ತುಕ್ಕು ಹಿಡಿದಿದ್ದ ಟೊಯೋಟಾ ಕ್ವಾಲಿಸ್‌ಗೆ ಮರುಜೀವ: ಇನ್ನೋವಾಗೆ ಸೆಡ್ಡುಹೊಡೆಯುವಂತಹ ಇಂಟೀರಿಯರ್
ಭಾರತದಲ್ಲಿ ಟೊಯೋಟಾದವರ ಮೊದಲ ಉತ್ಪನ್ನವೆಂದರೆ ಕ್ವಾಲಿಸ್ MPV, ಇದು 2000 ರಿಂದ 2004 ರವರೆಗೆ ಲಭ್ಯವಿತ್ತು. ನಂತರ ಇದರ ಜಾಗವನ್ನು ತುಂಬಲು ಸೂಪರ್‌ಹಿಟ್ ಉತ್ಪನ್ನವಾದ ಇನ್ನೋವಾವನ್ನು ತರಲಾಯಿತು. ಈಗಲೂ Toyota Qualis ಅಲ್ಲಲ್ಲಿ ಕಾಣಿಸಿಕೊಂಡರೂ ಉತ್ತಮವಾಗಿ ನಿರ್ವಹಿಸಲಾದ ಕ್ವಾಲಿಸ್ ಅನ್ನು ಕಂಡುಹಿಡಿಯುವುದು ತುಂಬಾ ಕಷ್ಟ.
ಆದರೆ ಇದೀಗ ನಾವು ಇಲ್ಲಿ ನೀಡಿರುವ ಈ ವೀಡಿಯೊದಲ್ಲಿ, ತುಕ್ಕು ಹಿಡಿದ ಹಳೆಯ Toyota Qualis ಅನ್ನು ಅಚ್ಚುಕಟ್ಟಾಗಿ ಮಾಡಿಫೈಗೊಳಿಸಿ ಅದರ ಗತವೈಭವಕ್ಕೆ ತರಲಾಗಿದೆ. ಈ ಕುರಿತ ವೀಡಿಯೊವನ್ನು PVT ಆಟೋಕಾನ್ಸೆಪ್ಟ್ ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದೆ. ಮಾಡಿಫೈಗಾಗಿ ಬಂದ ಹಳೆಯ ಕ್ವಾಲಿಸ್ ದೇಹದ ಮೇಲೆ ಒಂದೆರಡು ಡೆಂಟ್‌ಗಳು ಮತ್ತು ಪ್ಯಾಚ್‌ವರ್ಕ್‌ಗಳು ಇದ್ದವು.

ಉಳಿದಂತೆ ಹೊರನೋಟಕ್ಕೆ ಎಲ್ಲವೂ ಉತ್ತಮವಾಗಿ ಕಾಣುತ್ತದೆಯಾದರೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಒಳಭಾಗ ಸಂಪೂರ್ಣವಾಗಿ ತುಕ್ಕು ಹಿಡಿದಿತ್ತು. ಮಾಡಿಫೈ ಮಾಡಿ ಉತ್ತಮ ನೋಟ ನೀಡಲು, ಸೀಟ್‌ಗಳು ಮತ್ತು ಇತರ ಟ್ರಿಮ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಬಳಿಕ ಪರಿಶೀಲಿಸಿದಾಗ, ಎಂಪಿವಿಯ ರೂಫ್‌ನಲ್ಲಿಯೂ ಹಲವು ತುಕ್ಕು ಹಿಡಿದ ರಂಧ್ರಗಳಿರುವುದು ಬಹಿರಂಗವಾಯಿತು.
ಕಾರನಿಂದ ಎಲ್ಲವನ್ನು ಸಂಪೂರ್ಣವಾಗಿ ಹೊರತೆಗೆದ ನಂತರ, ಅದರ ಕೆಲಸ ಪ್ರಾರಂಭಿಸಿದರು. ತುಕ್ಕು ಹೊಂದಿರುವ ಎಲ್ಲಾ ಪ್ಯಾನಲ್‌ಗಳನ್ನು ಗುರುತಿಸಿ ಆ ಭಾಗಗಳನ್ನು ಕತ್ತರಿಸಲಾಯಿತು. ನಂತರ, ಒಂದು ಉತ್ತಮ ನೋಟವನ್ನು ನೀಡಲು ಹೊಸ ಕಬ್ಬಿಣದ ತುಂಡನ್ನು ಬೇಸ್‌ಗೆ ಹಾಕಲಾಯಿತು. ಬಹುತೇಕ ಎಲ್ಲಾ ತುಕ್ಕು ಹಿಡಿದ ಪ್ಯಾನಲ್‌ಗಳಿಗೆ ಇದೇ ರೀತಿ ಮಾಡಲಾಯಿತು.

ಮೊದಲೇ ಹೇಳಿದಂತೆ, ಈ ಮಾಡಿಫೈ ಕಾರ್ಯಕ್ಕಾಗಿ ಕಾರಿನಿಂದ ಸಂಪೂರ್ಣವಾಗಿ ಎಲ್ಲವನ್ನೂ ತೆಗೆದುಹಾಕಲಾಯಿತು. ನಂತರ, ಪೇಂಟ್ ಕೆಲಸಕ್ಕಾಗಿ ಬೇಸ್ ಅನ್ನು ತಯಾರಿಸಲು ಕಾರಿನ ಮೇಲಿನ ಮೂಲ ಬಣ್ಣ ಮತ್ತು ಪುಟ್ಟಿಯನ್ನು ಕೆಡವಿ, ಕೆಲವು ಪ್ಯಾನೆಲ್‌ಗಳನ್ನು ಸಮವಾಗಿ ಪೂರ್ಣಗೊಳಿಸಲು ಮತ್ತೆ ಪುಟ್ಟಿ ಹಾಕಲಾಯಿತು. ಸೀಲಾಂಟ್‌ಗಳನ್ನು ಹೊಸದಾಗಿ ಬೆಸುಗೆ ಹಾಕಿದ ಪ್ಯಾನಲ್‌ಗಳಿಗೆ ಅನ್ವಯಿಸಲಾಯಿತು.
ಬಾಡಿವರ್ಕ್ ಮುಗಿದ ನಂತರ, ಕಾರನ್ನು ಪೇಂಟ್ ಕೆಲಸಕ್ಕಾಗಿ ಸಿದ್ಧಪಡಿಸಲಾಯಿತು. ಪ್ರೈಮರ್ ಅನ್ನು ಇಡೀ ಕಾರಿಗೆ ಅನ್ವಯಿಸಲಾಯಿತು, ನಂತರ MPV ಅನ್ನು ಮೊದಲಿನಂತೆಯೇ ಅದೇ ಕೆಂಪು ಬಣ್ಣದಲ್ಲಿ ಪೇಂಟ್ ಮಾಡಲಾಯಿತು. ಪ್ಯಾನ್‌ಗಳನ್ನು ಈ ಸುಂದರವಾದ ಕೆಂಪು ಬಣ್ಣದಲ್ಲಿ ಮತ್ತು ಸ್ಪಷ್ಟವಾದ ಕೋಟ್ ಅನ್ನು ಸಹ ಅನ್ವಯಿಸಿ ಬಣ್ಣವು ಸಂಪೂರ್ಣವಾಗಿ ಒಣಗಿದ ನಂತರ ಮುಖ್ಯ ಕೋರ್ಸ್ ಆರಂಭಿಸಿದರು.

ಅಂದರೆ ಕ್ರೋಮ್ ಗ್ರಿಲ್, ಹೊಸ ಹೆಡ್‌ಲ್ಯಾಂಪ್‌ಗಳು, ಫೆಂಡರ್‌ಗಳಲ್ಲಿ ಕ್ವಾಲಿಸ್ ಬ್ಯಾಡ್ಜ್, ಹೊಸ ORVM ಗಳು ಮುಂತಾದ ಎಲ್ಲಾವನ್ನು ಹಾಕಿದರು. ಕ್ವಾಲಿಸ್‌ನ ಒಳಭಾಗವನ್ನು ಸಹ ಕಸ್ಟಮೈಸ್ ಮಾಡಲಾಗಿದ್ದು, ಕಾರನ್ನು ಡ್ಯುಯಲ್ ಟೋನ್ ನಲ್ಲಿ ಚಿತ್ರಿಸಲಾಗಿದೆ. ಮುಖ್ಯವಾಗಿ ಆಫ್ಟರ್‌ಮಾರ್ಕೆಟ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಅಳವಡಿಸಿ ಅದ್ಭುತ ಲುಕ್ ನೀಡಿದ್ದಾರೆ.
ಆದರೆ ಡ್ಯಾಶ್‌ಬೋರ್ಡ್‌ನ ಉಳಿದ ಭಾಗವು ಸ್ಟಾಕ್ ಆಗಿ ಉಳಿದಿದೆ. ಡೋರ್ ಪ್ಯಾಡ್‌ಗಳೆಲ್ಲವೂ ಕೆಂಪು ಬಣ್ಣದ ಲೆಥೆರೆಟ್‌ನಿಂದ ಮುಚ್ಚಲ್ಪಟ್ಟಿವೆ. ಸೀಟ್ ಕವರ್‌ಗಳು ಕಸ್ಟಮ್-ನಿರ್ಮಿತವಾಗಿದ್ದು ಅತ್ಯಂತ ಸ್ವಚ್ಛವಾಗಿ ಕಾಣುತ್ತವೆ. ವೀಲ್‌ಗಳು ಸ್ಟಾಕ್ ಆಗಿದ್ದು, ವೀಲ್ ಕ್ಯಾಪ್‌ಗಳು ಅದ್ಬುತವಾಗಿ ಕಾಣುತ್ತವೆ. ಕಾರಿನಲ್ಲಿದ್ದ ಸ್ಟೀರಿಂಗ್ ವೀಲ್ ಹಾಗೂ ಇತರೆ ಕೆಲಸಗಳನ್ನು ಹಾಗೆಯೇ ಬಿಡಲಾಗಿತ್ತು.

ಒಟ್ಟಾರೆ ತುಕ್ಕು ಹಿಡಿದಿದ್ದ ಹಳೆಯ ಕ್ವಾಲಿಸ್ ಅನ್ನು ಈಗಷ್ಟೇ ಶೋರೂಂನಿಂದ ಹೊರಬಂದ ಕಾರಿನಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಏನೇ ಹೇಳಿ ನಮಗೆ ಆಗಾಗ್ಗೆ ರಸ್ತೆಯಲ್ಲಿ ಕಾಣುವ ಕ್ವಾಲಿಸ್ ಕಾರುಗಳು ಹಳೆಯದಾಗಿರುವ ಕಾರಣ ಅಷ್ಟೇನು ಚಂದವಾಗಿ ಕಾಣುವುದಿಲ್ಲ. ಆದ್ರೆ ಈ ವಾಹನ ಮಾಡಿಫೈಗೊಂಡ ಬಳಿಕ ಎಂಥವರನ್ನೂ ಸೆಳೆಯುತ್ತಿದೆ. ಒಮ್ಮೆ ಊಹಿಸಿ ಈ ಎಂಪಿವಿ ಅಂದಿನ ಕಾಲದಲ್ಲಿ ಬಿಡುಗಡೆಯಾದಾಗ ಎಷ್ಟು ಸದ್ದು ಮಾಡಿರಬಹುದು.


Click it and Unblock the Notifications