ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

By Nagaraja

ಸಮುದ್ರದಲ್ಲಿರುವ ನಿರ್ಗಲ್ಲಿಗೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಕಳೆದ ಶತಮಾನದ ಅತಿ ದೊಡ್ಡ 'ಟೈಟಾನಿಕ್' ಹಡಗು ದುರಂತ ಸಂಭವಿಸಿರುವುದು ಈಗ ಇತಿಹಾಸ. ಸಾಗರೋದ್ಯಮದಲ್ಲಿ ಆಗಲೇ ಬಲಶಾಲಿಯಾಗಿರುವ ರಷ್ಯಾ ಸರಿ ಸುಮಾರು ಅರ್ಧ ಶತಮಾನದಷ್ಟು ಬಳಿಕ ನೀರ್ಗಲ್ಲನೇ ಒಡೆಯಬಲ್ಲ ಶಕ್ತಿಶಾಲಿ ಹಡಗನ್ನು ನಿರ್ಮಿಸಿದೆ.

ಸಾಗರೋದ್ಯಮದಲ್ಲಿ ರಷ್ಯಾ ನಿರ್ಮಿಸಿರುವ ನೂತನ 'ಇಲ್ಯಾ ಮುರೊಮೆಟ್ಸ್' ಮಿಲಿಟರಿ ಐಸ್ ಬ್ರೇಕರ್ ಹಡಗು, ಅಮೆರಿಕ ಹಾಗೂ ಚೀನಾ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಇಂತಹದೊಂದು ಯೋಜನೆಯನ್ನು ಅಮೆರಿಕ ಹೊಂದಿರುವ ನಡುವೆ ರಷ್ಯಾ ತನ್ನ ಶಕ್ತಿಯನ್ನು ಮೆರೆದಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

12,000 ನಾವಿಕ ಮೈಲು ದೂರ ವ್ಯಾಪ್ತಿಯ ವರೆಗೂ ಕಾರ್ಯಾಚರಣೆ ನಡೆಸಬಲ್ಲ ರಷ್ಯಾದ ಹಡಗು ಎಷ್ಟೇ ದಪ್ಪವಾದ ಮಂಜುಗಡ್ಡೆಗಳನ್ನು ಒಡೆಯುವಷ್ಟು ಶಕ್ತವಾಗಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

2016 ಜೂನ್ 10ರಂದು ಸೈಂಟ್ ಪೀಟರ್ಸ್ ಬರ್ಗ್ ನಲ್ಲಿ ಲೋಕಾರ್ಪಣೆಯಾಗಿರುವ ನೂತನ ಹಡಗು 2017ರ ವೇಳೆಯಾಗುವಾಗ ರಷ್ಯಾ ನೌಕಾದಳವನ್ನು ಸೇರ್ಪಡೆಗೊಳ್ಳಲಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

ಮುಂದಿನ ಕೆಲವು ವರ್ಷಗಳಲ್ಲಿ ಮತ್ತಷ್ಟು ನೀರ್ಗಲ್ಲು ಒಡೆಯುವ ಹಡಗನ್ನು ನಿರ್ಮಿಸುವುದು ರಷ್ಯಾ ಉದ್ದೇಶವಾಗಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

ಆರ್ಕಟಿಕ್ ಸಮುದ್ರ ವಲಯದಲ್ಲೂ ಕಾರ್ಯಾಚರಣೆ ನಡೆಸುವುದು ರಷ್ಯಾ ಗುರಿಯಾಗಿದೆ. ಇದುವೇ ಅಮೆರಿಕದ ಅವಕೃಪೆಗೊಳಗಾಗಲು ಕಾರಣವಾಗಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

ಆರ್ಕಟಿಕ್ ಸಮುದ್ರ ವಲಯದಲ್ಲಿ ಸಾರಿಗೆ ಮತ್ತು ಶಕ್ತಿ ಉತ್ಪಾದನೆ ಮೂಲಸೌಕರ್ಯದ ಜೊತೆಗೆ ಮಿಲಿಟರಿ ಕೇಂದ್ರವನ್ನಾಗಿ ಪರಿವರ್ತಿಸುವುದು ರಷ್ಯಾ ಇರಾದೆಯಾಗಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

ಅಲ್ಲದೆ ಈ ಮಾರ್ಗವಾಗಿ ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ನೂತನ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಹೊಂದಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

ಡಿಸೆಲ್ ಎಲೆಕ್ಟ್ರಿಕ್ ಎಂಜಿನ್ ನಿಯಂತ್ರಿತ ನೀರ್ಗಲ್ಲು ಒಡೆಯುವ ಹಡಗು ಅತ್ಯಂತ ಶಕ್ತಿಶಾಲಿ ಹಡಗುಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ನೀರ್ಗಲ್ಲನ್ನೇ ಒಡೆಯುವ ಬಲಿಷ್ಠ ಹಡಗು; ರಷ್ಯಾಗೆ ಆನೆ ಬಲ

ಒಟ್ಟಿನಲ್ಲಿ ನೀರ್ಗಲ್ಲು ಒಡೆಯುವ ಬಲಿಷ್ಠ ಹಡಗಿನ ಪ್ರವೇಶದೊಂದಿಗೆ ರಷ್ಯಾಗೆ ಆನೆ ಬಲ ಬಂದಂತಾಗಿದೆ.

More from DriveSpark

Article Published On: Tuesday, June 21, 2016, 13:49 [IST]
English summary
Russia's first military icebreaker Ilya Muromets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+