ಬರುತ್ತಿದೆ ರಾಯಲ್ ಎನ್‌ಫೀಲ್ಡ್ 750 ಸಿಸಿಯ ಸೈತಾನ್: ಎದುರಾಳಿಗಳ ಎದೆಯಲ್ಲಿ ನಡುಕ
ಕಳೆದ ಕೆಲವೊಂದಿಷ್ಟು ವರ್ಷದಿಂದ ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಹೊಸ ಹೊಸ ಬೈಕ್‌ಗಳನ್ನು ಲಾಂಚ್ ಮಾಡುವುದು, ಕ್ಲಾಸಿಕ್ ೩೫೦ ಬೈಕ್‌ನಲ್ಲಿದ್ದ ಕುಂದು ಕೊರತೆಗಳನ್ನು ನೀಗಿಸುವುದು ಹೀಗೆ ಆಗಾಗ ಹಲವಾರು ಕೆಲಸಗಳನ್ನು ಮಾಡುತ್ತಾ ತನ್ನ ಗುಣಮಟ್ಟವನ್ನು ಹೆಚ್ಚಿಸುತ್ತಿದೆ.
ಈ ವರ್ಷದ ಆರಂಭದಲ್ಲಿ ರಾಯಲ್ ಎನ್‌ಫೀಲ್ಡ್ ಮೀಟಿಯರ್ 650 ಸಿಸಿ ಯ ಬೈಕ್ ಅನ್ನು ಲಾಂಚ್ ಮಾಡಿತ್ತು. ಅಲ್ಲಿಗೆ ತನ್ನ 650 ಟ್ವಿನ್ ಬಳಗಕ್ಕೆ ಮೂರನೇ ಬೈಕನ್ನು ಸೇರೊಸೊತ್ತು. ಇದೀಗ ರಾಯಲ್ ಎನ್‌ಫೀಲ್ಡ್ (Royal Enfield) ಹೊಸ ಬೈಕ್ ಅನ್ನು ತನ್ನ ಪ್ಲ್ಯಾಂಟ್‌ನಲ್ಲಿ ಡೆವಲಪ್ ಮಾಡುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ಮಾಹಿತಿಗಳ ಪ್ರಕಾರ ರಾಯಲ್ ಎನ್‌ಫೀಲ್ಡ್ ಮೋಟೋರ್‌ಸೈಕಲ್ ಕಂಪನಿಯು 750 ಸಿಸಿ ಯ ಬೈಕನ್ನು ಅಭಿವೃದ್ದಿಪಡಿಸುತ್ತಿದೆ ಎಂಬ ಮಾತುಗಳ ಅಲ್ಲಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಈ ಬೈಕ್ ಅನ್ನು ಅಭಿವೃದ್ದಿಪಡಿಸುವ ಕೆಲಸಗಳು ಆರಂಭವಾಗಿದ್ದು ಕೆಲವು ವರ್ಷಗಳಲ್ಲಿ ಇದು ಗ್ರಾಹಕರ ಕೈ ಸೇರಲಿದೆ ಎಂಬ ಮಾಹಿತಿಗಳು ಹರಿದಾಡುತ್ತಿದೆ.
ಇನ್ನು ಈ ಹೊಸ ಬೈಕ್‌ನ ಅಭಿವೃದ್ದಿ ಕೆಲಸ ಯುಕೆ ಯ ಲೀಸೆಸ್ಟರ್‌ನಲ್ಲರುವ ಟೆಕ್ ಸೆಂಟರ್‌ನಲ್ಲಿ ನಡೆಯುತ್ತಿದ್ದು ಜಾಗತಿಕವಾಗಿ ರಾಯಲ್ ಎನ್ಪೀಲ್ಡ್ ಮಾರಾಟವಾಗುವ ಎಲ್ಲಾ ದೇಶಗಳಿಂದಲೂ ಈ ಕುರಿತಾಗಿ ಫೀಡ್‌ಬ್ಯಾಕ್ ಪಡೆಯುತ್ತಿದ್ದಾರೆ. ಇನ್ನು ಈ ಬೈಕ್ ಲಾಂಚ್ ಆದರೆ ರಾಯಲ್ ಎನ್‌ಫೀಲ್ಡ್ ಪೋರ್ಟ್‌ಫೋಲಿಯೋ ದಲ್ಲಿ ಇರುವ ಅತ್ಯಂತ ದೊಡ್ಡ ಬೈಕ್ ಇದಾಗಿರಲಿದೆ.

ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಸರಿಯಾದ ಸಮಯದಲ್ಲೇ ಈ ಹೊಸ ಬೈಕ್‌ನ ಅಭಿವೃದ್ದಿ ಪಡಿಸುತ್ತಿದೆ ಎಂದರೆ ತಪ್ಪಾಗಲಾರದು. ಈ ಮಾತು ಹೇಳಲು ಕಾರಣವೇನೆಂದರೆ ಭಾರತದಲ್ಲಿ ಟ್ರಯಂಫ್ ಮತ್ತು ಹಾರ್ಲೇ ಡೇವಿಡ್‌ಸನ್ ಬೈಕ್‌ಗಳು ಈಗಾಗಲೇ 400 ಸಿಸಿ ಸೆಗ್ಮೆಂಟ್‌ನಲ್ಲಿ ಕಾಲಿಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಇದಕ್ಕೆ ಟಕ್ಕರ್ ನೀಡುವುದಕ್ಕೆ ಈಗಾಗಲೇ ರಾಯಲ್ ಎನ್‌ಫೀಲ್ಡ್ ಬಳಿ 650 ಟ್ವಿನ್ ಮೋಟಾರ್ ಸೈಕಲ್‌ಗಳು ಇದ್ದರೂ ಈ ೭೫೦ ಸಿಸಿ ಬೈಕ್‌ನಿಂದ ರಾಯಲ್ ಎನ್‌ಫೀಲ್ಡ್ ಗೆ ಆನೆ ಬಲ ಬರಲಿದೆ ಎಂಬುವುದು ಹಲವರ ಅಭಿಪ್ರಾಯ. ಆದರೆ ಇದು ಯಾವಾಗ ಬರಲಿದೆ ಎಂಬುದು ಇನ್ನೂ ಹೊರಬಿದ್ದಿಲ್ಲ.
ಈಗಾಗಲೇ ರಾಯಲ್ ಎನ್‌ಫೀಲ್ಡ್ ಹಲವಾರು ಸೆಗ್ಮೆಂಟ್‌ನಲ್ಲಿ ತನ್ನ ಪಾರಪತ್ಯವನ್ನು ಹೊಂದಿದೆ. 350cc, 411cc, 650cc ಮತ್ತೆ ಇದೀಗ 750cc. ಇದೇ ಕಾರಣದಿಂದ ರಾಯಲ್ ಎನ್‌ಪೀಲ್ಡ್ ಬೈಕ್ ಅನ್ನು ಕೊಳ್ಳಬೇಕು ಎಂದು ಯೋಚಿಸುವವರಿಗೆ ಈ ಎಂಜಿನ್ ಆಯ್ಕೆಗಳು ವರದಾನವಾಗಿ ಪರಿಣಮಿಸಲಿದೆ ಎಂಬುದು ಹಲವರ ಅಭಿಪ್ರಾಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications