ನೀರಲ್ಲಿ ಉಗ್ರರ ದಾಳಿಯನ್ನು ಎದುರಿಸಲು ಶರವೇಗದ ಬೋಟ್
ವಿಶ್ವದೆಲ್ಲೆಡೆ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಜಾಗತಿಕ ಭದ್ರತೆಗೆ ಸವಾಲಿನ ವಿಷಯವಾಗಿ ಪರಿಣಮಿಸಿದೆ. 2008ರ ಮುಂಬೈ ದಾಳಿ ಕೂಡಾ ಸಾಗರದ ಮಾರ್ಗದ ಮೂಲಕವೇ ನಡೆದಿತ್ತು ಎಂಬುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಹಾಗಿರುವಾಗ ನೀರಿನಲ್ಲಿ ಉಗ್ರರ ದಾಳಿಯನ್ನು ಎದುರಿಸಲು ವಿಶೇಷ ಬೋಟ್ ವೊಂದು ಸಿದ್ಧಗೊಳ್ಳುತ್ತಿದೆ. ಆದರೆ ಇದು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವುದಿಲ್ಲ. ಬದಲಾಗಿ ಭಯೋತ್ಪಾದಕರ ಮೇಲೆ ಹದ್ದುಗಣ್ಣನ್ನು ಇರಿಸಲಿದೆ.

ಬ್ರಿಟನ್ ನ ವಿಶ್ವ ವಿಖ್ಯಾತ ಥೇಮ್ಸ್ ನದಿಯಲ್ಲಿ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಾಗಬಲ್ಲ ಡ್ರೋನ್ ಬೋಟ್ ನ ಪರೀಕ್ಷಾರ್ಥ ಸಂಚಾರ ಪರೀಕ್ಷೆಯು ಭರದಿಂದ ಸಾಗುತ್ತಿದೆ.

ಭವಿಷ್ಯತ್ತಿನ ಸಣ್ಣ ಬೋಟ್ ಹಡಗು ಕಣ್ಗಾವಲು ವ್ಯವಸ್ಥೆಯಾಗಿ ಬಳಕೆ ಮಾಡಬಹುದಾಗಿದೆ. ಬ್ರಿಟನ್ ನ ಈ ರಾಯಲ್ ಬೋಟ್, ನೀರಿನಿಂದ ಎದುರಾಗುವ ಭಯೋತ್ಪಾದನೆಯನ್ನು ತಡೆಯಲಿದೆ.

360 ಡಿಗ್ರಿ ಕ್ಯಾಮೆರಾ, ಜಿಪಿಎಸ್, ರಾಡಾರ್ ಹಾಗೂ ರೆಡಿಯೋ ವ್ಯವಸ್ಥೆಗಳು ಬೋಟ್ ನಲ್ಲಿ ಆಳವಡಿಸಲಾಗಿದೆ. ಅಲ್ಲದೆ ಈ ಸ್ಪೀಡ್ ಬೋಟ್ ನಿರ್ಮಾಣದಲ್ಲಿ ಬ್ಲೇಡ್ ರನ್ನರ್ ಹಲ್ ವಿನ್ಯಾಸ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ನಿರಸ್ತ್ರನಾದ ಈ ಬೋಟನ್ನು ಸ್ಥಳಾನ್ವೇಷಣೆಗಳಂತಹ ಶಿಪ್ರ ಕಾರ್ಯಾರಣೆಗಳಿಗೆ ಬಳಕೆ ಮಾಡಬಹುದಾಗಿದೆ. ಅಲ್ಲದೆ 2,000 ಕೆ.ಜಿಗಳಷ್ಟು ಭಾರವನ್ನು ಹೊಂದಿದೆ.

ಆಕ್ರಮಣ ಮಾಡಲು ಇದನ್ನು ಬಳಕೆ ಮಾಡಲಾಗುವುದಿಲ್ಲ. ಬದಲಾಗಿ ಕುಟಿಲ ತಂತ್ರದೊಂದಿಗೆ ಶರವೇಗದಲ್ಲಿ ಚಲಿಸುವ ಮೂಲಕ ಶತ್ರು ಪಾಳೇಯದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಿದೆ.

ಪ್ರಮುಖ ಅಂಶವೆಂದರೆ ಇದೊಂದು ರೋಬೋಟ್ ತಂತ್ರಗಾರಿಕೆಯ ಬೋಟ್ ಆಗಿದ್ದು, ಇದರ ನಿರ್ವಹಣೆಗೆ ಮಾನವ ಸಹಾಯದ ಅಗತ್ಯವಿರುವುದಿಲ್ಲ. ಬದಲಾಗಿ ರಿಮೋಟ್ ಮುಖಾಂತರವೇ ನಿರ್ವಹಿಸಬಹುದಾಗಿದೆ.


Click it and Unblock the Notifications








