ಚೀನಾದ ಈ ಕಾರು ನೀರಿನ ಮೇಲೂ ಓಡುತ್ತೆ: ಭಾರತಕ್ಕೆ ತನ್ನಿ ಎಂದು ಆನಂದ್ ಮಹೀಂದ್ರಾರ ದುಂಬಾಲು ಬಿದ್ದ ಉದ್ಯಮಿ!

ದೇಶದ ಪ್ರಖ್ಯಾತ ಉದ್ಯಮಿ, ಮಹೀಂದ್ರಾ & ಮಹೀಂದ್ರಾ (Mahindra & Mahindra) ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ ಯಾರಿಗೆ ಗೊತ್ತಿಲ್ಲ ಹೇಳಿ.. ಅವರು ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಫುಲ್ ಆಕ್ಟಿವ್ ಇರುತ್ತಾರೆ. ಇತ್ತೀಚೆಗೆ, ಜನಪ್ರಿಯ ಉದ್ಯಮ ಸಂಸ್ಥೆ ರಾಮ ಪ್ರಸಾದ್ ಗೋಯೆಂಕಾ (RPG) ಗ್ರೂಪ್ ಅಧ್ಯಕ್ಷರಾದ ಹರ್ಷ್ ಗೋಯೆಂಕಾ (Harsh Goenka), ವಿಶೇಷವಾದ ಬೇಡಿಕೆಯೊಂದನ್ನು ಆನಂದ್ ಮಹೀಂದ್ರಾರ ಮುಂದೆ ಇಟ್ಟಿದ್ದಾರೆ. ಸದ್ಯ, ಆ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.

ಈ ಕುರಿತಂತೆ 'ಎಕ್ಸ್' ಖಾತೆಯಲ್ಲಿ ಉದ್ಯಮಿ ಹರ್ಷ್ ಗೋಯೆಂಕಾ, ಚೀನಾ ಒಡೆತನದ 'ಬಿವೈಡಿ ಯಾಂಗ್ವಾಂಗ್ ಯು8' ಎಸ್‌ಯುವಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ್ನು ಆನಂದ್ ಮಹೀಂದ್ರಾ ಅವರಿಗೂ ಟ್ಯಾಗ್ ಮಾಡಿದ್ದಾರೆ. 'ಈ ಕಾರು ನದಿಗಳು ಸೇರಿದಂತೆ ಎಲ್ಲ ಪ್ರದೇಶಗಳಿಗೂ ಸರಿಹೊಂದಿತ್ತದೆ. ನನ್ನ ಸ್ನೇಹಿತ ಆನಂದ್ ಮಹೀಂದ್ರಾ, ಇದನ್ನು ನಮ್ಮ ದೇಶದಲ್ಲೂ ಪರಿಚಯಿಸುವರು ಎಂಬ ವಿಶ್ವಾಸವಿವೆ' ಎಂದಿದ್ದಾರೆ.

RPG Group President Harsh Goenka Requests Anand Mahindra Introduce BYD YangWang U8 Car In India

ಆದರೆ, ಹರ್ಷ್ ಗೋಯೆಂಕಾರ ಪೋಸ್ಟ್‌ಗೆ ಆನಂದ್ ಮಹೀಂದ್ರಾ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹರ್ಷ್ ಗೋಯೆಂಕಾ ಆಸೆಯನ್ನು ಆನಂದ್ ಮಹೀಂದ್ರಾ ಅವರು ಈಡೇರಿಸಲು ಸಾಧ್ಯವಿಲ್ಲ. ಏಕೆಂದರೆ ಈ ಕಾರನ್ನು ಬಿವೈಡಿ ಕಂಪನಿ ಮಾರಾಟ ಮಾಡುತ್ತಿದ್ದು, ಅದೇ ತಂತ್ರಜ್ಞಾನವನ್ನು ಮತ್ತೊಂದು ಕಂಪನಿ ಬಳಕೆ ಮಾಡಲು ಆಗುವುದಿಲ್ಲ.

ನೂತನ ಬಿವೈಡಿ ಯಾಂಗ್ವಾಂಗ್ ಯು8 (BYD YangWang U8) ಕಾರಿನ ವಿಶೇಷತೆ ಬಗ್ಗೆ ಹೇಳುವುದಾದರೆ, ಇದು ಚೀನಾ ಹಾಗೂ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆ ಖರೀದಿಗೆ ದೊರೆಯುತ್ತದೆ. ಇದೊಂದು ಶಕ್ತಿಯುತವಾಗಿರುವ ಎಸ್‌ಯುವಿಯಾಗಿದ್ದು, ರಸ್ತೆ ಹಾಗೂ ನೀರಿನ ಮೇಲೆ ಸುಲಭವಾಗಿ ಚಲಿಸಬಲ್ಲದು. ಈ ಕಾರಿನ ಹೊರಭಾಗದಲ್ಲಿ ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ.

RPG Group President Harsh Goenka Requests Anand Mahindra Introduce BYD YangWang U8 Car In India

ಹೊಸ ಬಿವೈಡಿ ಯಾಂಗ್ವಾಂಗ್ ಯು8 ಎಸ್‌ಯುವಿಯಲ್ಲಿ ವಿಶಿಷ್ಟವಾದ 'ಯಾಚಿಂಗ್' ಎಂಬ ಡ್ರೈವಿಂಗ್ ಮೋಡ್‌ನ್ನು ಹೊಂದಿದೆ. ಇದು ನೀರಿನಲ್ಲಿ ಕಾರನ್ನು ಓಡಿಸಲು ಅನುವು ಮಾಡಿಕೊಡುತ್ತದೆ. ಅಪಾಯ ಎದುರಾದ ಸಂದರ್ಭದಲ್ಲಿ 3 ಕೆಎಂಪಿಹೆಚ್ ವೇಗದಲ್ಲಿ ಸರಿ ಸುಮಾರು 30 ನಿಮಿಷಗಳ ಕಾಲ ಈ ಕಾರನ್ನು ಚಲಾಯಿಸಬಹುದು. ಆಗ ಒಂದು ಹನಿ ನೀರು ಕೂಡ ಎಸ್‌ಯುವಿ ಒಳಭಾಗವನ್ನು ಪ್ರವೇಶಿಸುವುದಿಲ್ಲ.

ಈ ಕಾರು ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 49.05 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನೊಂದಿಗೆ 2.0-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 1,184 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸುತ್ತದೆ. ಕೇವಲ 3.6 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ನೂತನ ಬಿವೈಡಿ ಯಾಂಗ್ವಾಂಗ್ ಯು8 ಎಸ್‌ಯುವಿ ಸಂಪೂರ್ಣ ಚಾರ್ಜ್‌ನಲ್ಲಿ 180 ಕಿಲೋಮೀಟರ್ ಕ್ರಮಿಸುತ್ತದೆ. 75 ಲೀಟರ್ ಸಾಮರ್ಥ್ಯದ ಪ್ಯೂಯೆಲ್ (ಇಂಧನ) ಟ್ಯಾಂಕ್ ಹೊಂದಿದ್ದು, ಒಟ್ಟಿಗೆ 1,000 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಬ್ಯಾಟರಿ ಪ್ಯಾಕ್ 18 ನಿಮಿಷಗಳಲ್ಲಿಯೇ 30 ರಿಂದ 80% ಚಾರ್ಜ್ ಆಗುತ್ತದೆ. ರೂ.1.23 ಕೋಟಿ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ.

ಬಿವೈಡಿ ಕಂಪನಿ, ಭಾರತದ ಮಾರುಕಟ್ಟೆಯಲ್ಲಿಯೂ ಸೀಲ್ ಮತ್ತು ಅಟ್ಟೊ 3 ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಳೆದ ತಿಂಗಳು ಕಂಪನಿಯು ಇಮ್ಯಾಕ್ 7 (eMAX 7) ಹೆಸರಿನ ಎಲೆಕ್ಟ್ರಿಕ್ ಎಂಪಿವಿಯನ್ನು ಬಿಡುಗಡೆಗೊಳಿಸಿತ್ತು. ಇದು ರೂ.26.90 ಲಕ್ಷದಿಂದ ರೂ.29.90 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ನೂತನ ಬಿವೈಡಿ ಇಮ್ಯಾಕ್ 7 ಎಂಪಿವಿ, 55.4 ಮತ್ತು 71.8 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 420 ರಿಂದ 530 ಕಿಲೋಮೀಟರ್ ಕ್ರಮಿಸುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 15, 2024, 15:54 [IST]
English summary
Rpg group president harsh goenka requests anand mahindra introduce byd yangwang u8 car in india
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+