ಏಕ ಚಕ್ರದ ರಥ - ರೈನೋ ಯುನಿಸೈಕಲ್

ಇಲ್ಲೊಂದು ವಿಶಿಷ್ಟ ರೀತಿಯ ವಾಹನವಿದೆ ನೋಡಿ. ಮೊದಲ ನೋಟಕ್ಕೆ ಇದು ಯಾರೋ ಮೋಟಾರುಸೈಕಲನ್ನು ಮಡಚಿರಬಹುದೇನೋ ಎಂಬ ಭಾವನೆ ಹುಟ್ಟಿಸಬಹುದು. ಆದರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಇದು ರೈನೋ ಯುನಿಸೈಕಲ್‌ (Ryno Unicycle) ನಿರ್ಮಿಸಿರುವ ಅತಿ ವಿಶಿಷ್ಟ ರೀತಿಯ ಮೈಕ್ರೋಸೈಕಲ್ ಆಗಿದೆ.

ಈ ಏಕ ಚಕ್ರದ ರಥದಲ್ಲಿ ಒಬ್ಬ ಪ್ರಯಾಣಿಕರಿಗೆ ಮಾತ್ರ ಚಲಿಸಬಹುದಾಗಿದೆ. ಇದು ಸಂಪೂರ್ಣ ಪರಿಸರ ಸ್ನೇಹಿ ಆಗಿರಲಿದ್ದು, ವಿದ್ಯುನ್ಮಾನವಾಗಿ ನಿಯಂತ್ರಿಸಲ್ಪಡಲಿದೆ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ವಿನ್ಯಾಸವನ್ನು ಗಮನಿಸಿದರೆ ಇದರ ಸುರಕ್ಷತೆ ಬಗ್ಗೆ ಅನುಮಾನಗಳು ಮೂಡುವುದಾದರೂ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂಬುದು ಸಂಸ್ಥೆಯ ಮಾತಾಗಿದೆ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ಇದು ಸಾಮಾನ್ಯ ಮೋಟಾರುಗಸೈಕಲುಗಳಲ್ಲಿ ಇರುವಂತಹ ಹ್ಯಾಂಡಲ್ ಬಾರ್ ಹೊಂದಿದೆ. ಹಾಗಿದ್ದರೂ ಸಣ್ಣ ಫ್ರೇಮ್ ಲಗತ್ತಿಸಲಾಗಿದೆ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ಅಷ್ಟೇ ಅಲ್ಲದೆ ಸಣ್ಣ ಪ್ರಮಾಣದ ಸಾಮಾಗ್ರಿಗಳನ್ನು ಹೊತ್ಯೊಯ್ಯುವ ಸಾಮರ್ಥ್ಯವನ್ನು ರೈನೋ ಹೊಂದಿರುತ್ತದೆ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ನಗರ ಪ್ರದೇಶದ ವಾಹನ ದಟ್ಟಣೆಯಿಂದಾಗಿ ಬೇಸತ್ತು ಹೋಗಿರುವ ಜನರಿಗೆ ರೈನೋ ಮೋಟಾರುಸೈಕಲ್ ಅತ್ಯುತ್ತಮ ಬದಲಿ ವ್ಯವಸ್ಥೆಯಾಗಿರಲಿದೆ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ಇದನ್ನು ನೀವು ಬಯಸಿದ ದಿಕ್ಕಿಗೆ ಅತಿ ಸುಲಭದಲ್ಲಿ ತಿರುಗಿಸಬಹುದಾಗಿದೆ. ಹಾಗೆಯೇ ಪಾರ್ಕಿಂಗ್ ಸಮಸ್ಯೆ ಕೂಡಾ ಇರುವುದಿಲ್ಲ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ಹಾಗೆಯೇ ಝಿರೋ ಡಿಗ್ರಿ ಟರ್ನಿಂಗ್ ರೇಡಿಯಸ್ ಹೊಂದಿರುವುದು ಮಗದೊಂದು ಪ್ರಮುಖ ಫೀಚರ್ ಆಗಿರಲಿದೆ. ಆದರೆ ಈ ಮೈಕ್ರೋಸೈಕಲ್‌ಗೆ ಕಾನೂನು ಮಾನ್ಯತೆ ಸಿಕ್ಕಿದೆಯೇ ಎಂಬುದು ತಿಳಿದು ಬಂದಿಲ್ಲ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ಅಲ್ಲದೆ ಇಂಟೆಗ್ರೇಟಡ್ ಶಾಕ್ ಅಬ್ಸಾರ್ಬರ್, ಹೊಂದಾಣಿಸಬಹುದಾದ ಸೀಟು ಎತ್ತರ, ಎಲ್‌ಇಡಿ ಹೈಡ್‌ಲೈಟ್, ಎರಡು ಎಸ್‌ಎಲ್‌ಎ ಬ್ಯಾಟರಿ (6 ತಾಸು ಚಾರ್ಜ್), ಓನ್ ಬೋರ್ಡ್ ಮಾಹಿತಿ ಪರದೆಗಳಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಏಕ ಚಕ್ರದ ರಥ - ರೈನೋ ಯುನಿಸೈಕಲ್

ಅಂದ ಹಾಗೆ ನೀವು ಕೂಡಾ ರೈನೋ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುವುದಾದ್ದಲ್ಲಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬೇಕಾಗಿದೆ. ಇದು ಭಾರತೀಯ ರುಪಾಯಿ ಪ್ರಕಾರ ಮೂರು ಲಕ್ಷ ರು.ಗಿಂತಲೂ ದುಬಾರಿಯೆನಿಸಲಿದೆ.

ನೋಡಿ ಆಕರ್ಷಕ ವೀಡಿಯೋ

More from DriveSpark

Article Published On: Tuesday, February 25, 2014, 10:17 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+