ್ತಿಸಿ, ಬಾರ್ಬೆಕ್ಯೂ ರೈಡ್ ಇಂಡಿಯಾ' ಹೆಸರಿನಲ್ಲಿ ವ್ಯಾಪಾರವನ್ನು ಆರಂಭಿಸಿದ್ದರು.
ಸಿಂಧಿ ಕಾಲೇಜ್ ಆಫ್ ಕಾಮರ್ಸ್‌ನ ವಿದ್ಯಾರ್ಥಿಗಳಾಗಿದ್ದ ಅರುಣ್ ವರ್ಮಾ, ಕೃಷ್ಣ ಕುಮಾರ್ ವರ್ಮಾ, ಮನೋಜ್ಞ ಚೌಧರಿ ಮತ್ತು ಸೈಯದ್ ಮುಜೀಬ್ ಎಂಬುವವರೂ ಈ ಸ್ಟಾರ್ಟಪ್ ಪ್ರಾರಂಭಿಸಿ, ತಮ್ಮ ಕಿಚನ್ ಡಿಸೈನ್ ಗಾಗಿ ಪೇಟೆಂಟ್ ಸಹ ಪಡೆದುಕೊಂಡಿದ್ದರು. ಜೊತೆಗೆ ವ್ಯಾಪಾರದ ವಿಸ್ತರಣೆಗಾಗಿ ಕ್ರೌಡ್ ಸೋರ್ಸಿಂಗ್ ಮೂಲಕ ರೂ.10 ಲಕ್ಷ ಬಂಡವಾಳ ಸಂಗ್ರಹ ಮಾಡಿದ್ದರು. ಇನ್ನು, ಯುವ ಜನತೆ ಉದ್ಯಮ ಆರಂಭಿಸುತ್ತಿರುವ ವೇಗವನ್ನು ನೋಡಿದರೆ, ಭಾರತವು ಕೆಲವೇ ದಿನಗಳಲ್ಲಿ ಶ್ರೀಮಂತ ದೇಶವಾಗಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿ ಬುಲೆಟ್ 350 ಬೈಕ್ ಅನ್ನು ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ರೂ. 2,02,625 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 346 ಸಿಸಿ ಎಂಜಿನ್ ಹೊಂದಿದ್ದು, 19.1 bhp ಗರಿಷ್ಠ ಪವರ್ ಹಾಗೂ 28 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 13.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 38 kmpl ಮೈಲೇಜ್ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications