ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ಕರೋನಾ ವೈರಸ್‌ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಎರಡನೇ ಅಲೆಯಲ್ಲಿ ಪ್ರತಿದಿನ ಸಹಸ್ರಾರು ಜನರು ಸಾವನ್ನಪ್ಪುತ್ತಿದ್ದಾರೆ. ದೇಶಾದ್ಯಂತ ಪ್ರತಿ ದಿನ 1 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕೆಲವು ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್, ಇನ್ನೂ ಕೆಲವು ರಾಜ್ಯಗಳಲ್ಲಿ ಸೆಮಿ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರು ವಿನಾಕಾರಣ ಮನೆಯಿಂದ ಹೊರ ಬರುವುದನ್ನು ನಿರ್ಬಂಧಿಸಲಾಗಿದೆ.

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಗಳು ಪೊಲೀಸರಿಗೆ ಸೂಚನೆ ನೀಡಿವೆ. ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಜನರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಪೊಲೀಸರು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹೊರಬರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ಕೆಲವೊಮ್ಮೆ ದಂಡವನ್ನು ವಿಧಿಸುತ್ತಿದ್ದಾರೆ. ಈಗ ಪೊಲೀಸರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ರಾಜಕೀಯ ಮುಖಂಡರೊಬ್ಬರಿಗೆ ರೂ.11,000ಗಳ ದಂಡ ವಿಧಿಸಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ನಡೆದಿರುವುದು ಉತ್ತರ ಭಾರತದಲ್ಲಿ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ತನ್ನನ್ನು ಅಡ್ಡ ಗಟ್ಟಿದ ಪೊಲೀಸರಿಗೆ ಆ ವ್ಯಕ್ತಿ ತಾನೊಬ್ಬ ರಾಜಕೀಯ ಪಕ್ಷದ ಮುಖಂಡನೆಂದು ಪರಿಚಯಿಸಿಕೊಂಡಿದ್ದಾನೆ. ಪೊಲೀಸರು ಅಡ್ಡಗಟ್ಟಿದಾಗ ಆ ವ್ಯಕ್ತಿಫೇಸ್ ಮಾಸ್ಕ್ ಆಗಲಿ ಅಥವಾ ಹೆಲ್ಮೆಟ್ ಆಗಲು ಧರಿಸಿರಲಿಲ್ಲ.

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ಇದರ ಜೊತೆಗೆ ಆ ವ್ಯಕ್ತಿ ಚಾಲನೆ ಮಾಡುತ್ತಿದ್ದ ವಾಹನದಲ್ಲಿ ಮುರಿದ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು. ಆ ವಾಹನದ ಕೇವಲ ನಾಲ್ಕು ಅಂಕಿಗಳು ಮಾತ್ರ ನಂಬರ್ ಪ್ಲೇಟ್'ನಲ್ಲಿ ಗೋಚರಿಸುತ್ತಿದ್ದವು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಆ ರಾಜಕೀಯ ಮುಖಂಡನಿಗೆ ಪೊಲೀಸರು ಒಟ್ಟು ರೂ.11,000 ದಂಡ ವಿಧಿಸಿದ್ದಾರೆ. ಈ ವೇಳೆ ಆ ರಾಜಕೀಯ ಮುಖಂಡ ಪೊಲೀಸರಿಗೆ ಧಮಕಿ ಹಾಕಿದ್ದಾನೆ.

ನಿಯಮ ಉಲ್ಲಂಘಿಸಿ ಭಾರೀ ಪ್ರಮಾಣದ ದಂಡ ತೆತ್ತ ರಾಜಕೀಯ ಮುಖಂಡ

ಪೊಲೀಸರು ದಂಡ ವಿಧಿಸುವುದರ ಜೊತೆಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ರಾಜಕಾರಣಿಗಳ ವೇಷ ಧರಿಸಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಈ ಘಟನೆ ನಿಜಕ್ಕೂ ದೊಡ್ಡ ಪಾಠವಾಗಿದೆ.

ಚಿತ್ರಕೃಪೆ: ನ್ಯೂಸ್ ಟೈಮ್ಸ್ 24

Most Read Articles

Kannada
English summary
Rs 11000 fine imposed on political leader for not wearing helmet and mask. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X