ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಹೊಸ ಬೈಕ್ ಖರೀದಿಸುವಾಗ ಬಹುತೇಕ ವಾಹನ ಪ್ರೇಮಿಗಳು ಅದೆಷ್ಟೋ ಕಷ್ಟಪಟ್ಟು ಹಣ ಹೊಂದಾಣಿಕೆ ಮಾಡಿ ಬೈಕ್ ಖರೀದಿ ಮಾಡಿರುತ್ತಾರೆ. ಆದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ ಬೈಕ್ ಬಗ್ಗೆ ತುಸು ಎಚ್ಚರ ತಪ್ಪಿದ್ರು ಖದೀಮರ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಬೈಕ್ ಕಳ್ಳತನ ತಡೆಯಲು ಎಲ್ಲಾ ರೀತಿಯಲ್ಲೂ ಮುನ್ನೆಚ್ಚರಿಕೆ ವಹಿಸಿದ್ರು ಖದೀಮರು ಮಾತ್ರ ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ. ಅದರಲ್ಲೂ ಬೈಕ್ ಕಳ್ಳರಿಗೆ ಆರ್‌ಇ ಬೈಕ್‌ಗಳನ್ನು ಎಗರಿಸುವುದು ಅಂದ್ರೆ ನೀರು ಕುಡಿದಷ್ಟೇ ಸಲೀಸು.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಹೌದು, ಬಹುತೇಕ ಬೈಕ್ ಕಳ್ಳತನ ಪ್ರಕರಣಗಳನ್ನು ಗಮನಿಸಿದಾಗ ಖರೀದಿಮರಿಗೆ ಸುಲಭವಾಗಿ ಕಳ್ಳತನ ಮಾಡಲು ಲಭ್ಯವಿರುವ ಬೈಕ್‌ಗಳು ಅಂದ್ರೆ ಅದು ರಾಯಲ್ ಎನ್‌ಫೀಲ್ಡ್. ಅತಿ ಸುಲಭವಾಗಿ ಕಳ್ಳತನವಾಗುವ ಆರ್‌ಇ ಬೈಕ್‌ಗಳು ಕಳ್ಳರ ಪಾಲಿನ ಹಾಟ್ ಫೆವರಿಟ್.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಜನದಟ್ಟಣೆಯ ನಡುವೆಯೂ ಬೈಕ್ ಕಳ್ಳತನ ಮಾಡುವ ಪ್ರಕರಣಗಳು ಇತ್ತೀಚೆಗೆ ಮೆಟ್ರೋ ಸಿಟಿಗಳಲ್ಲಿ ದಿನದಿಂದ ಹೆಚ್ಚುತ್ತಲೇ ಇದ್ದು, ಮೊನ್ನೆಯಷ್ಟೇ ದೆಹಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಒಂದನ್ನು ಖದೀಮನೊಬ್ಬ ಕೇವಲ 2 ನಿಮಿಷದಲ್ಲಿ ಯಾವುದೇ ಸದ್ದುಗದ್ದಲವಿಲ್ಲದೇ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕಳ್ಳತನ ಮಾಡಲು ಬಂದಿದ್ದ ಕಳ್ಳನೊಬ್ಬ ಕೇವಲ 30 ಸೇಕೆಂಡುಗಳಲ್ಲಿ ಹ್ಯಾಂಡಲ್ ಲಾಕ್ ಮುರಿದಿದ್ದಲ್ಲದೆ, ಒಂದೂವರೆ ನಿಮಿಷದಲ್ಲಿ ಬೈಕ್ ಇಗ್ನಿಷನ್ ಆನ್ ಮಾಡುವ ಮೂಲಕ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ದೆಹಲಿಯ ಮನು ರಾಜ್‌ಕುಮಾರ್ ಎಂಬಾತನಿಗೆ ಸೇರಿದ ಕ್ಲಾಸಿಕ್ 350 ಬೈಕ್ ಕಳ್ಳತನ ಮಾಡಲಾಗಿದ್ದು, ಹ್ಯಾಂಡಲ್ ಲಾಕ್ ಮಾಡಿ ಇಟ್ಟಿದ್ದರೂ ಸಹ ಖದೀಮ ತನ್ನ ಕೈಚಳಕ ತೊರಿದ್ದಾನೆ. ಬೈಕಿನಲ್ಲಿ ಸುರಕ್ಷಾ ತಂತ್ರಜ್ಞಾನ ಇದ್ದರೂ ಸಹ ಖರೀದಿಮರು ಮಾತ್ರ ವಾಹನ ಉತ್ಪಾದಕನ್ನೇ ಮಿರಿಸುವಂತೆ ತಮ್ಮ ಕಳ್ ಬುದ್ದಿ ಪ್ರಯೋಗಿಸಿ ಯಶಸ್ವಿಯಾಗುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಆರ್‌ಇ ಬೈಕ್‌ನಲ್ಲಿ ಇಲ್ಲ ಸುರಕ್ಷೆ?

ಸಾಮಾನ್ಯವಾಗಿ ದುಬಾರಿ ಬೆಲೆಯ ಬೈಕ್‌ಗಳಲ್ಲಿ ಆ್ಯಂಟಿ-ಥೆಪ್ಟ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಮಾತ್ರ ಕೆಲವು ಬೇಸಿಕ್ ಸೌಲಭ್ಯಗಳನ್ನು ಹೊರತುಪಡಿಸಿ ಗುಣಮಟ್ಟದ ಆ್ಯಂಟಿ-ಥೆಪ್ಟ್ ಸೌಲಭ್ಯವಿಲ್ಲದಿರುವುದು ಕಳ್ಳತನಕ್ಕೆ ಮತ್ತಷ್ಟು ಸಹಕಾರಿಯಾಗಿದೆ ಎನ್ನಬಹುದು.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಆರ್‌ಇ ಬೈಕ್ ಸವಾರರೇ ಹುಷಾರ್

ಕೇವಲ ರಾಯಲ್ ಎನ್‌ಫೀಲ್ಡ್ ಅಷ್ಟೇ ಅಲ್ಲದೇ ಎಲ್ಲಾ ಮಾದರಿಯ ಬೈಕ್‌ಗಳು ಇಂದು ಕಳ್ಳತನವಾಗುತ್ತಿವೆ. ಆದ್ರೆ ಕಳ್ಳತನಕ್ಕೆ ಸುಲಭವಾಗಿರುವ ಆರ್‌ಇ ಬೈಕ್‌ಗಳ ಮೇಲೆ ಖರೀದಿಮರು ಹೆಚ್ಚು ಗಮನಹರಿಸುತ್ತಿದ್ದು, ಕಳ್ಳತನವಾಗುವ ಮುನ್ನ ನಿಮ್ಮ ನೆಚ್ಚಿನ ಬೈಕ್‌ ಅನ್ನು ಸಾಧ್ಯವಿಷ್ಟು ಸುರಕ್ಷತೆಯಿಂದ ಇಟ್ಟುಕೊಳ್ಳುವುದು ಒಳಿತು.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಎಲ್ಲೆಂದರಲ್ಲೇ ಬೈಕ್ ಪಾರ್ಕ್ ಮಾಡಬೇಡಿ..!

ಇದು ರಾಯಲ್ ಎನ್‌ಫೀಲ್ಡ್ ಬೈಕ್ ಸವಾರರಿಗೆ ಮಾತ್ರವಲ್ಲ ಎಲ್ಲಾ ಬೈಕ್ ಮಾಲೀಕರಿಗೂ ಅನ್ವಯಿಸುತ್ತೆ. ಯಾಕೆಂದ್ರೆ ನಗರಗಳ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆಯಿಂದಾಗಿ ಎಲ್ಲೆಂದರಲ್ಲೇ ಬೈಕ್ ಪಾರ್ಕ್ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಖದೀಮರಿಗೆ ಮತ್ತಷ್ಟು ಸುಲಭವಾಗುತ್ತಿದೆ.

ದೆಹಲಿಯಲ್ಲಿ ನಡೆದ ಘಟನೆಯು ಸಹ ಇದೀಗ ಆರ್‌ಇ ಬೈಕ್ ಸವಾರರ ಆತಂಕಕ್ಕೆ ಕಾರಣವಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ಗಮನಿಸಿದ್ದಲ್ಲಿ ಖದೀಮರು ಕೈಚಳಕ ಬೈಕ್ ಉತ್ಪಾದಕರನ್ನು ಬೆಚ್ಚಿಬಿಳಿಸುತ್ತೆ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಹಾಗಾದ್ರೆ ಬೈಕ್ ಕಳ್ಳತನ ತಡೆಯುವುದು ಹೇಗೆ?

ಲಕ್ಷಾಂತರ ಖರ್ಚು ಮಾಡಿ ಖರೀದಿಸಿದ ನಿಮ್ಮ ನೆಚ್ಚಿನ ಬೈಕ್ ಕಳ್ಳರ ಪಾಲಾಗುತ್ತೆ ಅಂದ್ರೆ ಯಾರಿಗೆ ತಾನೆ ಸಹಿಸಿಕೊಳ್ಳಲು ಸಾಧ್ಯ. ಹೀಗಾಗಿ ನಿಮ್ಮ ಬೈಕ್ ಕಳ್ಳರ ಪಾಲಾಗುವುದಕ್ಕೂ ಮುನ್ನ ಈ ಟಿಪ್ಸ್‌ಗಳನ್ನು ಅನುಸರಿಸಿ ನೋಡಿ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಕೀ ಇಂದ ಬೈಕ್ ಲಾಕ್ ಮಾಡಿ, ಹ್ಯಾಂಡಲ್ ಲಾಕ್ ಮಾಡಿರುವ ಬೈಕ್‍‍ಗಳನ್ನು ಕದಿಯುವುದು ಖದೀಮರಿಗೆ ಬೆಣ್ಣೆ ತಿಂದಷ್ಟೇ ಸುಲಭ ಎನ್ನಬಹುದು. ಬಹಳಷ್ಟು ಬೈಕ್ ಕಳ್ಳರು ಕೀ ಇಲ್ಲದೆ ಬೈಕ್ ಅನ್ನು ಸ್ಟಾರ್ಟ್ ಮಾಡಲು ಕೇಬಲ್‍‍ಗಳನ್ನು ಡೈರೆಕ್ಟ್ ಮಾಡುತ್ತಾರೆ. ಮತ್ತು ಹ್ಯಾಂಡಲ್ ಲಾಕ್ ಬಲವಾಗಿ ಎಳೆದು ಲಾಕ್ ಆನ್ ಬೈಕ್ ಸ್ಮಾರ್ಟ್ ಮಾಡುವುದು ಬಹುಸುಲಭ ಕೆಲಸ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಹ್ಯಾಂಡಲ್ ಲಾಕ್ ಮಾಡಿದ್ರೆ ಕಳ್ಳರು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಈ ಎರಡರಿಂದ ಮಾತ್ರವೇ ಬೈಕ್ ಸುರಕ್ಷಿತವಾಗಿ ಇರುತ್ತದೆ ಎಂದ್ರೆ ಯಾವುದೇ ಗ್ಯಾರೆಂಟಿ ಇಲ್ಲ. ಆದ್ದರಿಂದ ಬೈಕ್ ಅನ್ನು ಸುರಕ್ಷಿತವಾಗಿ ಕಳ್ಳರಿಂದ ಕಾಪಾಡಿಕೊಳ್ಳಲು ಕೆಲವು ಲಾಕ್‍‍ಗಳಿವೆ ಅವುಗಳನ್ನು ಬಳಸಿ ನೋಡಿ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಡಿಸ್ಕ್ ಲಾಕ್ :

ಡಿಸ್ಕ್ ಲಾಕ್ ಒಂದು ಚಿಕ್ಕ ಯಾಂತ್ರಿಕತೆ. ಇದನ್ನು ಡಿಸ್ಕ್ ಬ್ರೇಕ್ ಹೋಲ್ಸ್ ಮುಖಾಂತರ ಲಾಕ್ ಮಾಡಬಹುದಾಗಿದೆ. ಹೀಗೆ ಮಾಡಿದ್ದಲ್ಲಿ ಚಕ್ರವು ಮುಂದಕ್ಕೆ ಸರಿಸಲು ಆಗುವುದ್ಲಿಲ್ಲ. ಇದನ್ನು ದ್ವಂಸ ಮಾಡಲು ಅಲೋಚಿಸಿದರು ಅದಕ್ಕೆ ತುಂಬಾ ಸಮಯ ಬೇಕಾಗುತ್ತದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಟೈರ್ ಲಾಕ್ :

ಡಿಸ್ಕ್ ಬ್ರೇಕ್ ಇಲ್ಲದ ಬೈಕ್‍‍ಗಳನ್ನು ಟೈರ್ ಲಾಕ್ ಅನ್ನು ಬಳಸಬಹುದಾಗಿದೆ. ಇದು ಕೂಡಾ ಬೀಗದ ಹಾಗೆಯೆ ಇರುತ್ತದೆ. ಮುಂಭಾಗದ ಚಕ್ರಗಳ ಫ್ರಂಟ್ ಫೋರ್ಕ್‍‍ನ ಮೇಲೆ ಅಟಾಚ್ ಮಾಡಲಾಗುತ್ತದೆ. ಬೈಕ್ ಪಾರ್ಕ್ ಮಾಡಿದ್ದಲಿ ಟೈರ್ ಲಾಕ್ ಮಾಡಬಹುದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಬ್ರೇಕ್ ಲಾಕ್ :

ಒಂದು ವಿಧವಾಗಿ ಹೇಳಬೇಕೆಂದರೆ ಕಾರಿನಲ್ಲಿನ ಹ್ಯಾಂಡ್ ಬ್ರೇಕ್ ತರಹವೇ ಇದು ಕೂಡ ಕಾರ್ಯ ನಿರ್ವಹಿಸುತ್ತದೆ. ಅಂದರೇ ಬೈಕ್ ಪಾರ್ಕ್ ಮಾಡಿದಾಗ ಬ್ರೇಕ್ ಲಾಕ್ ಮಾದಿದರೆ, ಬ್ರೇಕ್‍‍ಗಳು ಚಕ್ರಗಳನ್ನು ಗಟ್ಟಿಯಾಗಿ ಬಿಗಿದುಕೊಂಡಿರುತ್ತದೆ. ಆದ್ದರಿಂದ ಹ್ಯಾಂಡಲ್ ಬಾರ್ ಅನ್ನು ತೊಲಗಿಸಿದರು.. ಬೈಕ್ ಸ್ಟಾರ್ಟ್ ಮಾಡಿದರೂ ಈ ಲಾಕ್‍‍ಗಳಿಂದ ಭದ್ರವಾಗಿರಿಕೊಂಡರೆ ಖದೀಮರಿಂದ ನಿಮ್ಮ ಬೈಕ್ ಅನ್ನು ಕಾಪಾಡಿಕೊಳ್ಳಬಹುದು.

ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುವ ಕಳ್ಳರಿಗೆ 2 ನಿಮಿಷ ಸಾಕು ನೋಡಿ..!

ಜಿಪ್ಎಸ್ ಡಿವೈಸ್ :

ನಿಮ್ಮ ಬೈಕ್ ರಹಸ್ಯ ಪ್ರದೇಶದಲ್ಲಿ ಜಿಪಿಎಸ್ ಡಿವೈಸ್ ಅನ್ನು ಅಳವಡಿಸುವುದರಿಂದ ಬೈಕ್ ಕಳ್ಳತನವಾದರೂ, ಅದು ಯಾವ ಲೊಕೇಶನ್‍‍ನಲ್ಲಿರುತ್ತದೆ ಎಂದು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಜಿಪಿಎಸ್ ಡಿವೈಸ್‍‍ಗಳನ್ನು ಮಾರುತ್ತಿರುತ್ತಾರೆ. ಬೈಕ್ ಸರಿಯಾಗಿ ಕಳ್ಳತನಕ್ಕೆ ಗುರಿಯಾಗುವಾಗ ಅವುಗಳು ಸರಿಯಾಗಿ ಕೆಲಸ ಮಾಡದಿದ್ದರೆ ಕಷ್ಟ. ಆದ್ದರಿಂದ ಒಳ್ಳೆಯ ಗುಣಮಟ್ಟದ ಜಿಪಿಎಸ್ ಡಿವೈಸ್ ಅನ್ನು ಖರೀದಿಸಿರಿ.

Source: Rushlane

More from DriveSpark

ಕಳೆದ ತಿಂಗಳ ಹಿಂದೆಷ್ಟೇ ಬಿಡುಗಡೆಯಾಗಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್ ಫೋಟೋ ಗ್ಯಾಲರಿ..!

Article Published On: Saturday, October 6, 2018, 14:54 [IST]
English summary
Royal Enfield Classic 350 stolen in 2 minutes.
Read more on crime off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+